bredcrumb

ನನ್ನ ಫಸ್ಟ್ ಕ್ರಶ್ ಅವ್ನು.. ಆದ್ರೆ ತಂಗಿ ಅಂದ್ಬಿಟ್ಟ..

By Narayan
| Updated: Wednesday, November 20, 2024, 14:29 [IST]

ಜೀವನದಲ್ಲಿ ಬಹುತೇಕರಿಗೆ ಫಸ್ಟ್ ಕ್ರಶ್, ಫಸ್ಟ್ ಲವ್ ಎಲ್ಲವೂ ಆಗಿರುತ್ತದೆ. ಆದರೆ ಕೆಲವರು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಹೇಳಲ್ಲ. ಸಿನಿಮಾ ತಾರೆಯರ ಫಸ್ಟ್ ಲವ್, ಫಸ್ಟ್ ಕ್ರಶ್ ವಿಚಾರಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತದೆ. ನಟಿ ತಮನ್ನಾ ತಮ್ಮ ಫಸ್ಟ್ ಕ್ರಶ್ ಬಗ್ಗೆ ಹಿಂದೆ ಒಮ್ಮೆ ಹೇಳಿದ್ದರು. 

When actress Tamannaah Bhatia opens upa bout her frist crush
1/7

ಬಹುಭಾಷಾ ನಟಿ ತಮನ್ನಾ ಇತ್ತೀಚೆಗೆ ಸಿನಿಮಾಗಳಿಗಿಂತ ಐಟಂ ಸಾಂಗ್ಸ್‌ಗೆ ಹೆಚ್ಚು ಹೆಜ್ಜೆ ಹಾಕುತ್ತಿದ್ದಾರೆ. ಬಿಂದಾಸ್ ನಂಬರ್‌ಗೆ ಡ್ಯಾನ್ಸ್ ಮಾಡಿ ಹುಬ್ಬೇರಿಸುತ್ತಿದ್ದಾರೆ. ಸದ್ಯ ವಿಜಯ್ ವರ್ಮಾ ಜೊತೆ ಪ್ರೀತಿಲಿ ಬಿದ್ದಿದ್ದಾರೆ. ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಗೂ ಮೂಡಿದೆ.
When actress Tamannaah Bhatia opens upa bout her frist crush
2/7

ಹೊಸ ವರ್ಷದ ಸಂಭ್ರಮದಲ್ಲಿ ಇಬ್ಬರ ಲವ್ವಿ ಡವ್ವಿ ರಟ್ಟಾಗಿತ್ತು. ಬಳಿಕ ಕೈ ಕೈ ಹಿಡಿದು ಮುಂಬೈ ರೆಸ್ಟೊರೆಂಟ್‌ಗಳಲ್ಲಿ ಇಬ್ಬರೂ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಕೊನೆಗೆ ತಮ್ಮ ಪ್ರೇಮ್ ಕಹಾನಿ ಒಪ್ಪಿಕೊಂಡರು. ಇನ್ನು ಇಬ್ಬರು ಸೇರಿ 'ಲಸ್ಟ್ ಸ್ಟೋರೀಸ್'-2 ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು.
When actress Tamannaah Bhatia opens upa bout her frist crush
3/7

ಮಿಲ್ಕಿ ಬ್ಯೂಟಿಗೆ ಲವ್ ಬ್ರೇಕಪ್‌ಗಳು ಕೂಡ ಇದ್ದವೆ. ಇನ್ನು ಶಾಲಾ ದಿನಗಳಲ್ಲೇ ತಮಗೆ ಒಬ್ಬನ ಮೇಲೆ ಕ್ರಶ್ ಆಗಿತ್ತು ಎನ್ನುವ ಸಂಗತಿಯನ್ನು ತಮನ್ನಾ ಬಿಚ್ಚಿಟ್ಟಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಆತ ನನ್ನನ್ನು ತಂಗಿ ಎಂದುಬಿಟ್ಟಿದ್ದ ಎಂದು ಬೇಸರಿಸಿಕೊಂಡಿದ್ದರು.
When actress Tamannaah Bhatia opens upa bout her frist crush
4/7

ಅದನ್ನು ಫಸ್ಟ್ ಲವ್ ಎಂದು ಹೇಳಲು ಸಾಧ್ಯವಿಲ್ಲ. ಫಸ್ಟ್ ಕ್ರಶ್ ಎನ್ನಬಹುದು. ಶಾಲೆಯಲ್ಲಿ ನನ್ನ ಆತ್ಮೀಯ ಸ್ನೇಹಿತೆಯ ಸಹೋದರನ ಮೇಲೆ ನನ್ನ ಕ್ರಶ್ ಆಗಿತ್ತು. ಆದರೆ ಅವನು ನನ್ನನ್ನು ತಂಗಿ ಎಂದು ಕರೆದುಬಿಟ್ಟ ಎಂದು ತಮನ್ನಾ ಅಲವತ್ತುಕೊಂಡಿದ್ದರು.
When actress Tamannaah Bhatia opens upa bout her frist crush
5/7

ಸದ್ಯ ತಮನ್ನಾ 'ಸಿಕಂದರ್ ಕಾ ಮುಖಾದರ್' ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ 'ಓದೆಲಾ-2' ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟ ವಸಿಷ್ಠ ಸಿಂಹ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
When actress Tamannaah Bhatia opens upa bout her frist crush
6/7

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬಿಂದಾಸ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಾರೆ. ಸದ್ಯ ಸೀರೆ ರೀತಿ ಕಾಣುವ ಒಂದು ಗೌನ್‌ನಲ್ಲಿ ಮಿಲ್ಕಿಬ್ಯೂಟಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೊಗಳು ವೈರಲ್ ಆಗುತ್ತಿದೆ.
When actress Tamannaah Bhatia opens upa bout her frist crush
7/7

ಈ ವರ್ಷ ಬಾಲಿವುಡ್‌ನ 'ಸ್ತ್ರೀ'-2 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದ ಸ್ಪೆಷಲ್ ಸಾಂಗ್‌ಗೆ ಮಿಲ್ಕಿಬ್ಯೂಟಿ ಕುಣಿದು ರಂಗೇರಿಸಿದ್ದರು. ಅದಕ್ಕಾಗಿ ಭರ್ಜರಿ ಸಂಭಾವನೆ ಸಿಕ್ಕಿತ್ತು. ಆ ಸಾಂಗ್ ಚಿತ್ರದ ಸಕ್ಸಸ್‌ಗೆ ಪ್ಲಸ್ ಆಗಿದ್ದು ಸುಳ್ಳಲ್ಲ.
X