By
Narayan
| Published: Wednesday, November 27, 2024, 19:32 [IST]
ಬಘೀರ, ಭೈರತಿ ರಣಗಲ್ ಸಿನಿಮಾಗಳಲ್ಲಿ ನಟಿಸಿದ ರುಕ್ಮಿಣಿ ವಸಂತ್ ಮೋಡಿ ಮಾಡಿದ್ದಾರೆ. ನಿಧಾನವಾಗಿ ತೆಲುಗು, ತಮಿಳಿನಿಂದ ಹೆಚ್ಚು ಹೆಚ್ಚು ಅವಕಾಶಗಳು ಹುಡುಕಿ ಬರ್ತಿದೆ. ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
1/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html
ಸ್ಯಾಂಡಲ್‌ವುಡ್ ಮಾತ್ರವಲ್ಲ ಪರಭಾಷೆಗಳಲ್ಲಿ ಕೂಡ ರುಕ್ಕು ಕ್ರೇಜ್ ಜೋರಾಗಿದೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳ ಬಳಿಕ ರುಕ್ಮಿಣಿ ನಟಿಸಿದ 3 ಸಿನಿಮಾಗಳು ತೆರೆಗೆ ಬಂದಿವೆ. 'ಬಾನ ದಾರಿಯಲಿ' ಚಿತ್ರದಲ್ಲಿ ಗಣಿಗೆ ಜೋಡಿ ಆಗಿದ್ದರು.
2/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html#photos-1
'ಬಘೀರ' ಚಿತ್ರದಲ್ಲಿ ಶ್ರೀಮುರಳಿಗೆ ಜೋಡಿಯಾಗಿ ನಟಿಸಿದ್ದಾರೆ. ಸದ್ಯ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬಂದಿದ್ದು ಅಭಿಮಾನಿಗಳು ರುಕ್ಮಿಣಿ ಮೋಹ ಪಾಶಕ್ಕೆ ಸಿಲುಕಿದ್ದಾರೆ. ಇನ್ನು 'ಭೈರತಿ ರಣಗಲ್' ಚಿತ್ರದಲ್ಲಿ ಡಾಕ್ಟರ್ ವೈಶಾಲಿ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.
3/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html#photos-2
ತಮಿಳಿನ ಎರಡು ಚಿತ್ರಗಳಲ್ಲಿ ಈಗ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಶಿವಕಾರ್ತಿಕೇಯನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಇದೆಲ್ಲದರ ನಡುವೆ ಮತ್ತೆರಡು ಚಿತ್ರಗಳಿಗೆ ಆಕೆಯ ಹೆಸರು ಕೇಳಿಬರ್ತಿದೆ.
4/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html#photos-3
ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಒಂದು ಸಿನಿಮಾ ಮಾಡ್ತಿದ್ದಾರೆ. ಚಿತ್ರಕ್ಕೆ 'ಡ್ಯ್ರಾಗನ್' ಎಂಬ ಟೈಟಲ್ ಫೈನಲ್ ಆಗುವ ಸಾಧ್ಯತೆ ಇದೆ. ಇದೇ ಚಿತ್ರದಲ್ಲಿ ರುಕ್ಮಿಣಿ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಆಕೆಗೆ ಹಿಂದೆ ಪ್ರಶ್ನೆ ಎದುರಾಗಿತ್ತು.
5/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html#photos-4
ನಾನು ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಆಯ್ಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ರುಕ್ಮಿಣಿ ಹೇಳಿದ್ದರು. ಆದರೆ ಅಂತಹ ಯಾವುದೇ ಚರ್ಚೆ ಆಗಿಲ್ಲ ಎಂದು ಆಕೆ ಹೇಳಿರಲಿಲ್ಲ. ಡಿಸೆಂಬರ್‌ನಲ್ಲಿ 'ಡ್ಯ್ರಾಗನ್' ಚಿತ್ರೀಕರಣದ ಶುರುವಾಗಲಿದೆ. ಆಕೆ ನಾಯಕಿಯಾಗಿ ನಟಿಸೋದು ಪಕ್ಕಾ ಎನ್ನಲಾಗ್ತಿದೆ.
6/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html#photos-5
'ಡ್ಯ್ರಾಗನ್' ಚಿತ್ರಕ್ಕಾಗಿ ಶೀಘ್ರದಲ್ಲೇ ರುಕ್ಮಿಣಿ ಲುಕ್ ಟೆಸ್ಟ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ಈ ಸಿನಿಮಾ ಮುಗಿಯುವರೆಗೆ ಹೊಸ ಚಿತ್ರ ಒಪ್ಪಿಕೊಳ್ಳಬಾರದು ಎನ್ನುವ ಷರತ್ತು ಕೂಡ ಚಿತ್ರತಂಡ ವಿಧಿಸಿದೆ ಅಂತೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೆ ಬರಬೇಕಿದೆ.
7/7
Jr. ಎನ್‌ಟಿಆರ್ ಚಿತ್ರದಲ್ಲಿ ರುಕ್ಮಿಣಿ; ಕಂಡೀಷನ್ ಏನು? | Rukmini Vasanth Confirmed As Female Lead In NTR-Neel Film - Filmibeat Kannada
/photos/rukmini-vasanth-confirmed-as-female-lead-in-ntr-neel-film-fb98372.html#photos-6
ಈಗಾಗಲೇ ಪ್ರಶಾಂತ್ ನೀಲ್ ತೆಲುಗಿನಲ್ಲಿ 'ಸಲಾರ್' ಸಿನಿಮಾ ಮಾಡಿ ಗೆದ್ದಿದ್ದಾರೆ. ಬಳಿಕ ಸೀಕ್ವೆಲ್ ಕೂಡ ಮಾಡುತ್ತಿದ್ದಾರೆ. ನಂತರ 'ಡ್ಯ್ರಾಗನ್' ಸಿನಿಮಾ ಮೂಡಿ ಬರಲಿದೆ. ತಾರಕ್- ನೀಲ್ ಕಾಂಬಿನೇಷನ್ ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ರುಕ್ಮಿಣಿ ನಾಯಕಿ ಆಗಿ ಆಯ್ಕೆ ಆದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ದುಲ್ಕರ್ ಸಲ್ಮಾನ್ ಮುಂದಿನ ಚಿತ್ರಕ್ಕೂ ರುಕ್ಕು ನಾಯಕಿ ಎನ್ನಲಾಗ್ತಿದೆ.