bredcrumb

ಶೋಭಿತಾ ಹಿಂದೆನೇ ಅಕ್ಕಿನೇನಿ ಕುಟುಂಬದ ಸೊಸೆಯಾಗಲಿರುವ ಝೈನಾಬ್ ರಾವಡ್ಜಿ; ಈಕೆಯ ಹಿನ್ನೆಲೆಯೇನು?

By Muralidhar S
| Published: Tuesday, November 26, 2024, 21:47 [IST]

ಝೈನಾಬ್ ರಾವಡ್ಜಿ  ಕೂಡ ಆರ್ಟಿಸ್ಟ್ ಅನ್ನೋದು ಗೊತ್ತಾಗಿದೆ. ಇದೇ ಆದರೆ, ಸಿನಿಮಾ ಸಂಬಂಧಿಸಿದ್ದು ಕಲೆ ಅಲ್ಲ. ಕರಕುಶಲ ಹಾಗೂ ಚಿತ್ರಕಲೆಯ ಕ್ಷೇತ್ರದಲ್ಲಿ ಝೈನಾಬ್ ರಾವಡ್ಜಿ ತೊಡಗಿಸಿಕೊಂಡಿದ್ದಾರೆ. ಅವರ ಫೈನಾನ್ಷಿಯಲ್ ಸ್ಟೇಟಸ್ ಕೂಡ ಸಾರ್ವಜನಿಕವಾಗಿ ಲಭ್ಯವಿಲ್ಲ. 

Who is Akhil Akkineni finance Zainab Ravdjee
1/6

ಅಂದ್ಹಾಗೆ ಝೈನಾಬ್ ರಾವಡ್ಜಿ ಮೂಲತ: ಹೈದರಾಬಾದ್ ಮೂಲದವರು. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಅವರು ಕುಟುಂಬ ಶ್ರೀಮಂತ ಮನೆತನಕ್ಕೆ ಸೇರಿದೆ ಎಂದು ಹೇಳಲಾಗಿದೆ. ಆದರೂ, ಅವರ ತನ್ನ ಲೈಫ್‌ ಅನ್ನು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ನೋಡಿಕೊಂಡಿದ್ದಾರೆ.
Who is Akhil Akkineni finance Zainab Ravdjee
2/6

ಟಾಲಿವುಡ್‌ನ ಅಕ್ಕಿನೇನಿ ಕುಟುಂಬದ ಕುಡಿ ಅಖಿಲ್ ಅಕ್ಕಿನೇನಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಝೈನಾಬ್ ರಾವಡ್ಜಿ ಎಂಬುವವರ ಜೊತೆ ನಿಶ್ಚಿತಾರ್ಥನೂ ನಡೆದಿದೆ. ಅಕ್ಕಿನೇನಿ ಕುಟುಂಬ ಭಾರತೀಯ ಚಿತ್ರರಂಗಕ್ಕೆ ಚಿರಪರಿಚಿತ. ಆದರೆ, ಝೈನಾಬ್ ರಾವಡ್ಜಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಪಬ್ಲಿಕ್ ಲೈಫ್‌ನಿಂದ ಅವರು ದೂರವೇ ಉಳಿದಿದ್ದಾರೆ.
Who is Akhil Akkineni finance Zainab Ravdjee
3/6

ಝೈನಾಬ್ ರಾವಡ್ಜಿ ವೃತ್ತಿ, ಕುಟುಂಬದ ಬಗ್ಗೆ ಅಧಿಕೃತ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಅಲ್ಲದೆ ಅಕ್ಕಿನೇನಿ ಕುಟುಂಬದ ಜೊತೆ ಈಕೆಯ ಫ್ಯಾಮಿಲಿ ಏನಾದರೂ ನಂಟು ಇಟ್ಟುಕೊಂಡಿದೆಯೇ? ಎಂಬ ಬಗ್ಗೆನೂ ಮಾಹಿತಿ ಇಲ್ಲ. ಆದರೆ, ಸಿನಿಮಾರಂಗಕ್ಕೂ ಝೈನಾಬ್ ರಾವಡ್ಜಿ ಕುಟುಂಬಕ್ಕೂ ಸಂಬಂಧವಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ.
Who is Akhil Akkineni finance Zainab Ravdjee
4/6

ಝೈನಾಬ್ ರಾವಡ್ಜಿ ಕೂಡ ಆರ್ಟಿಸ್ಟ್ ಅನ್ನೋದು ಗೊತ್ತಾಗಿದೆ. ಇದೇ ಆದರೆ, ಸಿನಿಮಾ ಸಂಬಂಧಿಸಿದ್ದು ಕಲೆ ಅಲ್ಲ. ಕರಕುಶಲ ಹಾಗೂ ಚಿತ್ರಕಲೆಯ ಕ್ಷೇತ್ರದಲ್ಲಿ ಝೈನಾಬ್ ರಾವಡ್ಜಿ ತೊಡಗಿಸಿಕೊಂಡಿದ್ದಾರೆ. ಅವರ ಫೈನಾನ್ಷಿಯಲ್ ಸ್ಟೇಟಸ್ ಕೂಡ ಸಾರ್ವಜನಿಕವಾಗಿ ಲಭ್ಯವಿಲ್ಲ.
Who is Akhil Akkineni finance Zainab Ravdjee
5/6

ಝೈನಾಬ್ ರಾವಡ್ಜಿಗೆ ಈಗ 27 ವರ್ಷ. ಚಿಕ್ಕ ವಯಸ್ಸಿಗೆ ಅಖಿಲ್ ಅಕ್ಕಿನೇನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ. ಅಲ್ಲದೆ ಮದುವೆ ಬಳಿಕ ತನ್ನ ವೃತ್ತಿ ಹಾಗೂ ಪರ್ಸನಲ್ ಲೈಫ್ ಅನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನು ನೋಡಬೇಕಿದೆ.
Who is Akhil Akkineni finance Zainab Ravdjee
6/6

ಝೈನಾಬ್ ರಾವಡ್ಜಿ ಆರ್ಟಿಸ್ಟ್ ಆಗಿದ್ದು, ಈಗಾಗಲೇ ಹಲವು ಪ್ರದರ್ಶನಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ 'ರಿಫ್ಲೆಕ್ಷನ್ಸ್' ಅನ್ನುವ ಪ್ರದರ್ಶನದಲ್ಲಿ ಝೈನಾಬ್ ರಾವಡ್ಜಿ ಗಮನ ಸೆಳೆದಿದ್ದರು ಎನ್ನಲಾಗಿದೆ. ಆರ್ಟ್ ಸಮುದಾಯದಲ್ಲಿ ಇವರು ವಿಶಿಷ್ಟ ಶೈಲಿಯ ಕಲೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಅವರು ಬಣ್ಣಗಳನ್ನು ಬಳಸಿ ಭಾವನೆಗಳನ್ನು ಹೊರಹಾಕುವ ಕಲೆ ಗಮನ ಸೆಳೆದಿದೆ ಎನ್ನಲಾಗಿದೆ.
X