bredcrumb

ಗುಲಾಬಿ ಹೂ ಹಿಡಿದು ರೋಸ್ ಲುಕ್ ಕೊಟ್ಟ ರಾಕಿ ಭಾಯ್‌ಯ 'ಟಾಕ್ಸಿಕ್' ಬ್ಯೂಟಿ

By Muralidhar S
| Published: Wednesday, November 13, 2024, 23:31 [IST]

ಕಿಯಾರಾ ಅಡ್ವಾಣಿ ಸಿನಿಮಾದಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ, ಸೋಶಿಯಲ್ ಮೀಡಿಯಾದಿಂದ ಹಿಂದೆ ಸರಿಯುವುದೇ ಇಲ್ಲ. ಆಗಾಗ ತಮ್ಮ ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೊಶೂಟ್‌ಗಳನ್ನು ಮಾಡಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ರೋಸ್ ಕಾಸ್ಟ್ಯೂಮ್‌ ಧರಿಸಿದ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

Kiara Advani New rose photoshoot
1/6

ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ 'ಟಾಕ್ಸಿಕ್' ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಕಿಯಾರಾ ಅಡ್ವಾಣಿ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಈಗ ರಾಕಿ ಭಾಯ್ ಹಾಗೂ ಕಿಯಾರಾ ಅಡ್ವಾಣಿ ಕಾಂಬಿನೇಷನ್ ಹೇಗಿರುತ್ತೋ ಅಂತ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.
Kiara Advani New rose photoshoot
2/6

ಕಿಯಾರಾ ಅಡ್ವಾಣಿ ಸಿನಿಮಾದಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ, ಸೋಶಿಯಲ್ ಮೀಡಿಯಾದಿಂದ ಹಿಂದೆ ಸರಿಯುವುದೇ ಇಲ್ಲ. ಆಗಾಗ ತಮ್ಮ ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೊಶೂಟ್‌ಗಳನ್ನು ಮಾಡಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ರೋಸ್ ಕಾಸ್ಟ್ಯೂಮ್‌ ಧರಿಸಿದ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Kiara Advani New rose photoshoot
3/6

ಸಿಲ್ವರ್ ಬಣ್ಣದ ಡ್ರೆಸ್‌ನಲ್ಲಿ ಗುಲಾಬಿ ಹೂವಿನ ಚಿತ್ರವಿದ್ದು, ಕಿಯಾರಾ ಅಡ್ವಾಣಿಗೆ ಹೇಳಿ ಮಾಡಿಸಿದ ಹಾಗಿದೆ. ಇದರ ಜೊತೆಗೆ ಗುಲಾಬಿ ಹೂವನ್ನು ಹಿಡಿದು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಅದರಲ್ಲೂ ಇತ್ತೀಚೆಗೆ ರಾಕಿ ಬಾಯ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂತ ಗೊತ್ತಾದ ಮೇಲಂತೂ ಫ್ಯಾನ್ಸ್ ಮತ್ತಷ್ಟು ಹೆಚ್ಚಾಗಿದ್ದಾರೆ.
Kiara Advani New rose photoshoot
4/6

ಗುಲಾಬಿ ಡ್ರೆಸ್‌ನಲ್ಲಿ ಗ್ಲಾಮರ್ ಲುಕ್ ಕೊಟ್ಟಿರುವ ಕಿಯಾರಾ ಅಡ್ವಾಣಿ ಫೋಟೊಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬಹುತೇಕ ಮಂದಿ ಫೋಟೊಗಳಿಗೆ ಹಾರ್ಟ್ ಎಮೋಜಿ ಹಾಕಿ ಲೈಕ್ ಮಾಡಿದ್ದಾರೆ. ಮತ್ತೆ ಕೆಲವರು ನಮ್ಮ ಮನೆಯ ಬೆಡ್‌ ಶೀಟ್ ಕಾಣಿಯಾಗಿದೆ ಎಂದು ಬಾಲಿವುಡ್ ನಟಿಯ ಕಾಲೆಳೆದಿದ್ದಾರೆ.
Kiara Advani New rose photoshoot
5/6

ಕಿಯಾರಾ ಅಡ್ವಾಣಿ ಸದ್ಯ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ನಟನೆಯ ಗೇಮ್‌ ಚೇಂಜರ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ನಿರೀಕ್ಷೆಯನ್ನು ಹುಟ್ಟಿಸಿದೆ.
Kiara Advani New rose photoshoot
6/6

ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ 'ಗೇಮ್ ಚೇಂಜರ್' ಟಾಲಿವುಡ್‌ನಲ್ಲಿ ಮತ್ತೊಂದು ದಾಖಲೆ ಬರೆಯುತ್ತೆ ಅನ್ನುವ ನಿರೀಕ್ಷೆಯಿದೆ. ಈ ಸಿನಿಮಾದಲ್ಲೂ ಕಿಯಾರಾ ಅಡ್ವಾಣಿ ಗ್ಲಾಮರಸ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುಳಿವು ನೀಡಿದ್ದಾರೆ. ಅವರು ಗ್ಲಾಮರ್ ಲುಕ್‌ಗೆ ತೆಲುಗು ಮಂದಿನೂ ಫಿದಾ ಆಗಿದ್ದಾರೆ.
X