Adipurush Twitter Review: ಪ್ರಭಾಸ್ ಅದ್ಭುತ.. ಆಕ್ಷನ್ ಸೂಪರ್.. ನಿರ್ದೇಶನ ಮಾತ್ರ ಖರಾಬ್.. ನೆಟ್ಟಿಗರ ಪ್ರತಿಕ್ರಿಯೆ ಏನು?
'ಆದಿಪುರುಷ್' ಸಿನಿಮಾ ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದ್ದರೂ, ಬಿಡುಗಡೆ ವೇಳೆ ಸಿನಿಮಾಗೆ ಸಿಕ್ಕಾಪಟ್ಟೆ ಹೈಪ್ ಸಿಕ್ಕಿತ್ತು. ಟೀಸರ್ ರಿಲೀಸ್ ಬಳಿಕ ಚಿತ್ರತಂಡಕ್ಕೆ ಉಗಿದಿದ್ದ ಜನರು ಟ್ರೈಲರ್ ಬಿಡುಗಡೆ ಬಳಿಕ ಹೊಗಳಿಕೊಂಡಾಡಿದ್ದರು.
ಈ ಸಿನಿಮಾದ ಹಾಡುಗಳು ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದ್ದವು. ಅಡ್ವಾನ್ಸ್ ಬುಕಿಂಗ್ ಕೂಡ ಅದ್ಭುತವಾಗಿತ್ತು. ಈಗ ಫಸ್ಟ್ ಡೇ ಫಸ್ಟ್ ಶೋ ನೋಡಿ ಜನರ ಅಭಿಪ್ರಾಯ ಏನಿರುತ್ತೆ? ಅನ್ನೋದರ ಮೇಲೆ ಎಲ್ಲವೂ ನಿರ್ಧಾರವಾಗಿರುತ್ತೆ.

'ಆದಿಪುರುಷ್' ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆಟ್ಟಿಗರು ಏನಂತಿದ್ದಾರೆ? ಟ್ವಿಟರ್‌ನಲ್ಲಿ ಈ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಸೆಕೆಂಡ್ ಹಾಫ್‌ನಲ್ಲಿ ಆಕ್ಷನ್
"ಆದಿಪುರುಷ್' ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಹೆಚ್ಚು ಎಮೋಷನಲ್ ಸೀನ್‌ಗಳಿವೆ. ಪ್ರಭಾಸ್ ಎಂಟ್ರಿ, ಶಬರಿ ಸೀನ್, ಭಜರಂಗದ ದೃಶ್ಯ ಈ ಸಿನಿಮಾ ಮೇಜರ್ ಹೈಲೈಟ್. ಪ್ರಭಾಸ್ ತೆರೆಮೇಲೆ ಅದ್ಭುತವಾಗಿ ಕಾಣಿಸುತ್ತಾರೆ. ಅದೇ ಸೆಕೆಂಡ್ ಹಾಫ್‌ನಲ್ಲಿ ದೊಡ್ಡ ದೊಡ್ಡ ಆಕ್ಷನ್ ದೃಶ್ಯಗಳು ಇವೆ. ಹಾಡುಗಳು ಅದ್ಭುತವಾಗಿವೆ. 3ಡಿಯಲ್ಲಿ ಫ್ಯಾಮಿಲಿ ಹಾಗೂ ಮಕ್ಕಳೊಂದಿಗೆ ಕೂತು ಸಿನಿಮಾ ನೋಡಿ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ವನವಾಸದ ದೃಶ್ಯಗಳು ಅದ್ಭುತ
ಜಂಗಲ್ ಹಾಗೂ ವನವಾಸದ ದೃಶ್ಯಗಳು ನಿಮ್ಮನ್ನು ಮನಸ್ಸಿಗೆ ಅದ್ಭುತ ಅನುಭವ ನೀಡುತ್ತದೆ. ವಿಎಫ್‌ಎಕ್ಸ್ ಕ್ವಾಲಿಟಿ ಚೆನ್ನಾಗಿದೆ. ಇಡೀ ಸಿನಿಮಾ ನಿಮ್ಮನ್ನು ಎಂಗೇಜಿಂಗ್ ಆಗಿ ಇಟ್ಟಿರುತ್ತೆ. ಹಾಡು ಹಾಗೂ ಹಿನ್ನೆಲೆ ಸಂಗೀತನೇ ಪ್ರಮುಖ ಆಕರ್ಷಣೆ. ಕೆಲವು ದೃಶ್ಯಗಳು ಡಿಸೆಂಟ್ ಆಗಿವೆ. 5ಕ್ಕೆ 4.5 ರೇಟಿಂಗ್ ನೀಡುತ್ತೇನೆ" ಎಂದು ಮತೊಬ್ಬರು ಟ್ವೀಟ್ ಮಾಡಿದ್ದಾರೆ.
