bredcrumb

ಡಿಸೆಂಬರ್ 14 ರಿಂದ ಜೀ಼ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಲಿದೆ ಸರಿಗಮಪ ಅಲೆ

By Kannada Filmibeat Photos
| Published: Thursday, December 12, 2024, 22:50 [IST]

ಕನ್ನಡದ ಕಿರುತೆರೆ ಇತಿಹಾಸದಲ್ಲಿ ಅತೀ ಹೆಚ್ಚು ಸೀಸನ್‌ಗಳನ್ನು ಕಂಡ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ. ಜೀ ಕನ್ನಡದಲ್ಲಿ ಪ್ರತಿ ವರ್ಷದಂತೆ ಹೊಸ ಸೀಸನ್ ಆರಂಭ ಆಗುತ್ತಿದೆ. ಹೊಸ ಸೀಸನ್‌ ಜೊತೆ ಹೊಸ ಪ್ರತಿಭೆಗಳೊಂದಿಗೆ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಸರಿಗಮಪ ರೆಡಿಯಾಗಿದೆ.  ಈ ಬಾರಿ ಹಲವು ವಿಶೇಷತೆಗಳೊಂದಿಗೆ, ವಿಭಿನ್ನತೆಯೊಂದಿಗೆ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿದೆ. 

Zee Kannada Saregamapa new season Rajesh Krishnan joined as guest with Arjun Janya and Vijay Prakash
1/5

2/5

ಕನ್ನಡದ ಸರಿಗಮಪ ರಿಯಾಲಿಟಿ ಶೋ ಈಗಾಗಲೇ ಹಲವು ಗಾಯಕರನ್ನು ಕೊಟ್ಟಿದೆ. ಅವರಲ್ಲಿ ಸಂಜಿತ್ ಹೆಗ್ಡೆ, ಪೃಥ್ವಿಭಟ್ ಮತ್ತು ಜಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿಶಾಸ್ತ್ರೀ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ, ರಜತ್ ಹೆಗ್ಡೆ, ಹರ್ಷ, ದರ್ಶನ್, ಕಂಬದ ರಂಗಯ್ಯ, ಇಂಪನಾ ಜಯರಾಜ್, ಜ್ಞಾನಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ಗಾಯಕರು ಕನ್ನಡಿಗರಿಂದ ಜನ ಮನ್ನಣೆಯನ್ನು ಪಡೆದಿದ್ದಾರೆ.
Zee Kannada Saregamapa new season Rajesh Krishnan joined as guest with Arjun Janya and Vijay Prakash
3/5

ಈ ಬಾರಿ 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ವಿಶೇಷತೆ ಏನು ಅಂದರೆ, 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಗಾಯಕರು ಈ ಸೀಸನ್‌ನಲ್ಲಿ ಭಾಗವಹಿಸಬಹುದು. ಇದರೊಂದಿಗೆ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ಜಡ್ಜ್ ಆಗಿ ಸರಿಗಮಪ ತಂಡವನ್ನು ಸೇರಿಕೊಂಡಿದ್ದಾರೆ. ಇದು ಈ ಸೀಸನ್‌ನ ಮತ್ತೊಂದು ಹೈಲೈಟ್ ಎಂದು ಹೇಳಬಹುದು. ಈ ಸೀಸನ್ ಅನ್ನು ಕೂಡ ಕನ್ನಡದ ನಿರೂಪಕಿ ಅನುಶ್ರೀ ಅವರೇ ನಡೆಸಿಕೊಡುತ್ತಿದ್ದಾರೆ.
Zee Kannada Saregamapa new season Rajesh Krishnan joined as guest with Arjun Janya and Vijay Prakash
4/5

ಈಗಾಗಲೇ ಹೇಳಿದಂತೆ 'ಸರಿಗಮಪ'ದ ಈ ಸೀಸನ್‌ನಲ್ಲಿ ಕೇವಲ ಪೈಪೋಟಿ ಮಾತ್ರ ಇರದೆ, ಹೊಸ ಪ್ರತಿಭೆಗಳ ಇಂಟ್ರೆಸ್ಟಿಂಗ್‌ ಕತೆಗಳು ಕೂಡ ಇರುತ್ತೆ. ಈ ಸೀಸ್‌ನಲ್ಲೂ ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಹೊಸ ಪ್ರತಿಭೆಗಳು ಭಾಗಿಯಾಗುತ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ, ಈ ಬಾರಿ ವೀಕ್ಷಕರೇ 'ಸರಿಗಮಪ' ಇನ್‌ಸ್ಟಾಗ್ರಾಂ ಪೇಜ್ ಅನ್ನು ಲೈಕ್ ಮಾಡುವ ಮೂಲಕ ಆಡಿಷನ್ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಅತೀ ಹೆಚ್ಚು ಲೈಕ್‌ಗಳನ್ನು ಗಳಿಸಿರುವ ಸ್ಪರ್ಧಿಗಳು ಮೆಗಾ ಆಡಿಷನ್‌ಗೆ ಆಯ್ಕೆ ಆಗಿದ್ದಾರೆ.
Zee Kannada Saregamapa new season Rajesh Krishnan joined as guest with Arjun Janya and Vijay Prakash
5/5

ಹೊಸ ರೂಪದಲ್ಲಿ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿದೆ. ಇದೇ ಡಿಸೆಂಬರ್ 14ರಿಂದ ಶನಿವಾರ ಸಂಜೆ 7.30 ಸಿಂಗಿಂಗ್ ರಿಯಾಲಿಟಿ ಶೋ ಪ್ರಸಾರ ಆಗಲಿದೆ. ಈ ಶೋ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+