bredcrumb

ತಿಳಿ ಹಸಿರು ಬಣ್ಣದ ಡ್ರೆಸ್‌ ತೊಟ್ಟು ಗಿಣಿ ಮೂಗಿನ ಸುಂದರಿಯ ವೈಯ್ಯಾರ ಹೇಗಿದೆ ನೋಡಿ

By Kannada Filmibeat Photos
| Published: Tuesday, December 17, 2024, 23:52 [IST]

ಕಾಲಿವುಡ್‌ನ ಯುವ ನಟಿ ಅತುಲ್ಯಾ ರವಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 29 ವರ್ಷದ ಈ ನಟಿ ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿಯೇ ನಟಿಸಿದ್ದು, ಯುವಕರ ಹೃದಯ ಗೆದ್ದ ನಟಿ. ಅಂದ್ಹಾಗೆ 2017ರಲ್ಲಿ ತೆರೆಕಂಡ 'ಕಾದಲ್ ಕನ್ ಕಟ್ಟುದೆ' ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅಲ್ಲಿಂದ ಕಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

Tamil Actress Athulya Ravi photoshoot
1/5

2/5

ಅತುಲ್ಯಾ ರವಿ ಸಿನಿಮಾಗಳ ಜೊತೆಗೆ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಆಗಾಗ ತಾವು ಮಾಡಿಸಿ ಫೋಟೊಶೂಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಒಂದು ಫೋಟೊಶೂಟ್ ಅನ್ನು ಹಂಚಿಕೊಂಡಿದ್ದರು. ಅದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.
Tamil Actress Athulya Ravi photoshoot
3/5

ತಿಲಿ ಹಸಿರು ಬಣ್ಣದ ಡ್ರೆಸ್ ತೊಟ್ಟು ನಾನಾ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ವಿಶೇಷವಾಗಿ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಆಕೆಯ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
Tamil Actress Athulya Ravi photoshoot
4/5

ತಮಿಳು ಚಿತ್ರರಂಗದ ಈ ನಟಿಗೆ ಅಭಿಮಾನಿಗಳೇನು ಕಮ್ಮಿಯಿಲ್ಲ. ಅದರಲ್ಲೂ 2018ರಲ್ಲಿ ತೆರೆಕಂಡ 'ಯೆಮಾಲಿ' ಹಾಗೂ 2019ರಲ್ಲಿ ರಿಲೀಸ್ ಆಗಿದ್ದ 'ನಾಡೋಡಿಗಳ್ 2' ಸಿನಿಮಾ ತೆರೆಕಂಡ ಬಳಿಕವಂತೂ ಈಕೆಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಅಪ್ಪಟ ತಮಿಳು ಹುಡುಗಿಯ ಗ್ಲಾಮರ್‌ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
Tamil Actress Athulya Ravi photoshoot
5/5

ಅಂದ್ಹಾಗೆ ಅತುಲ್ಯಾ ರವಿ ಮೂಲ ಹೆಸರು ದಿವ್ಯಾ. ಸಿನಿಮಾಗೆ ಬಂದ ಬಳಿಕ ಹೆಸರನ್ನು ಬದಲಾಯಿಸಿಕೊಂಡಿದ್ದರು. ತಮಿಳುನಾಡಿನ ಕೊಯಮತ್ತೂರು ಈ ನಟಿಯ ಜನ್ಮ ಸ್ಥಳ. ಈಕೆ ಇಂಜಿನಿಯರಿಂಗ್ ಪದವೀಧರೆ. ಕಿರುಚಿತ್ರದ ಮೂಲಕ ನಟನೆಯನ್ನು ಆರಂಭಿಸಿದ ಅತುಲ್ಯಾ ರವಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
X