bredcrumb

'ಎಕ್ಕ' ಮುಹೂರ್ತ ಸಮಾರಂಭ

By Narayan
| Updated: Thursday, November 28, 2024, 21:00 [IST]

'ಯುವ' ಸಕ್ಸಸ್ ಬಳಿಕ ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಶುರುವಾಗಿದೆ. ಬಂಡಿ ಮಹಾಕಾಳಿ ಆಲಯದಲ್ಲಿ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. 

Yuva Rajkumar's Ekka begins with an official pooja ceremony; Stills
1/7

ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಗೊತ್ತೇಯಿದೆ. 'ಯುವ' ಚಿತ್ರದಲ್ಲಿ ಡ್ಯಾನ್ಸ್ ಹಾಗೂ ಆಕ್ಷನ್ ಮೂಲಕ ಯುವ ರಾಜ್‌ಕುಮಾರ್ ಗಮನ ಸೆಳೆದಿದ್ದರು. ಇದೀಗ 2ನೇ ಸಿನಿಮಾ ಶುರುವಾಗಿದೆ.
Yuva Rajkumar's Ekka begins with an official pooja ceremony; Stills
2/7

ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಯುವ ರಾಜ್‌ಕುಮಾರ್ ಮುಂದಿನ ಸಿನಿಮಾ ಮೂಡಿ ಬರಲಿದೆ. ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಸಂಸ್ಥೆಗಳು ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿವೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
Yuva Rajkumar's Ekka begins with an official pooja ceremony; Stills
3/7

ದೀಪಾವಳಿ, ರಾಜ್ಯೋತ್ಸವ ಸಂಭ್ರಮದಲ್ಲಿ ಚಿತ್ರದ ಟೈಟಲ್ ರಿವೀಲ್ ಆಗಿತ್ತು. 'ಎಕ್ಕ' ಎನ್ನುವ ಮಾಸ್ ಟೈಟಲ್‌ನಲ್ಲಿ ಯುವ 2ನೇ ಸಿನಿಮಾ ಮೂಡಿ ಬರಲಿದೆ. ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶ್ರೀಮತಿ ಶೈಲಜಾ ವಿಜಯ್‌ ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
Yuva Rajkumar's Ekka begins with an official pooja ceremony; Stills
4/7

ನಟ ಧನಂಜಯ್ ಚಿತ್ರದ ಮೊದಲ ಶಾಟ್ ನಿರ್ದೇಶನ ಮಾಡಿದರು. ನಿರ್ಮಾಪಕ ಕಾರ್ತಿಕ ಗೌಡ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮರಾ ಚಾಲನೆ ಮಾಡಿ ಶುಭ ಕೋರಿದರು. ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ನಲ್ಲಿ 'ಎಕ್ಕ' ಚಿತ್ರದ ಚಿತ್ರೀಕರಣ ನಡೆಯಲಿದೆ.
Yuva Rajkumar's Ekka begins with an official pooja ceremony; Stills
5/7

'ಎಕ್ಕ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅದರಲ್ಲಿ ಒಬ್ಬರು ಸಂಪಾದ. ಅತ್ತುಲ್‌ ಕುಲಕರ್ಣೀ, ಶ್ರುತಿ ಕೃಷ್ಣ, ರಾಹುಲ್‌ ದೇವ್‌ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಜೂನ್ 6 , 2025 ರಂದು ಸಿನಿಮಾ ತೆರೆಗೆ ಬರಲಿದೆ.
Yuva Rajkumar's Ekka begins with an official pooja ceremony; Stills
6/7

ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. 'ಎಕ್ಕ' ಚಿತ್ರಕ್ಕೆ ಅರ್ಜುನ್‌ ರಾಜ್‌ ಮತ್ತು ಚೇತನ್‌ ಡಿಸೋಜಾ ಆಕ್ಷನ್ ಕಂಪೋಸ್ ಮಾಡಲಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ಗಳನ್ನು ನೋಡಿದರೆ ಇದು ಪಕ್ಕಾ ರಾ ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.
Yuva Rajkumar's Ekka begins with an official pooja ceremony; Stills
7/7

ಇನ್ನು 'ಎಕ್ಕ' ಚಿತ್ರದ ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್‌, ನಾಗಾರ್ಜುನ ಶರ್ಮ, ನಟ ಧನಂಜಯ, ರೋಹಿತ್‌ ಪದಕಿ ಲೇಖನಿ ಹಿಡಿಯಲಿದ್ದಾರೆ. ಸತ್ಯ ಹೆಗಡೆ ಚಿತ್ರವನ್ನು ಸೆರೆಹಿಡಿಯಲಿದ್ದು ದೀಪು ಎಸ್‌ ಕುಮಾರ್‌ ಸಂಕಲನ ಇರಲಿದೆ. ಸ್ಟಾರ್ ತಂತ್ರಜ್ಞರ ತಂಡ 'ಎಕ್ಕ' ಚಿತ್ರತಂಡದಲ್ಲಿದೆ.
X