bredcrumb

ಮತ್ತೆ ಪ್ರೇಕ್ಷಕರ ಮುಂದೆ ಪಂಚರಂಗಿ ನಿಧಿ

By Kannada Filmibeat Photos
| Published: Tuesday, December 17, 2024, 13:17 [IST]

ಪಂಚರಂಗಿ ನಿಧಿ ಸುಬ್ಬಯ್ಯ ಮತ್ತೆ ಕನ್ನಡ ಸಿನಿರಸಿಕರ ಮುಂದೆ ಬರ್ತಿದ್ದಾರೆ. 6 ತಿಂಗಳ ಹಿಂದೆ 'ಚೆಫ್ ಚಿದಂಬರ' ಚಿತ್ರದಲ್ಲಿ ಮಿಂಚಿದ್ದರು. ಇದೀಗ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾರವೇ ಸಿನಿಮಾ ತೆರೆಗೆ ಬರಲಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಿಧಿ ಸಾಕಷ್ಟು ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.

Nidhi Subbaiah flaunts her casual look
1/5

ನಿಧಿ ಸುಬ್ಬಯ್ಯ ಚಿತ್ರರಂಗಕ್ಕೆ ಬಂದು 15 ವರ್ಷ ಕಳೆದಿದೆ. ಆರಂಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಚೆಲುವೆ ಬಳಿಕ ಸೈಲೆಂಟ್ ಆಗಿಬಿಟ್ಟಿದ್ದರು. ಆಗೊಮ್ಮೆ ಈಗೊಮ್ಮೆ ಒಂದೊಂದು ಚಿತ್ರದಲ್ಲಿ ನಟಿಸಲು ಆರಂಭಿಸಿದ್ದರು. ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿ ಬಂದರು.
Nidhi Subbaiah flaunts her casual look
2/5

'ಪಂಚರಂಗಿ' ಚಿತ್ರದ ಅಂಬಿಕಾ ಪಾತ್ರ ನಿಧಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಆದರೆ ಬಳಿಕ ದೊಡ್ಡದಾಗಿ ಅವಕಾಶಗಳು ಸಿಗಲಿಲ್ಲ. ಬಳಿಕ ನಿಧಾನವಾಗಿ ಎರಡನೇ ನಾಯಕಿ, ಪೋಷಕ ಪಾತ್ರಗಳತ್ತ ನಿಧಿ ಮುಖ ಮಾಡಿದರು. ಇನ್ನೇನು ಚಿತ್ರರಂಗ ಬಿಟ್ಟೇ ಬಿಟ್ಟರು ಅಂದುಕೊಳ್ಳುವ ವೇಳೆಗೆ ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾ ಬಂದರು.
Nidhi Subbaiah flaunts her casual look
3/5

ಸಿಕ್ಕಾಪಟ್ಟೆ ಮಾಡ್ರನ್ ಆಗಿ ಸ್ಟೈಲಿಶ್ ಕಾಸ್ಟ್ಯೂಮ್‌ನಲ್ಲಿ ನಿಧಿ ಫೋಟೊಶೂಟ್ ಮಾಡಿಸುತ್ತಾರೆ. ಡೆನಿಮ್, ಶಾರ್ಟ್ಸ್, ಕ್ಯಾಸ್ಯುವಲ್ ಲುಕ್ಸ್ ಎಲ್ಲದರಲ್ಲೂ ನಿಧಿ ಮಿಂಚುತ್ತಾರೆ. ಆಕೆಯ ಇನ್‌ಸ್ಟಾಗ್ರಾಮ್‌ ಅಕೌಂಟ್ ಫೋಟೊ, ವೀಡಿಯೋಗಳಿಂದ ತುಂಬಿ ತುಳುಕುತ್ತಿದೆ.
Nidhi Subbaiah flaunts her casual look
4/5

ಈ ವರ್ಷ ಬಿಡುಗಡೆ ಆಗುತ್ತಿರುವ ನಿಧಿ ಸುಬ್ಬಯ್ಯ 2ನೇ ಸಿನಿಮಾ 'ಯುಐ'. ಇದಕ್ಕೂ ಮುನ್ನ ಅನಿರುದ್ಧ್ ಜತ್ಕರ್ ನಟನೆಯ 'ಚೆಫ್ ಚಿದಂಬರ' ಚಿತ್ರದ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಇನ್ನು 'ಯುಐ' ಚಿತ್ರದಲ್ಲಿ ಸ್ಯಾಂಪಲ್‌ಗಳಲ್ಲಿ ಕೂಡ ನಿಧಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.
Nidhi Subbaiah flaunts her casual look
5/5

ರೀಷ್ಮಾ ನಾಣಯ್ಯ 'ಯುಐ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಿಧಿ ಸುಬ್ಬಯ್ಯ ನಟಿಸಿರುವುದು ಗೊತ್ತಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. 'ಎಡಗೈಯೇ ಅಪಘಾತಕ್ಕೆ ಕಾರಣ' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ಈಕೆ ಬಣ್ಣ ಹಚ್ಚಿದ್ದಾರೆ.
X