bredcrumb

ಮದುಮಗಳಾಗಿ ಮಿಂಚಿದ ಶೋಭಿತಾ ಧುಲಿಪಾಲ

By Narayan
| Published: Monday, December 2, 2024, 22:37 [IST]

ನಟಿ ಸಮಂತಾಗೆ ಡಿವೋರ್ಸ್ ಕೊಟ್ಟು ದೂರಾದ ನಟ ನಾಗಚೈತನ್ಯಾ ಈಗ ಶೋಭಿತಾ ಜೊತೆ ಮದುವೆ ಆಗುತ್ತಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭವಾಗಿದೆ. ಬಹಳ ಅದ್ಧೂರಿಯಾಗಿಯೇ ಮದುವೆ ಸಮಾರಂಭ ನಡೆಯಲಿದ್ದು ಕೆಲವೇ ಆಪ್ತರಿಗೆ ಆಹ್ವಾನ ನೀಡಲಾಗಿದೆ.

Sobhita Dhulipala bridal look in redsaree goes viral
1/7

ಅಕ್ಕಿನೇನಿ ಕುಟುಂಬದಲ್ಲಿ ಮತ್ತೆ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯಾ ಹಾಗೂ ಶೋಭಿತಾ ಮದುವೆ ಶಾಸ್ತ್ರಗಳು ಶುರುವಾಗಿದೆ. ಡಿಸೆಂಬರ್ 3ರಂದು ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಜೋಡಿ ಹಸೆಮಣೆ ಏರಲಿದೆ. ಇದು ಟಾಲಿವುಡ್‌ನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
Sobhita Dhulipala bridal look in redsaree goes viral
2/7

ನಾಗಚೈತನ್ಯಾ ಹಾಗೂ ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಗೋವಾದಲ್ಲಿ ಕಲ್ಯಾಣೋತ್ಸವ ನಡೆದಿತ್ತು. ಆದರೆ 4 ವರ್ಷಗಳ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಬಳಿಕ ಚೈತು, ಶೋಭಿತಾ ಲವ್ವಲ್ಲಿ ಬಿದ್ದಿದ್ದರು.
Sobhita Dhulipala bridal look in redsaree goes viral
3/7

ಆಗಸ್ಟ್ 8ರಂದು ಚೈತು- ಶೋಭಿತಾ ಮದುವೆ ನಿಶ್ಚಿತಾರ್ಥ ನಡೆದಿತ್ತು. ತಮ್ಮ ಮನೆಯಲ್ಲೇ ಕಾರ್ಯಕ್ರಮ ಮಾಡಿ ಮುಗಿಸಿದ್ದರು. ಇದೀಗ ಮದುವೆ ನಡೆಯುತ್ತಿದೆ. ಮದುಮಗಳಾಗಿ ಶೋಭಿತಾ ಕಂಗೊಳಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Sobhita Dhulipala bridal look in redsaree goes viral
4/7

ಅರಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ಸೇರಿದಂಗೆ ಒಂದಷ್ಟು ಮದುವೆ ಶಾಸ್ತ್ರಗಳು ಈಗಾಗಲೇ ಆರಂಭವಾಗಿದೆ. ಮದುಮಗಳಾಗಿ ಶೋಭಿತಾ ಮಿಂಚುತ್ತಿದ್ದಾರೆ. ಆಪ್ತರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ.
Sobhita Dhulipala bridal look in redsaree goes viral
5/7

ತಮ್ಮದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಾರ್ಜುನ ಮಗನ 2ನೇ ಮದುವೆ ಮಾಡುತ್ತಿದ್ದಾರೆ. ತಾತನ ವಿಗ್ರಹದ ಮುಂದೆ ಚೈತು ಹೊಸಬಾಳಿಗೆ ಕಾಲಿಡಲಿದ್ದಾರೆ. ಈಗಾಗಲೇ ಅತಿಥಿಗಳಿಗೆ ಮದುವೆ ಆಮಂತ್ರಣ ನೀಡಲಾಗಿದೆ. 300-400 ಜನ ಅತಿಥಿಗಳನ್ನ ಆಹ್ವಾನಿಸಲಾಗಿದೆ.
Sobhita Dhulipala bridal look in redsaree goes viral
6/7

ವಿಘ್ನೇಶ್ ಶಿವನ್ ಹಾಗೂ ನಯನತಾರ ತಮ್ಮ ಮದುವೆ ಚಿತ್ರೀಕರಣ ಹಾಗೂ ಪ್ರಸಾರದ ಹಕ್ಕನ್ನು ನೆಟ್‌ಫ್ಲಿಕ್ಸ್‌ಗೆ ಕೊಟ್ಟಿದ್ದರು. ಇದೀಗ ನಾಗಚೈತನ್ಯಾ ಹಾಗೂ ಶೋಭಿತಾ ಕೂಡ ಅದೇ ರೀತಿ ಮಾಡುತ್ತಿದ್ದಾರೆ. ತಮ್ಮ ಮದುವೆಯ ಪ್ರಸಾರ ಹಕ್ಕು ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ.
Sobhita Dhulipala bridal look in redsaree goes viral
7/7

ಆಂಧ್ರದ ತೆನಾಲಿಯ ಬ್ರಾಹ್ಮಣ ಕುಟುಂಬದಲ್ಲಿ ಶೋಭಿತಾ ಹುಟ್ಟಿ ಬೆಳೆದವರು. ಮುಂಬೈನಲ್ಲಿ ಓದಿ ಬೆಳೆದ ಆಕೆ ಬಳಿಕ ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಬಳಿಕ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದರು. ಈಗ ಅಕ್ಕಿನೇನಿ ಫ್ಯಾಮಿಲಿ ಸೊಸೆ ಆಗುತ್ತಿದ್ದಾರೆ.
X