bredcrumb

ಗುಂಗುರು ಕೂದಲು.. ಮಾಡರ್ನ್‌ ಡ್ರೆಸ್‌.. ಹುಡುಗರ ಎದೆಗೆ ಕಿಚ್ಚು ಹಚ್ಚಿದ ಈ ನಟಿ ಯಾರು?

By Muralidhar S
| Published: Monday, November 25, 2024, 23:13 [IST]

ಗುಂಗುರು ಕೂದಲು ಇಳಿ ಬಿಟ್ಟು, ಬಿಳಿ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ಈ ಬ್ಯೂಟಿ ಯಾರು ಗೊತ್ತಾ? ತೆಲುಗು ಸಿನಿಪ್ರಿಯರ ಹೃದಯ ಗೆದ್ದಿರುವ ಈ ಸುಂದರಿಯ ಫರಿಯಾ ಅಬ್ದುಲ್ಲಾ. ಟಾಲಿವುಡ್‌ನ ಈ ಯುವ ನಟಿ ತನ್ನ ನಟನೆಯಿಂದ ಸೌಂದರ್ಯದಿಂದಲೇ ಗಮನ ಸೆಳೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಟೋಗಳು ಕಿಕ್ ಕೊಡುತ್ತಿವೆ.

Faria Abdullah White Dress Photos
1/6

ಗುಂಗುರು ಕೂದಲು ಇಳಿ ಬಿಟ್ಟು, ಬಿಳಿ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ಈ ಬ್ಯೂಟಿ ಯಾರು ಗೊತ್ತಾ? ತೆಲುಗು ಸಿನಿಪ್ರಿಯರ ಹೃದಯ ಗೆದ್ದಿರುವ ಈ ಸುಂದರಿಯ ಫರಿಯಾ ಅಬ್ದುಲ್ಲಾ. ಟಾಲಿವುಡ್‌ನ ಈ ಯುವ ನಟಿ ತನ್ನ ನಟನೆಯಿಂದ ಸೌಂದರ್ಯದಿಂದಲೇ ಗಮನ ಸೆಳೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಟೋಗಳು ಕಿಕ್ ಕೊಡುತ್ತಿವೆ.
Faria Abdullah White Dress Photos
2/6

ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಫರಿಯಾ ಅಬ್ದುಲ್ಲಾ ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ನಾಟಕಗಳಲ್ಲಿ ನಟಿಸುತ್ತಿದ್ದರು. ಅಲ್ಲಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಕೇವಲ ಸೌಂದರ್ಯದಿಂದ ಸಿನಿಮಾದ ಅವಕಾಶಗಳನ್ನು ಇವರು ಗಿಟ್ಟಿಸಿಕೊಂಡವರಲ್ಲ.
Faria Abdullah White Dress Photos
3/6

ತೆಲುಗಿನ ಸೂಪರ್ ಹಿಟ್ ಸಿನಿಮಾ 'ಜಾತಿ ರತ್ನಲು' ಈಕೆ ನಟಿಸಿದ ಮೊದಲ ಸಿನಿಮಾ. ಈ ಸಿನಿಮಾ 2021ರಲ್ಲಿ ತೆರೆಕಂಡು ಸದ್ದು ಮಾಡಿತ್ತು. ಮೊದಲ ಸಿನಿಮಾದಲ್ಲಿಯೇ ಸೈಮಾದ ಅತ್ಯುತ್ತಮ ಹೊಸ ಪ್ರತಿಭೆ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. ಅಲ್ಲಿಂದ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Faria Abdullah White Dress Photos
4/6

ಇಲ್ಲಿಂದ ಫರಿಯಾ ಅಬ್ದುಲ್ಲಾ 'ಲೈಕ್, ಶೇರ್ & ಸಬ್‌ಸ್ಕ್ರೈಬ್', 'ರಾವಣಾಸುರ'ದಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳ ಬಳಿಕ ಅವರಿಗೆ ನಾಯಕಿಯ ಪಾತ್ರಗಳು ಸಿಗಲಿಲ್ಲ. 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾ ಚಿಕ್ಕದೊಂದು ರೋಲ್ ಸಿಕ್ಕಿತ್ತು. ಹಾಗೇ ನಾಗಾರ್ಜುನ ನಟಿಸಿದ 'ಬಂಗಾರರಾಜು' ಚಿತ್ರದಲ್ಲಿ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದರು.
Faria Abdullah White Dress Photos
5/6

ಫರಿಯಾ ಅಬ್ದುಲ್ಲಾ ಹಿಂದಿ, ಉರ್ದು ಮಾತಾಡುವ ಕುಟುಂಬದಲ್ಲಿ ಜನಿಸಿದ್ದಾರೆ. ತಂದೆ ಸಂಜಯ್ ಅಬ್ದುಲ್ಲಾ ಹಾಗೂ ತಾಯಿ ಕೌಸರ್ ಸುಲ್ತಾನಾ. ಸಿನಿಮಾಗಾಗಿ ತೆಲುಗು ಭಾಷೆಯನ್ನು ಕಲಿತುಕೊಂಡಿದ್ದಾರೆ. ಈಕೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರದ್ದೇ ಆದ ಅಭಿಮಾನಿಗಳು ಇದ್ದಾರೆ. ಹೀಗಾಗಿ ಆಗಾಗ ಅವರ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಿರುತ್ತಾರೆ.
Faria Abdullah White Dress Photos
6/6

ಫರಿಯಾ ಅಬ್ದುಲ್ಲಾ ಪ್ರಭಾಸ್ ನಟಿಸಿದ್ದ 'ಕಲ್ಕಿ 2898AD' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 'ವಲ್ಲಿ ಮಾಯಿಲ್' ಎನ್ನುವ ತಮಿಳು ಸಿನಿಮಾದಲ್ಲಿ ನಟಿಸಿದ್ದು, ಅದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ.
X