Vidaamuyarchi Twitter Review:ಅಜಿತ್ ಕುಮಾರ್ ಅದ್ಭುತ.. ಫಸ್ಟ್ ಹಾಫ್ ಸ್ಲೋ.. ಮತ್ತೆ ಇನ್ನೇನು?

ಬಹಳ ದಿನಗಳಿಂದ ಅಜಿತ್ ಅಭಿಮಾನಿಗಳು 'ವಿಡಾಮುಯಾರ್ಚಿ' ಸಿನಿಮಾ ರಿಲೀಸ್‌ಗಾಗಿ ಎದುರು ನೋಡುತ್ತಿದ್ದರು. ಕೊನೆಗೂ ಇಂದು (ಫೆಬ್ರವರಿ 6) ವಿಶ್ವದಾದ್ಯಂತ ಅಜಿತ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಆರು ಗಂಟೆಯಿಂದಲೇ ಫ್ಯಾನ್ಸ್‌ ಶೋಗಳನ್ನು ಪ್ರದರ್ಶನ ಮಾಡಲಾಗಿದೆ. ಇದಕ್ಕೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.

ಅಜಿತ್ ಕುಮಾರ್ ಹಾಗೂ ತ್ರಿಶಾ ಕಾಂಬಿನೇಷನ್ ಸಿನಿಮಾ 'ವಿಡಾಮುಯಾರ್ಚಿ' ಕರ್ನಾಟಕದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸುಮಾರು 285 ಸ್ಕ್ರೀನ್‌ಗಳಲ್ಲಿ ಈ ಸಿನಿಮಾದ ಫ್ಯಾನ್ಸ್ ಶೋಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಶೇ.85ರಷ್ಟು ಹೌಸ್‌ಪುಲ್ ಪ್ರದರ್ಶನ ಕಂಡಿವೆ. ಬೆಂಗಳೂರಿನಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕಂಡಿದೆ.

Ajith Trisha film Vidaamuyarchi twitter review

ಸಿನಿಮಾ ನೋಡಿ ಹೊರ ಬಂದವರು ಈಗಾಗಲೇ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಹಳ ದಿನಗಳಾದ್ಮೇಲೆ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹಾಗಿದ್ದರೆ, ಅಜಿತ್ ಕುಮಾರ್ ಹಾಗೂ ತ್ರಿಶಾ ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ಹೇಗಿದೆ ರೆಸ್ಪಾನ್ಸ್? ಅಂತ ನೋಡುವುದಾರೇ.

"ಸ್ಲೋ ಅಂಡ್ ಸ್ಟಡಿ"

" ಅಜಿತ್ ಕುಮಾರ್ ಸಿನಿಮಾ ವಿಡಾಮುಯಾರ್ಚಿ ಫಸ್ಟ್ ಡೇ ಫಸ್ಟ್ ಶೋ. ಮೊದಲಾರ್ಧ ಸ್ಲೋ ಅಂಡ್ ಸ್ಡಡಿಯಾಗಿದೆ. ಅಜಿತ್ ಕುಮಾರ್ ನಟನೆ ಅದ್ಭುತ ಮತ್ತು ಕಾಮ್ ಆಗಿದೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಭಯಂಕರ. ಅನಿರುದ್ಧ್ ಕೊಟ್ಟಿರುವ ಸ್ಲೋ ಮೆಲೋಡಿ ಹಾಡುಗಳು ಸೂಪರ್ ಆಗಿವೆ." ಎಂದು ನೆಟ್ಟಿಗರೊಬ್ಬರು 'ವಿಡಾಮುಯಾರ್ಚಿ' ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ.

ಅಜಿತ್-ತ್ರಿಶಾ ರೊಮ್ಯಾನ್ಸ್ ಡಲ್

"ಅಜಿತ್ ಕುಮಾರ್ ತೆರೆಮೇಲೆ ಕಾಣಿಕೊಂಡ ರೀತಿ ಸೂಪರ್ ಆಗಿದೆ. ಅಜಿತ್-ತ್ರಿಶಾ ರೊಮ್ಯಾಂಟಿಕ್ ದೃಶ್ಯಗಳು ಡಲ್ ಆಗಿವೆ. ಅರ್ಜುನ್, ರೆಜಿನಾ ಜೋಡಿ ಇದಕ್ಕೆ ಹತ್ತಿರದಲ್ಲಿದೆ. ಅನಿರುದ್ಧ್ ಮ್ಯೂಸಿಕ್ ಓಕೆ. ಹಾಡುಗಳು ಚೆನ್ನಾಗಿವೆ. ಅಜರ್‌ಬೈಜಾನ್ ಅನ್ನು ತೋರಿಸುವ ದೃಶ್ಯಗಳು ಸೂಪರ್. ಕತೆಯಲ್ಲಿ ಧಮ್ ಇಲ್ಲ. ಎಮೋಷನಲ್ ಸೀನ್‌ಗಳು ಇಲ್ಲ. ಟ್ವಿಸ್ಟ್‌ಗಳು ಇಲ್ಲ. ಮಜಾ ಕೊಡುವಂತಹ ದೃಶ್ಯಗಳಿಲ್ಲ. ನಿರೂಪಣೆ ಪ್ಲ್ಯಾಟ್ ಮತ್ತು ಡ್ರ್ಯಾಗ್ ಆಗಿದೆ. ಸಿಕ್ಕಾಪಟ್ಟೆ ನಿರಾಸೆಯಾಗಿದೆ" ಎಂದು ಮೂವಿ ವಿಮರ್ಶೆ ಮಾಡುವವರೊಬ್ಬರ ಅಭಿಪ್ರಾಯ.