ಹೊಸ ತಲೆಮಾರಿನ 'ರಾಮಾಯಣ'
ತಮಿಳು ಸಿನಿಮಾಗಳ ಕ್ರಿಟಿಕ್ ಮನೋಬಾಲ ವಿಜಯಬಾಲನ್ ಕೂಡ ಟ್ವೀಟ್ ಮೂಲಕ ಸಿನಿಮಾ ವಿಮರ್ಶೆ ಮಾಡಿದ್ದಾರೆ. " ಪ್ರಭಾಸ್ ಪ್ರಾಮಾಜಿಕವಾಗಿ ಅದ್ಭುತ ನಟನೆ ಮಾಡಿದ್ದಾರೆ. ಆದರೆ, ನಿರ್ದೇಶನ ಅಷ್ಟೊಂದು ಸ್ಟ್ರಾಂಗ್ ಆಗಿರಲಿಲ್ಲ. ಕೆಲವು ಪಾತ್ರಗಳು ಹಾಗೂ ತಂತ್ರಜ್ಞರು ಈ ಸಿನಿಮಾಗೆ ಹಾಕಬೇಕಿರೋ ಎಫೆರ್ಟ್ ಹಾಕಿಲ್ಲ. ಇಷ್ಟು ದೊಡ್ಡ ಬಜೆಟ್ ಸಿನಿಮಾವನ್ನು ತುಂಬಾನೇ ಜಾಗರೂಕರಾಗಿ ಹ್ಯಾಂಡಲ್ ಮಾಡಬೇಕಿತ್ತು. ರಾಮಾಯಣ ಆಗಿರುವುದರಿಂದ ಒಮ್ಮೆ ಚಿತ್ರಮಂದಿರದಲ್ಲಿ ನೋಡಬಹುದು." ಎಂದು ಮನೋಬಾಲ ವಿಜಯಬಾಲನ್ ಹೇಳಿದ್ದಾರೆ.
ಸಿನಿಮಾ ಕೆಟ್ಟದಾಗಿದೆ
" ಸಿನಿಮಾ ತುಂಬಾನೇ ಕೆಟ್ಟದಾಗಿ ತೆಗೆದಿದ್ದಾರೆ. ಸಿನಿಮಾದ ಡೈಲಾಗ್ ಚೆನ್ನಾಗಿಲ್ಲ. ಇದರ ಹಿಂದೆನೇ ಸ್ಟಾರ್ ಕಾಸ್ಟ್, ನಿರ್ದೇಶನ ಹಾಗೂ ವಿಎಫ್‌ಎಕ್ಸ್ ಕೂಡ ಚೆನ್ನಾಗಿಲ್ಲ. ಪ್ರಭಾಸ್ ತುಂಬಾನೇ ಪ್ರಯತ್ನ ಪಟ್ಟಿದ್ದು, ಅವರಿಂದ ಏನೂ ತಪ್ಪಾಗಿಲ್ಲ. ಮೊದಲಾರ್ಧದ ಬಳಿಕ ಇಡೀ ಸಿನಿಮಾ ಕಳೆದು ಹೋಗುತ್ತೆ. ಬಂಗಾರದಂತಹ ಅವಕಾಶವನ್ನು ಓಂ ರಾವತ್ ಕಳೆದುಕೊಂಡಿದ್ದಾರೆ." ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











