Ponniyin Selvan 2 Twitter Review: 'ಪೊನ್ನಿಯಿನ್ ಸೆಲ್ವನ್ 2' ಗ್ರ್ಯಾಂಡ್ ರಿಲೀಸ್.. ನೆಟ್ಟಿಗರ ರಿಯಾಕ್ಷನ್ ಏನು?
ಈ ವಾರದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪೊನ್ನಿಯಿನ್ ಸೆಲ್ವನ್ 2'. ಮಣಿರತ್ನಂ ನಿರ್ದೇಶನದ ಈ ಸಿನಿಮಾ ಇಂದು (ಏಪ್ರಿಲ್ 28) ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಿದೆ. ಹೀಗಾಗಿ ವಿಶ್ವದ ಮೂಲೆ ಮೂಲೆಯಿಂದ ನೆಟ್ಟಿಗರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಶಾ ಕೃಷ್ಣನ್ ಸೇರಿದಂತೆ ದೊಡ್ಡ ತಾರಾಗಣದ ಈ ಸಿನಿಮಾ ಬಗ್ಗೆ ಕೂತೂಹಲವಿದೆ. ಈಗಾಗಲೇ ಪಾರ್ಟ್ 1 ಇಷ್ಟಪಟ್ಟಿರೊರಿಗೆ ಪಾರ್ಟ್ 2 ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

'ಪೊನ್ನಿಯಿನ್ ಸೆಲ್ವನ್ 2' ಅಭಿಮಾನಿಗಳಿಗಾಗಿಯೇ ಬೆಳ್ಳಂಬೆಳಗ್ಗೆ ಸ್ಪೆಷಲ್ ಶೋ ಹಾಕಲಾಗಿದೆ. ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭ ಆಗಿದೆ. ಇನ್ನೊಂದು ಕಡೆ ಈಗಾಗಲೇ ಸಿನಿಮಾ ನೋಡಿರೋ ನೆಟ್ಟಿಗರ ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಪೊನ್ನಿಯಿನ್ ಸೆಲ್ವನ್ 2' ಎಪಿಕ್
ಸಿನಿಪ್ರಿಯರಿಗೆ ಮಣಿರತ್ನಂ ಸಿನಿಮಾ ಮೇಲೆ ಒಂದು ಪಟ್ಟು ಜಾಸ್ತಿ ಕ್ರೇಜ್ ಇರುತ್ತೆ. ಅಲ್ಲದೆ ಇದು ಮಲ್ಟಿಸ್ಟಾರರ್ ಸಿನಿಮಾ. ಹೀಗಾಗಿ ಸಿನಿಮಾ ಪ್ರೇಮಿಗಳಿಗ ಕಣ್ಣಿಗೆ ಹಬ್ಬ. ಹೀಗಾಗಿ ಫಸ್ಟ್ ಶೋಯಿಂದಾನೇ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ನೆಟ್ಟಿಗರೊಬ್ಬರು ಸಿನಿಮಾ ನೋಡಿ "ಪೊನ್ನಿಯಿನ್ ಸೆಲ್ವನ್ 2 ಒಂದು ಎಪಿಕ್ ಸಿನಿಮಾ. ಎಆರ್ ರೆಹಮಾನ್ ಸಿನಿಮಾದ ಆತ್ಮ. ಮಾಸ್ಟರ್‌ಗಳಾದ ಮಣಿರತ್ನಂ ಹಾಗೂ ಎಆರ್ ರೆಹಮಾನ್ ಗೆದ್ದುಬಿಟ್ಟಿದ್ದಾರೆ. ಬ್ರಿಲಿಯಂಟ್" ಎಂತ ಟ್ವೀಟ್ ಮಾಡಿದ್ದಾರೆ.
ಐಶ್ವರ್ಯಾ ರೈ ನಟನೆ ಅದ್ಭುತ
ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿ ಐಶ್ವರ್ಯಾ ರೈ ಅದ್ಬುತವಾಗಿ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅವರ ಹೆಚ್ಚು ಸಿನಿಮಾಗಳನ್ನು ನಮಗೆ ಸಿಗಲಿಲ್ಲ ಅನ್ನೋದೇ ವಿಷಾದ. ಎಲ್ಲರಿಗಿಂತಲೂ ಐಶ್ವರ್ಯಾ ರೈ ಉತ್ತಮ. ಪ್ರತಿ ಕ್ಷಣನೂ ತೆರೆಯನ್ನು ಆವರಿಸಿಕೊಂಡಿದ್ದಾರೆ. ಮುಂದಿನ ವರ್ಷ ಎಲ್ಲಾ ಅವಾರ್ಡ್‌ಗಳನ್ನು ಬಾಚಿಕೊಳ್ಳುತ್ತಾರೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
PS 1 ಗಿಂತ PS 2 ಸೂಪರ್
" ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ನೋಡಿ ಮುಗಿಸಿದೆ. ಉತ್ತಮವಾಗಿ ಸಿನಿಮಾ ತೆಗೆದಿದ್ದಾರೆ. 'ಪೊನ್ನಿಯಿನ್ ಸೆಲ್ವನ್ 1'ಕ್ಕಿಂತ ಇದು ಚೆನ್ನಾಗಿದೆ. ಕಾರ್ತಿ ರಾಕಿಂಗ್, ಜಯಂ ರವಿ ಬ್ಲಾಸ್ಟ್ ಮಾಡಿದ್ದಾರೆ. ತ್ರಿಶಾ, ಚಿಯಾನ್ ವಿಕ್ರಮ್ ಅದ್ಭುತ. ಕಾಲಿವುಡ್‌ನಲ್ಲಿ ವರ್ಷಗಳ ಬಳಿಕ ಬ್ಲಾಕ್‌ಬಸ್ಟರ್ ಸೀಕ್ವೆಲ್ ಸಿಕ್ಕಿದೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
"ಹಣ ವಾಪಾಸ್ ಕೊಡಿ"
'ಪೊನ್ನಿಯಿನ್ ಸೆಲ್ವನ್ 2'ಗೆ ಕೇವಲ ಅದ್ಭುತ ಪ್ರತಿಕ್ರಿಯೆಗಳಷ್ಟೇ ಸಿಕ್ಕಿಲ್ಲ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಕೆಲವರು ಈ ಸಿನಿಮಾವನ್ನು ನೋಡಿ ನೆಗೆಟಿವ್ ಕಮೆಂಟ್‌ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು "ಪೊನ್ನಿಯಿನ್ ಸೆಲ್ವನ್ 2 ತುಂಬಾನೇ ಕೆಟ್ಟದಾಗಿದೆ. ನನಗೆ ಹಣ ಪಾಸ್ ಬೇಕು ಅಂತ ಡಿಮ್ಯಾಂಡ್ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ
" ಪೊನ್ನಿಯಿನ್ ಸೆಲ್ವನ್ ವಿಮರ್ಶೆ- ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನಿರೀಕ್ಷೆ ಇಲ್ಲದೆ ಸಿನಿಮಾವನ್ನು ನೋಡಿ. ಸಿನಿಮಾ ತಂಡ ಒಳ್ಳೆ ಎಫರ್ಟ್ ಆಗಿದೆ. ಆದರೆ, ಕೊನೆವರೆಗೂ ಎಂಗೇಜ್ ಮಾಡುವಲ್ಲಿ ಸೋತಿದೆ. ತಪ್ಪು ತಿಳುವಳಿಕೆ ಬಳಿಕ ಎಲ್ಲದಕ್ಕೂ ಕಾರಣ." ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











