Dacoit Movie First Review: 'ಡಕಾಯಿತ್' ಸಿನಿಮಾದ ಮೊದಲ ವಿಮರ್ಶೆ ಏನು ಹೇಳುತ್ತೆ?

ಈ ವಾರ ರಿಲೀಸ್ ಆಗಲಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ತೆಲುಗಿನ 'ಡಕಾಯಿತ್' ಕೂಡ ಒಂದು. ಅಡಿವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ತೆಲುಗು ರಾಜ್ಯಗಳಲ್ಲಿ ಸದ್ದು ಮಾಡಿದೆ. ಅಡವಿ ಶೇಷ್ ಮಾಸ್ ಅವತಾರದಲ್ಲಿ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದ್ದಾರೆ. ಐಪಿಎಲ್ ಸೀಸನ್‌ನಲ್ಲಿ ರಿಲೀಸ್ ಆಗುತ್ತಿರೋ 'ಡಕಾಯಿತ್' ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ ಕಡೆಗೆ ಸೆಳೆಯುವಲ್ಲಿ ಯಶಸ್ಸು ಕಾಣುತ್ತಾ? ಕುತೂಹಲ ಎದ್ದಿದೆ.

'ಡಕಾಯಿತ್' ಸಿನಿಮಾವನ್ನು ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಸುಪ್ರಿಯಾ ಯಾರ್ಲಗಡ್ಡ ನಿರ್ಮಾಣ ಮಾಡಿದ್ದಾರೆ. ಎಸ್‌ಎಸ್ ಕ್ರಿಯೇಷನ್ಸ್, ಸುನಿಲ್ ನಾರಂಗ್ ಸಹ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಶಾನಿಲ್ ಡಿಯೋ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಇದು ತೆಲುಗು ಸಿನಿಮಾ ಆಗಿದ್ದರೂ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಐದು ಭಾಷೆಗಳಲ್ಲಿ 'ಡಕಾಯಿತ್' ರಿಲೀಸ್ ಆಗುತ್ತಿದೆ.

Adivi Sesh and Mrunal Thakur starrer Dacoit movie First review in Kannada

ಬಹು ದೊಡ್ಡ ಸ್ಟಾರ್‌ಕಾಸ್ಟ್ ಇರುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ? ಅನ್ನೋ ಪ್ರಶ್ನೆ ಈಗ ಎದುರಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಿನಿಮಾದ ಮೊದಲ ವಿಮರ್ಶೆ ಹೊರ ಬಿದ್ದಿದೆ. ಹಾಗಿದ್ದರೆ, ಅಡಿವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ಜೋಡಿಯ ಈ ಸಿನಿಮಾದ ಮೊದಲ ವಿಮರ್ಶೆ ಹೇಗಿದೆ? ಪಾಸಿಟಿವ್ ಆಗಿದೆಯೇ? ನೆಗೆಟಿವ್ ಆಗಿದೆಯೇ? ತಿಳಿಯುವುದಕ್ಕೆ ಮುಂದೆ ಓದಿ.

'ಡಕಾಯಿತ್' ಪಾನ್ ಇಂಡಿಯಾ ಸಿನಿಮಾ ಅನ್ನೋದರ ಜೊತೆಗೆ ದಿಗ್ಗಜರ ನಟಿಸಿರೋದು ಪ್ರಮುಖ ಆಕರ್ಷಣೆ. ಬಾಲಿವುಡ್ ನಿರ್ದೇಶಕ ಹಾಗೂ ನಟ ಅನುರಾಗ್ ಕಶ್ಯಪ್, ಪ್ರಕಾಶ್ ರಾಜ್, ಸುನಿಲ್, ಅತುಲ್ ಕುಲಕರ್ಣಿ, ಕಾಮಾಕ್ಷಿ ಭಾಸ್ಕರ್ಲಾ, ಜಿಯಾನ್ ಮೇರಿ ಖಾನ್ ಸೇರಿದಂತೆ ಇನ್ನೂ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಭಾಸ್ಕರ್ ಕ್ಯಾಮರಾ ವರ್ಕ್ ಮಾಡಿದ್ದರೆ, ಭೀಮ್ಸ್ ಸಿಸಿರೋಲಿಯೋ ಮ್ಯೂಸಿಕ್ ಕೊಟ್ಟಿದ್ದಾರೆ. ಜ್ಞಾನಿ ಅವರ ಹಿನ್ನೆಲೆ ಸಂಗೀತ ಈ ಸಿನಿಮಾದ ಹೈಲೈಟ್ ಎನ್ನಲಾಗಿದೆ.

