bredcrumb

ಭಾವಿ ಪತಿ ಜೊತೆ ತಮನ್ನಾ ದೀಪಾವಳಿ ಸಂಭ್ರಮ

By Narayan
| Published: Sunday, October 27, 2024, 23:42 [IST]

ಉತ್ತರ ಭಾರತದಲ್ಲಿ ಕೂಡ ದೀಪಾವಳಿ ಸಡಗರ ಜೋರು. ಬಾಲಿವುಡ್‌ ಸೆಲೆಬ್ರೆಟಿಗಳು ಸ್ಪೆಷಲ್ ಪಾರ್ಟಿ ಆಯೋಜಿಸಿ ಹಬ್ಬ ಆಚರಿಸುತ್ತಾರೆ. ಉದ್ಯಮಿಗಳು, ಚಿತ್ರ ನಿರ್ಮಾಪಕರು ತಾರೆಯರನ್ನು ಕರೆಸಿ ಪಾರ್ಟಿ ಮಾಡಿ ಖುಷಿಪಡುತ್ತಾರೆ. ನಿರ್ಮಾಪಕ ರಮೇಶ್ ತೌರಾನಿ ಮನೆ ಹಬ್ಬದ ಸಂಭ್ರಮದಲ್ಲಿ ನಟಿ ತಮನ್ನಾ ಸಹ ಭಾಗಿ ಆಗಿದ್ದರು. 

Tamanna Bhatia attends the Ramesh Taurani's Diwali bash, see pics
1/7

ತಮನ್ನಾ ಹಾಗೂ ವಿಜಯ್ ವರ್ಮಾ ಪ್ರೀತಿಲಿ ಬಿದ್ದಿರುವುದು ಗೊತ್ತೇಯಿದೆ. ಇಬ್ಬರೂ ಈ ಬಗ್ಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಮದುವೆ ಆಗುವ ಲೆಕ್ಕಾಚಾರದಲ್ಲಿದ್ದಾರೆ. ಡಿನ್ನರ್, ಪಾರ್ಟಿ ಎಂದು ಇಬ್ಬರೂ ಆಗಾಗ್ಗೆ ಸುತ್ತಾಡುತ್ತಿರುತ್ತಾರೆ.
Tamanna Bhatia attends the Ramesh Taurani's Diwali bash, see pics
2/7

ಆಂಧ್ರ ಮೂಲದ ನಟ ವಿಜಯ್ ವರ್ಮಾ ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ. ನೆಗೆಟಿವ್ ಶೇಡ್ ರೋಲ್‌ಗಳಲ್ಲಿ ಹೆಚ್ಚು ಮಿಂಚಿದ್ದಾರೆ. ಒಟ್ಟಿಗೆ ಒಂದೇ ವೆಬ್ ಸೀರಿಸ್‌ನಲ್ಲಿ ನಟಿಸುವ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಬಳಿಕ ಒಂದಷ್ಟು ದಿನ ಕದ್ದುಮುಚ್ಚಿ ಓಡಾಡಿದ್ದ ಜೋಡಿ ಬಳಿಕ ಮಾಧ್ಯಮಗಳ ಕಣ್ಣಿಗೆ ಬಿದ್ದಿತ್ತು.
Tamanna Bhatia attends the Ramesh Taurani's Diwali bash, see pics
3/7

ಈಗಾಗಲೇ ಬಿಟೌನ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ ಆರಂಭವಾಗಿದೆ. ಖ್ಯಾತ ನಿರ್ಮಾಪಕರು, ಉದ್ಯಮಿಗಳು ತಾರೆಯರನ್ನು ಮನೆಗೆ ಕರೆಸಿ ಪಾರ್ಟಿ ಕೊಟ್ಟು ಎಂಜಾಯ್ ಮಾಡ್ತಿದ್ಧಾರೆ. ನಿರ್ಮಾಪಕ ರಮೇಶ್ ತೌರಾನಿ ಮನೆ ದೀಪಾವಳಿ ಪಾರ್ಟಿಗೆ ವಿಜಯ್ ವರ್ಮಾ ಜೊತೆ ತಮನ್ನಾ ಸಹ ಹಾಜರಾಗಿದ್ದರು.
Tamanna Bhatia attends the Ramesh Taurani's Diwali bash, see pics
4/7

ಪಿಂಕ್ ಕಲರ್ ಲೆಹಂಗಾದಲ್ಲಿ ಮಿಲ್ಕಿ ಬ್ಯೂಟಿ ಮಿಂಚಿದ್ದಾರೆ. ವಿಜಯ್ ವರ್ಮಾ ಜೊತೆ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಜೋಡಿ ಖುಷಿಪಟ್ಟಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ.
Tamanna Bhatia attends the Ramesh Taurani's Diwali bash, see pics
5/7

ತಮ್ಮ ಪಿಂಕ್ ಕಲರ್ ಲೆಹೆಂಗಾದಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Tamanna Bhatia attends the Ramesh Taurani's Diwali bash, see pics
6/7

ತಮನ್ನಾ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್ಸ್‌ಗೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದಾರೆ. 'ಜೈಲರ್', 'ಅರನ್ಮಣೈ-4' ಮಿಲ್ಕಿ ಬ್ಯೂಟಿ ಬಿಂದಾಸ್ ಡ್ಯಾನ್ಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದರು. 'ಸ್ತ್ರೀ- 2' ಚಿತ್ರದಲ್ಲಿ ಮತ್ತೊಮ್ಮೆ ಮಾದಕವಾಗಿ ಕುಣಿದು ತಮನ್ನಾ ಮೋಡಿ ಮಾಡಿದ್ದರು.
Tamanna Bhatia attends the Ramesh Taurani's Diwali bash, see pics
7/7

ಸದ್ಯ ತೆಲುಗಿನ 'ಓದೆಲಾ-2' ಹಾಗೂ 'ಸಿಕಂದರ್ ಕ ಮುಕ್ದರ್' ಎನ್ನುವ ಒಂದು ಹಿಂದಿ ಚಿತ್ರದಲ್ಲಿ ತಮನ್ನಾ ಬಣ್ಣ ಹಚ್ಚಿದ್ದಾರೆ. ಆಕೆಯ ಕ್ರೇಜ್ ಇತ್ತೀಚೆಗೆ ಕಮ್ಮಿ ಆಗಿದ್ದು ಸ್ಟಾರ್ ನಟರ ಜೊತೆ ನಟಿಸುವ ಅವಕಾಶಗಳು ಅಷ್ಟಾಗಿ ಸಿಗುತ್ತಿಲ್ಲ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+