bredcrumb

ಪತ್ನಿ ರಾಧಿಕಾ ಪಂಡಿತ್, ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಯಶ್; ರಾಕಿಂಗ್ ಕಪಲ್ ಎಂದ ಫ್ಯಾನ್ಸ್

By Muralidhar S
| Published: Friday, November 1, 2024, 23:31 [IST]

ದೀಪಾವಳಿ ಹಬ್ಬವನ್ನು ಎಲ್ಲೆಡೆ ಕಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಲ್ಲೂ ಈ ಸಂಭ್ರಮ ಮುಗಿಲು ಮುಟ್ಟಿದೆ. ತಾರೆಯರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ರಾಧಿಕಾ ಪಂಡಿತ್ ಹಾಗೂ ಯಶ್ ಕೂಡ ಬೆಳಕಿನ ಹಬ್ಬದ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದಾರೆ. 

Yash Radhika Pandit Diwali
1/6

ದೀಪಾವಳಿ ಹಬ್ಬವನ್ನು ಎಲ್ಲೆಡೆ ಕಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಲ್ಲೂ ಈ ಸಂಭ್ರಮ ಮುಗಿಲು ಮುಟ್ಟಿದೆ. ತಾರೆಯರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ರಾಧಿಕಾ ಪಂಡಿತ್ ಹಾಗೂ ಯಶ್ ಕೂಡ ಬೆಳಕಿನ ಹಬ್ಬದ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದಾರೆ.
Yash Radhika Pandit Diwali
2/6

'ಕೆಜಿಎಫ್ 2' ಬಳಿಕ 'ಟಾಕ್ಸಿಕ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ, ಕುಟುಂಬಕ್ಕೆ ಸದಾ ಸಮಯ ಮೀಸಲಿಡುತ್ತಾರೆ. ಬೆಳಕಿನ ಹಬ್ಬದ ಈ ಸಂಭ್ರಮದಲ್ಲಿ ರಾಕಿ ಭಾಯ್ ಪತ್ನಿ ರಾಧಿಕಾ ಪಂಡಿತ್ ಹಾಗೂ ಇಬ್ಬರು ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಆ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
Yash Radhika Pandit Diwali
3/6

ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಹಬ್ಬ ಹರಿದಿನಗಳನ್ನು ಜೋರಾಗಿಯೇ ಆಚರಣೆ ಮಾಡುತ್ತಾರೆ. ಬೆಳಕಿನ ಹಬ್ಬದ ಸಂಭ್ರಮ ಕೂಡ ಜೋರಾಗಿಯೇ ಇದೆ. ಪುತ್ರ ಯಥರ್ವ್‌ ಹಾಗೂ ಪುತ್ರಿ ಐರಾ ಜೊತೆಗೆ ಹಬ್ಬವನ್ನು ಆಚರಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಯಶ್ ಫ್ಯಾಮಿಲಿಮ್ಯಾನ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
Yash Radhika Pandit Diwali
4/6

ಈ ಫೋಟೋದಲ್ಲಿ ಮಗಳು ಐರಾ ಹಾಗೂ ಪುತ್ರ ಯಥರ್ವ್ ಜೊತೆ ಯಶ್ ಹಾಗೂ ರಾಧಿಕಾ ಇಬ್ಬರೂ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಹಾಗೇ ತಮ್ಮ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ದೀಪಾವಳಿ ಹಬ್ಬದ ಶುಭಾಶಗಳನ್ನು ತಿಳಿಸಿದ್ದಾರೆ.
Yash Radhika Pandit Diwali
5/6

ಪ್ರೀತಿ, ಬೆಳಕು ಹಾಗೂ ಒಗಟ್ಟನ್ನು ಈ ದೀಪಾವಳಿಯಂದು ಆಚರಿಸೋಣ. ನಮ್ಮ ಫ್ಯಾಮಿಲಿಯಿಂದ ನಿಮ್ಮ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು. ಈ ಬಾರಿ ದೀಪಾವಳಿ ಹಬ್ಬವು ನಿಮಗೆ ಖುಷಿ ಹಾಗೂ ಸಂತೋಷವನ್ನು ನೀಡಲಿ ಎಂದು ಫೋಟೋಗಳನ್ನು ಹಂಚಿಕೊಂಡು ಶೇರ್ ಮಾಡಿದ್ದಾರೆ.
Yash Radhika Pandit Diwali
6/6

ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಈ ಜೋಡಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೇ ರಾಧಿಕಾ ಪಂಡಿತ್‌ಗೆ ಮತ್ತೆ ಸಿನಿಮಾದಲ್ಲಿ ನಟಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು 'ಟಾಕ್ಸಿಕ್' ಸಿನಿಮಾ ಯಾವಾಗ ಬೇಗ ತೋರಿಸಿ ಎಂದು ಹೇಳುತ್ತಿದ್ದಾರೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+