bredcrumb

ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ನಟಿ ನಭಾ ನಟೇಶ್; ಹೇಗಿದೆ ಫೋಟೊಶೂಟ್?

By Muralidhar S
| Published: Monday, May 6, 2024, 22:56 [IST]
ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡದ  ಬ್ಯೂಟಿ ನಭಾ ನಟೇಶ್.  ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿಯೇ ಕಾಣಿಸಿಕೊಂಡಿರುವ ನಟಿಯೀಕೆ. ಕನ್ನಡದ 'ವಜ್ರಕಾಯ' ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಟಿಯೀಕೆ. ಪಟಾಕಿ ಹಾಗೇ ಖಡಕ್ ರೋಲ್‌ನಲ್ಲಿ ಮಿಂಚಿದ ಈ ನಟಿ  ಬಳಿಕ ತೆಲುಗು ಚಿತ್ರರಂಗದ ಕಡೆ ಪಾದಾರ್ಪಣೆ ಮಾಡಿದ್ದರು.
Nabha Natesh Charlie Chaplin photoshoot
1/6

ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಬ್ಯೂಟಿ ನಭಾ ನಟೇಶ್. ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿಯೇ ಕಾಣಿಸಿಕೊಂಡಿರುವ ನಟಿಯೀಕೆ. ಕನ್ನಡದ 'ವಜ್ರಕಾಯ' ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಟಿಯೀಕೆ. ಪಟಾಕಿ ಹಾಗೇ ಖಡಕ್ ರೋಲ್‌ನಲ್ಲಿ ಮಿಂಚಿದ ಈ ನಟಿ ಬಳಿಕ ತೆಲುಗು ಚಿತ್ರರಂಗದ ಕಡೆ ಪಾದಾರ್ಪಣೆ ಮಾಡಿದ್ದರು.
Nabha Natesh Charlie Chaplin photoshoot
2/6

ತೆಲುಗಿನಲ್ಲಿ ನಭಾ ನಟೇಶ್ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ. 'ಸ್ಮಾರ್ಟ್ ಶಂಕರ್' ಸಿನಿಮಾ ನಭಾ ಒಂದೊಳ್ಳೆ ಹೆಸರು ತಂದುಕೊಟ್ಟ ಸಿನಿಮಾ. ಇದೀಗ ಈ ನಟಿ ಚಾರ್ಲಿ ಚಾಪ್ಲಿನ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Nabha Natesh Charlie Chaplin photoshoot
3/6

'ಸ್ಮಾರ್ಟ್ ಶಂಕರ್' ಸಿನಿಮಾ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ನಭಾ ನಟೇಶ್ ತೆಲುಗು ಮಂದಿಗೆ ಚಿರಪರಿಚಿತ. ನಂತರ 'ಡಿಸ್ಕೋ ರಾಜ' ಮತ್ತು 'ಸೋಲೋ ಬ್ರತುಕೆ ಸೋ ಬೆಟರ್' ಸಿನಿಮಾಗಳಲ್ಲಿ ನಟಿಸಿದರು. ಸದ್ಯ ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Nabha Natesh Charlie Chaplin photoshoot
4/6

ನಭಾ ನಟೇಶ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಹಾಸ್ಯನಟ ಚಾರ್ಲಿ ಚಾಪ್ಲಿನ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಬಿಳಿ ಶರ್ಟ್ ಮತ್ತು ಮೇಲೆ ಕಪ್ಪು ಬ್ಲೇಜರ್ ಧರಿಸಿ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಟೋಪಿ ತೊಟ್ಟು ಚಾರ್ಲಿ ಚಾಪ್ಲಿನ್ ಲುಕ್ ಕೊಟ್ಟಿದ್ದಾರೆ.
Nabha Natesh Charlie Chaplin photoshoot
5/6

ನಭಾ ನಟೇಶ್ ಕಾಮಿಡಿ ಲುಕ್‌ನಲ್ಲಿ ಪೋಸ್ ಕೊಟ್ಟು ತಮ್ಮ ಅಭಿಮಾನಿಗಳನ್ನು ನಗಿಸುವುದಕ್ಕೆ ಯತ್ನಿಸಿದ್ದಾರೆ. ಚಾರ್ಲಿ ಚಾಪ್ಲಿನ್‌ನಂತೆ ಕಾಣುವ ನಭಾ ನಟೇಶ್ ಅವರ ಈ ಫೋಟೊಗಳನ್ನು ನೋಡಿದವರು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ.
Nabha Natesh Charlie Chaplin photoshoot
6/6

"ನಭಾ ನಟೇಶ್ ಏನು ಮಾಡಿದರೂ ತುಂಬಾ ಸುಂದರಿ", "ನೀನು ಎಷ್ಟು ಮುದ್ದಾಗಿ ಕಾಣುತ್ತೀಯ ಗೊತ್ತಾ?" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅದೇ ಮತ್ತೆ ಕೆಲವರು "ನೀವೂ ಒಮ್ಮೆ ಈ ಚಾರ್ಲಿ ಚಾಪ್ಲಿನ್ ಫೋಟೋಗಳನ್ನು ನೋಡಿ ಆನಂದಿಸಿ". ಎಂದು ಕಾಮೆಂಟ್ ಮಾಡಿದ್ದಾರೆ.
X