bredcrumb

ಸಾನ್ಯಾ ಏನಿದು ಹೊಸ ವೇಷ?

By Narayana M
| Published: Tuesday, November 12, 2024, 15:06 [IST]

ಕನ್ನಡ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿರುವ ಸಾನ್ಯಾ ಅಯ್ಯರ್ ಹೊಸ ಹೊಸ ಕಥೆಗಳ ಹುಡುಕಾಟದಲ್ಲಿದ್ದಾರೆ. 'ಗೌರಿ' ಚಿತ್ರ ಆಕೆಗೆ ಅಷ್ಟಾಗಿ ಹೆಸರು ತಂದುಕೊಡಲಿಲ್ಲ. ಒಂದೊಳ್ಳೆ ಬ್ರೇಕ್‌ಗಾಗಿ ಆಕೆ ಕಾಯುತ್ತಿದ್ದಾರೆ. ಆಕೆಯ ಹೊಸ ಫೋಟೋಶೂಟ್ ಹಾಟ್ ಟಾಪಿಕ್ ಆಗಿದೆ. 

Saanya iyer's glamorous corporate look photoshoot goes viral
1/7

ನಟಿ ಸಾನ್ಯಾ ಅಯ್ಯರ್ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಒಳ್ಳೆ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಕೂಡ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಡಬ್ಬೂ ರತ್ನಾನಿ ಸ್ಟುಡಿಯೋದಲ್ಲಿ ಫೋಟೊಶೂಟ್ ಮಾಡಿಸಿದ್ದರು.
Saanya iyer's glamorous corporate look photoshoot goes viral
2/7

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬಿಂದಾಸ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಾರೆ. ಸದ್ಯ ಕಾರ್ಪೋರೆಟ್ ಲುಕ್‌ನಲ್ಲಿ ಸ್ಪೆಷಲ್ ಫೋಟೊಶೂಟ್ ಹಂಚಿಕೊಂಡಿದ್ದಾರೆ. ಫೋಟೊಗಳು ವೈರಲ್ ಆಗುತ್ತಿದೆ.
Saanya iyer's glamorous corporate look photoshoot goes viral
3/7

ಗ್ರೇ ಲ್ಯಾಪಲ್ ನೆಕ್ ಕ್ರಾಪ್ಡ್ ಬ್ಲೇಜರ್ ಜೊತೆಗೆ ಅದರ ಮೇಲೆ ಫುಲ್ ಸ್ಲೀವ್ ಬ್ರಾಲೆಟ್ ಧರಿಸಿದ್ದಾರೆ. ಚಿಕ್ಕದೊಂದು ಸ್ಕರ್ಟ್ ತೊಟ್ಟು ಕ್ಯಾಮರಾ ಮುಂದೆ ನಿಂತಿದ್ದಾರೆ. ಹೀಲ್ಸ್, ಕಣ್ಣಿಗೆ ರೀಡಿಂಗ್ ಗ್ಲಾಸ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಒಂದಷ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.
Saanya iyer's glamorous corporate look photoshoot goes viral
4/7

ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಸಾನ್ಯಾ ಹೊಸ ಅವತಾರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆಗಾಗ್ಗೆ ಪ್ರವಾಸಕ್ಕೆ ಹೋಗಿವ ಚೆಲುವೆ ಅದರ ಫೋಟೊ, ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
Saanya iyer's glamorous corporate look photoshoot goes viral
5/7

ಜಿಮ್ ವರ್ಔಟ್, ಡ್ಯಾನ್ಸ್ ಮಾಡುವ ಮೂಲಕ ಫಿಟ್‌ನೆಟ್ ಕಾಯ್ದುಕೊಳ್ಳುತ್ತಿರುವ ಸಾನ್ಯಾ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಕಾಯುತ್ತಿದ್ದಾರೆ. ಒಳ್ಳೆ ಪಾತ್ರಗಳ ತಲಾಶೆಯಲ್ಲಿದ್ದಾರೆ. ಆಕೆ ನಟಿಸಿದ 'ಗೌರಿ' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.
Saanya iyer's glamorous corporate look photoshoot goes viral
6/7

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಸಾನ್ಯಾ ನಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದರು. ಇಂದ್ರಜಿತ್ ಪುತ್ರ ಸಮರ್ಜಿತ್ ಹೀರೊ ಆಗಿ ನಟಿಸಿದ್ದರು. ಆಗಸ್ಟ್ 15ರಂದು ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ಭರ್ಜರಿ ಪ್ರಚಾರ ನಡೆಸಿದರೂ ಪ್ರಯೋಜನವಾಗಲಿಲ್ಲ.
Saanya iyer's glamorous corporate look photoshoot goes viral
7/7

'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಬಾಲನಟಿಯಾಗಿ ಸಾನ್ಯ ನಟಿಸಿದ್ದರು. ಬಳಿಕ ಸಿನಿಮಾಗಳತ್ತ ಮುಖ ಮಾಡಿದ್ದರು. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು. ಓಟಿಟಿ ಸೀಸನ್ ಬಳಿಕ ಟಿವಿ ಸೀಸನ್ 9ರಲ್ಲಿ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದರು.
X