Bhoot Bangla Review: 'ಭೂತ ಬಂಗ್ಲಾ'ದಲ್ಲಿ ಅಕ್ಷಯ್ ಕುಮಾರ್-ಪ್ರಿಯದರ್ಶನ್ ಜಾದು ಮಾಡಿದರೇ?

Rating:
2.0/5

ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ನಿರಂತರವಾಗಿ ಸೋಲುತ್ತಿವೆ. ಆದರೂ, ಅವರಿಗೆ ಅವಕಾಶಗಳೇನು ಕಮ್ಮಿಯಾಗಿಲ್ಲ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಇಂದು (ಏಪ್ರಿಲ್ 17) ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಅದುವೇ 'ಭೂತ್ ಬಂಗ್ಲಾ'. ಇದೊಂದು ಹಾರರ್-ಕಾಮಿಡಿ ಸಿನಿಮಾ ಆಗಿದ್ದು ಜೊತೆಗೆ ಥ್ರಿಲ್ಲಿಂಗ್ ದೃಶ್ಯಗಳನ್ನು ಕೂಡ ನೋಡುವುದಕ್ಕೆ ಸಿಗುತ್ತೆ.

'ಭೂತ್ ಬಂಗ್ಲಾ' ಬಾಲಿವುಡ್‌ನ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಅದಕ್ಕೆ ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್. ಇವರಿಬ್ಬರೂ ಒಟ್ಟಿಗೆ ಸೇರಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿವೆ. ಹೀಗಾಗಿ ಬಹಳ ದಿನಗಳ ಬಳಿಕ ಪ್ರಿಯದರ್ಶನ್ ಹಾಗೂ ಅಕ್ಷಯ್ ಕುಮಾರ್ ಈ ಸಿನಿಮಾ ಮೂಲಕ ಜೊತೆಯಾಗಿದ್ದಾರೆ.

Akshay Kumar  Paresh Rawal  Tabu starrer Bhoot Bangla Movie Review in Kannada and Rating

ಅಲ್ಲದೇ ಬಾಲಿವುಡ್‌ನಲ್ಲಿ ಹಾರರ್‌-ಕಾಮಿಡಿ ಜಾನರ್‌ನ ಸಿನಿಮಾಗಳು ಗೆದ್ದಿರೋದೆ ಹೆಚ್ಚು. ಹೀಗಾಗಿ 'ಭೂತ್ ಬಂಗ್ಲಾ' ಮೇಲೆ ನಿರೀಕ್ಷೆಗಳು ಹೆಚ್ಚಿತ್ತು. ಹಾಗಿದ್ದರೆ, ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್ ವರ್ಕ್ ಆಗಿದೆಯಾ? ಈ ಸಿನಿಮಾದ ಕಥೆ ಏನು? ಸಿನಿಮಾದಲ್ಲಿ ನಟಿಸಿರುವ ಪಾತ್ರಗಳ ಪರ್ಫಾಮೆನ್ಸ್ ಹೇಗಿದೆ? ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಭೂತ್ ಬಂಗ್ಲಾ' ಕಥೆಯೇನು?

ಮಂಗಲಪುರ ಅನ್ನೋ ಊರಿನಿಂದ ಈ ಸಿನಿಮಾ ಕಥೆ ಆರಂಭ ಆಗುತ್ತೆ. ಈ ಹಳ್ಳಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಹೊಸದಾಗಿ ಮದುವೆ ಆಗಿರುವ ವಧು ಕಣ್ಮರೆಯಾಗುತ್ತಿರುತ್ತಾರೆ. ಈ ಘಟನೆಯ ಹಿಂದೆ ವಧುಸುರ ಎಂಬ ರಾಕ್ಷಸನೇ ಕಾರಣ ಎಂದು ಹಳ್ಳಿಗರು ನಂಬಿರುತ್ತಾರೆ. ಸಿನಿಮಾ ಆರಂಭದಲ್ಲಿಯೇ ಹಾರರ್ ಹಾಗೂ ಕಾಮಿಡಿ ಸುಳಿವು ನೀಡುತ್ತಾ ಸಿನಿಮಾ ಮುಂದಕ್ಕೆ ಸಾಗುತ್ತೆ. ಇನ್ನೊಂದು ಟ್ರ್ಯಾಕ್‌ನಲ್ಲಿ ಲಂಡನ್‌ನಲ್ಲಿರುವ ಅರ್ಜುನ್ (ಅಕ್ಷಯ್ ಕುಮಾರ್‌) ತನ್ನ ತಂಗಿ ಮೀರಾ (ಮಿಥಿಲಾ ಪಾಲ್ಕರ್) ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಅರ್ಜುನ್ ತಾತಾ ನಿಧನರಾದ ಸುದ್ದಿ ಅವರ ಬದುಕನ್ನೇ ಬದಲಿಸುತ್ತೆ. ತನ್ನ ಅಜ್ಜ ಬಿಟ್ಟು ಹೋದ ಪ್ಯಾಲೇಸ್‌ ಮಂಗಲಪುರದಲ್ಲಿ ತಂಗಿಯ ಮದುವೆ ನಡೆಸುವ ತೀರ್ಮಾನ ಮಾಡುತ್ತಾರೆ. ಊರಿನವರೆಲ್ಲರೂ ಈ ಪ್ಯಾಲೇಸ್‌ನಲ್ಲಿ ಮದುವೆ ಮಾಡುವುದು ಒಳ್ಳೆಯದಲ್ಲ ಅಂದರೂ ಅರ್ಜುನ್ ಅವರ ಮಾತನ್ನು ಒಪ್ಪುವುದಿಲ್ಲ. ಮತ್ತೊಂದು ಟ್ರ್ಯಾಕ್‌ನಲ್ಲಿ ಕಳೆದ ಹೋದ ತನ್ನ ಸಹೋದರಿಯನ್ನು ಹುಡುಕಿಕೊಂಡು ವಾಮಿಕಾ ಗಬ್ಬಿ ಇದೇ ಪ್ಯಾಲೇಸ್‌ ಬರುತ್ತಾರೆ. ಮುಂದೆ ಕಥೆ ಹೇಗೆ ಸಾಗುತ್ತೆ ಅನ್ನೋದೇ ಕಥೆ.