ಆಕ್ಷನ್, ಟ್ಟಿಸ್ಟ್ & ಟರ್ನ್ಸ್

"ಮೊದಲಾರ್ಥ ಸೂಪರ್ ಆಗಿದೆ. ಸೆಕೆಂಡ್ ಹಾಫ್‌ನಲ್ಲಿ ಪದ್ಮಭೂಷಣ ಅಜಿತ್ ಅವರನ್ನು ತೋರಿಸಿರುವ ರೀತಿ ಬೆಂಕಿ. ಸೀಟ್‌ನ ತುತ್ತ ತುದಿಯಲ್ಲಿ ಕೂತು ನೋಡುವಂತಹ ಥ್ರಿಲ್ಲರ್ ಸ್ಟೋರಿ. ಇದರೊಂದಿಗೆ ಆಕ್ಷನ್ ಸೀನ್‌ಗಳು, ಟ್ವಿಸ್ಟ್ ಅಂಡ್ ಟರ್ನ್‌ಗಳು ಇವೆ. ತಮಿಳು ಚಿತ್ರರಂಗದಲ್ಲಿ ಇಂತಹ ದೃಶ್ಯಗಳು ಹಾಗೂ ಸೌಂಡ್ ಕ್ವಾಲಿಟಿಯನ್ನು ಹಿಂದೆಂದೂ ನೋಡಿಯೇ ಇಲ್ಲ. ಅನಿರುದ್ಧ್ ಹಿನ್ನಲೆ ಸಂಗೀತ ಅದ್ಭುತ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.


ಅಜಿತ್ ಸೂಪರ್.. ಸ್ಕ್ರೀನ್‌ಪ್ಲೇ ಡ್ರ್ಯಾಗ್

"ಅಜಿತ್ ಮಿಂಚಿದ್ದಾರೆ. ಆದರೆ, ಸ್ಕ್ರೀನ್‌ಪ್ಲೇ ಡ್ರ್ಯಾಗ್ ಇದೆ. ಸ್ಟೈಲಿಶ್ ಥ್ರಿಲ್ಲರ್, ಎಮೋಷನಲ್ ಸೀನ್‌ಗಳಲ್ಲಿ ಧಮ್ ಇಲ್ಲ. ಅಜಿತ್ ಎಲ್ಲರಿಗಿಂತ ಸೂಪರ್, ಆದರೆ, ಸ್ಟೋರಿಯನ್ನು ಎಳೆದಿದ್ದಾರೆ ಅಂತ ಅನಿಸುತ್ತೆ. ಈ ಸಿನಿಮಾದ ದೃಶ್ಯಗಳು ಮಾತ್ರ ಅದ್ಭುತ. ಆದರೆ, ಸಿನಿಮಾ ನಿಧಾನಗತಿಯಲ್ಲಿದೆ. ಅನಿರುದ್ಧ ಹಿನ್ನೆಲೆ ಸಂಗೀತ ರಾಕಿಂಗ್ ಆಗಿದೆ." ಎಂದು ಇನ್ನೊಬ್ಬರು ನೆಟ್ಟಿಗರು ಅಸಮಧಾನ ಹೊರ ಹಾಕಿದ್ದಾರೆ.

ಪ್ರತಿ ಸೀನ್‌ನಲ್ಲೂ ಸೋಲ್ತಾನೆ

"ಮೊದಲಾರ್ಧದಲ್ಲಿ ಹೀರೋ ಪ್ರತಿ ಸೀನ್‌ನಲ್ಲೂ ಸೋಲುತ್ತಾನೆ. ಅದಕ್ಕೆ ಸೆಕೆಂಡ್‌ ಹಾಫ್‌ನಲ್ಲಿ ಪ್ರತಿ ಸೀನ್‌ನಲ್ಲೂ ತಿರುಗೇಟು ಕೊಡುತ್ತಾನೆ. ಸಿನಿಮಾದಲ್ಲಿ ಇಂತಹ ಟ್ರೀಟ್ಮೆಂಟ್ ಅನ್ನು ನೋಡಿರಲಿಲ್ಲ. ತುಂಬಾ ಒಳ್ಳೆಯ ಸಿನಿಮಾ. ಸೆಕೆಂಡ್ ಹಾಫ್ ಅದ್ಭುತ. ಮೊದಲಾರ್ಧ ನಿಮಗೆ ಬೋರ್ ಅಂತ ಅನಿಸಬಹುದು. ಆದರೆ ಸೆಕೆಂಡ್ ಹಾಫ್‌ನಲ್ಲಿ ಅದೆಲ್ಲವೂ ಕನೆಕ್ಟ್ ಆಗುತ್ತೆ. ವಿಡಾಮುಯಾರ್ಚಿ ಸೂಪರ್ ಹಿಟ್ ಹೀರೊಯಿಸಂ ಸಿನಿಮಾ" ಎಂದು ಫಸ್ಟ್ ಹಾಫ್ ಸ್ಲೋ ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

More from Filmibeat

English summary
Ajith Kumar and Trisha film Vidaamuyarchi twitter review in Kannada.
Read more about: ajith kumar trisha review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X