bredcrumb

ಹಳದಿ ಸೀರೆಯುಟ್ಟು ಮಿಂಚಿದ ಮೀನಮ್ಮ; ಹುಡುಗರ ಎದೆಯಲ್ಲಿ ಕಲರವ

By Muralidhar S
| Published: Wednesday, November 6, 2024, 23:30 [IST]

ಮೀನಾಕ್ಷಿ ಚೌಧರಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಸಿರು ಬ್ಲೌಸ್ ಹಾಗೂ ಹಳದಿ ಸೀರೆಯುಟ್ಟು ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೊಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಶೈಲಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

Actress Meenakshi Chaudhary Saree looks
1/6

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಮೀನಾಕ್ಷಿ ಚೌಧರಿ. ಇತ್ತೀಚೆಗೆ ಈ ನಟಿಗೆ ಹೆಚ್ಚೆಚ್ಚು ಆಫರ್‌ಗಳು ಸಿಗುತ್ತಿವೆ. ಅದರಲ್ಲೂ ತೆಲುಗಿನಲ್ಲಿ ಸ್ಟಾರ್ ನಟರೊಂದಿಗ ಎಟಿಸುವ ಅವಕಾಶವನ್ನೂ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಈ ನಟಿ ಆಕ್ಟಿವ್ ಆಗಿದ್ದಾರೆ.
Actress Meenakshi Chaudhary Saree looks
2/6

ಇತ್ತೀಚೆಗೆ ನಟಿಯರೆಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ಫಾಲೋವರ್ಸ್ ಗಮನ ಸೆಳೆಯುವುದಕ್ಕೆ ಆಗಾಗ ಹೊಸ ಹೊಸ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಮೀನಾಕ್ಷಿ ಚೌಧರಿ ಕೂಡ ಇದರಿಂದ ಹೊರತಾಗಿಲ್ಲ. ಇತ್ತೀಚೆಗೆ ಹಳದಿ ಸೀರೆಯುಟ್ಟು ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು.
Actress Meenakshi Chaudhary Saree looks
3/6

ಮೀನಾಕ್ಷಿ ಚೌಧರಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಸಿರು ಬ್ಲೌಸ್ ಹಾಗೂ ಹಳದಿ ಸೀರೆಯುಟ್ಟು ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೊಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಶೈಲಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Actress Meenakshi Chaudhary Saree looks
4/6

ಅಂದ್ಹಾಗೆ ಮೀನಾಕ್ಷಿ ಚೌಧರಿ ಮೂಲತ: ಹರಿಯಾಣದವರು. ಇವರ ತಂದೆ ದಿವಂಗತ ಬಿಆರ್ ಚೌಧರಿ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದವರು. ಹೀಗಾಗ ಮೀನಾಕ್ಷಿ ರಫ್ ಅಂಡ್ ಟಫ್. ಅಷ್ಟೇ ಅಲ್ಲ. ಈಕೆ ಕ್ರೀಡಾಪಟು ಕೂಡ ಹೌದು. ಮಾಡಲಿಂಗ್, ಸಿನಿಮಾ ಅಂತ ಕಾಲಿಡುವುದಕ್ಕೂ ಮುನ್ನ ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು.
Actress Meenakshi Chaudhary Saree looks
5/6

ಮೀನಾಕ್ಷಿ ಚೌಧರಿ ರಾಜ್ಯ ಮಟ್ಟದ ಸ್ವಿಮ್ಮರ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ. ಹಾಗೇ ಶಿಕ್ಷಣದಲ್ಲೇನು ಕಮ್ಮಿಯಿಲ್ಲ. ಮಿಲಿಟರಿ ಕುಟುಂಬದಿಂದ ಬಂದವರಾಗಿದ್ದರಿಂದ ಶಿಕ್ಷಣದಲ್ಲಿ ಹಿಂದೆ ಬಿದ್ದಿಲ್ಲ. ಈಕೆ 2017ರಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸ್‌ ಮುಗಿಸಿದ್ದಾರೆ.
Actress Meenakshi Chaudhary Saree looks
6/6

ಮೀನಾಕ್ಷಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಿಗೆ ರಾಯಬಾರಿಯಾಗಿದ್ದರು. ಅಲ್ಲಿ ಅವರನ್ನು ಗುರುತಿಸಿದ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಇದೇ ವೇಳೆ ತೆಲುಗಿನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
X