Adivi Sesh and Mrunal Thakur starrer Dacoit movie First review in Kannada

ಇನ್ನು ಸಿನಿಮಾ ಸ್ಟೋರಿ ಕೂಡ ಥ್ರಿಲ್ಲಿಂಗ್ ಆಗಿದೆ. ಅಡಿವಿ ಶೇಷ್ ಈ ಸಿನಿಮಾ ಹರಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೃಣಾಲ್ ಠಾಕೂರ್ ಅವರನ್ನು 'ಜೂಲಿಯಟ್' ಪಾತ್ರದಲ್ಲಿ ಕಾಣಬಹುದು. ಇವರಿಬ್ಬರೂ ಪ್ರೇಮಿಗಳು. ಜೀವನದ ಉದ್ದಕ್ಕೂ ಒಟ್ಟಿಗೆ ಇರಬೇಕು ಅನ್ನೋದು ಆಸೆ. ಆದರೆ, ಅವರ ಬಾಳಲ್ಲಿ ವಿಧಿ ಆಡಿದ ಆಟದಿಂದ ಇಬ್ಬರೂ ಬೇರೆಯಾಗುತ್ತಾರೆ. ಹರಿ ದುಬೈಗೆ ತೆರಳಿದರೆ, ಇತ್ತ ಜೂಲಿಯಟ್ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಹರಿ ದುಬೈಗೆ ಯಾಕೆ ಹೋದ? ಜೂಲಿಯಟ್‌ಗೆ ಒಂದು ಕೋಟಿ ಯಾಕೆ ಬೇಕು? ಪೊಲೀಸರು ಇವರಿಬ್ಬರ ಹಿಂದೆ ಬೀಳುವುದಕ್ಕೆ ಕಾರಣವೇನು? ಕಷ್ಟಗಳನ್ನು ಮೆಟ್ಟಿನಿಂತು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರಾ? ಅನ್ನೋದು ಸಿನಿಮಾದಲ್ಲಿ ಉತ್ತರ ಸಿಗುತ್ತೆ.

ಈ ಸಿನಿಮಾವನ್ನು ಈಗಾಗಲೇ ಸೆನ್ಸಾರ್ ಬೋರ್ಡ್ ಅಧಿಕಾರಿಗಳು ವೀಕ್ಷಿಸಿದ್ದಾರೆ. ಸಿನಿಮಾದ ಕೆಲವು ಸೀನ್‌ ಹಾಗೂ ಡೈಲಾಗ್‌ಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೀಡಲಾಗಿತ್ತು. ಸೆನ್ಸಾರ್ ಅಧಿಕಾರಿಗಳ ಸೂಚನೆಯಂತೆ ಕೆಲವು ಬದಲಾವಣೆಗಳನ್ನು ಮಾಡಿದ ಬಳಿಕ 'ಡಕಾಯಿತ್‌'ಗೆ 'ಯು/ಎ' ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಹಾಗೇ ಸೆನ್ಸಾರ್ ಅಧಿಕಾರಿಗಳು ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಪಾಸಿಟಿವ್ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಇನ್ನು ಸಿನಿಮಾ ಅವಧಿ ಸ್ವಲ್ಪ ದೊಡ್ಡದಿದೆ. ಕಥೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಸಿನಿಮಾದ ಒಟ್ಟು ಅವಧಿ 2 ಗಂಟೆ 40 ನಿಮಿಷಗಳಿವೆ.

'ಡಕಾಯಿತ್‌' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಅಡಿವಿ ಶೇಷ್ ತಮ್ಮ ರೆಗ್ಯೂಲರ್ ಇಮೇಜ್‌ಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಮಾಸ್ ಅವತಾರದಲ್ಲಿ ಹೊಸ ಪ್ರಯೋಗವನ್ನು ಮಾಡಿದ್ದು, ಮೃಣಾಲ್ ಠಾಕೂರ್ ಎಮೋಷನಲ್ ಸೀನ್‌ಗಳಲ್ಲಿ ಗಮನ ಸೆಳೆಯುತ್ತಾರೆ. ಹೀಗಾಗಿ ಇವರಿಬ್ಬರಿಗೂ ಈ ಸಿನಿಮಾ ಯಶಸ್ಸು ಕೊಡುತ್ತಾ? ಜನರು ಮೆಚ್ಚಿಕೊಳ್ಳುತ್ತಾರಾ? ಅನ್ನೋದು ಏಪ್ರಿಲ್ 10ರ ಬಳಿಕ ತಿಳಿಯಲಿದೆ.

English summary
Adivi Sesh and Mrunal Thakur starrer Dacoit movie First review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X