ಪರ್ಫಾಮೆನ್ಸ್ ಹೇಗಿದೆ?

ಅಕ್ಷಯ್ ಕುಮಾರ್ ಸಿನಿಮಾ ಜೀವಾಳ. ಎಂದಿನಂತೆ ಹಾಸ್ಯದ ದೃಶ್ಯಗಳಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಕೆಲವು ದೃಶ್ಯಗಳಲ್ಲಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟರಾದ ಅಸ್ರಾನಿ ಹಾಗೂ ರಾಜ್‌ಪಾಲ್‌ ಯಾದವ್ ತಮಗೆ ಸಿಕ್ಕಿರುವ ದೃಶ್ಯಗಳಲ್ಲಿ ಮಿಂಚಿದ್ದಾರೆ. ಇವರೊಂದಿಗೆ ಹಿರಿಯ ನಟ ಪರೇಶ್ ರಾವಲ್, ಜಿಸ್ಸು ಸೇನ್‌ಗುಪ್ತಾ ಹಾಗೂ ರಾಜೇಶ್ ಶರ್ಮಾ ಅವರ ಪಾತ್ರ ಚೆನ್ನಾಗಿದೆ. ಆದರೆ, ನಟಿ ವಾಮಿಕಾ ಗಬ್ಬಿ, ಟಬು ಹಾಗೂ ಮಿಥಿಲಾ ಪಲ್ಲರ್ ಅವರನ್ನು ಬಳಸಿಕೊಳ್ಳುವಲ್ಲಿ ಪ್ರಿಯದರ್ಶನ್ ಸೋತಿದ್ದಾರೆ.

Also Read
Bhooth Bangla X Review ; ಅಕ್ಷಯ್ ಕುಮಾರ್ 'ಭೂತ್‌ ಬಂಗ್ಲಾ'ದಲ್ಲಿದೆಯಾ ಕಾಮಿಡಿ ಕಿಕ್ ? 14 ವರ್ಷದ ನಂತರ ಗೆಲ್ಲುತ್ತಾ ಜೋಡಿ ?
Bhooth Bangla X Review ; ಅಕ್ಷಯ್ ಕುಮಾರ್ 'ಭೂತ್‌ ಬಂಗ್ಲಾ'ದಲ್ಲಿದೆಯಾ ಕಾಮಿಡಿ ಕಿಕ್ ? 14 ವರ್ಷದ ನಂತರ ಗೆಲ್ಲುತ್ತಾ ಜೋಡಿ ?

ಸಿನಿಮಾ ಪ್ಲಸ್ ಏನು?

ಪ್ರಿಯದರ್ಶನ್ ಸ್ಕ್ರೀನ್‌ಪ್ಲೇನಲ್ಲಿ ಎಡವಿದ್ದರೂ, ಹಾರರ್-ಕಾಮಿಡಿ ಶೈಲಿಯ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಇಷ್ಟ ಆಗುತ್ತೆ. ಅದು ಬಿಟ್ಟರೆ, ಅಕ್ಷಯ್ ಕುಮಾರ್, ಪರೇಶ್ ರಾವಲ್, ಅಸ್ರಾನಿ ಹಾಗೂ ರಾಜ್‌ಪಾಲ್ ಯಾದವ್ ಪಾತ್ರಗಳು ಮನರಂಜನೆ ನೀಡುತ್ತವೆ.

Akshay Kumar  Paresh Rawal  Tabu starrer Bhoot Bangla Movie Review in Kannada and Rating

ಸಿನಿಮಾದ ಮೈನಸ್ ಪಾಯಿಂಟ್ ಏನು?

ಹಾರರ್-ಕಾಮಿಡಿ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರನ್ನು ಪ್ರತಿಯೊಂದು ದೃಶ್ಯದಲ್ಲಿ ಹಿಡಿದಿಡಬೇಕಿತ್ತು. ಆದರೆ, ಅದರಲ್ಲಿ ಪ್ರಿಯದರ್ಶನ್ ಸೋತಿದ್ದಾರೆ. ಸಿನಿಮಾದ ಕಥೆ ಗಮನ ಸೆಳೆದರೂ, ಅದನ್ನು ತೆರೆಮೇಲೆ ಕಟ್ಟಿಕೊಡುವಲ್ಲಿ ಹಿರಿಯ ನಿರ್ದೇಶಕ ಪ್ರಿಯದರ್ಶನ್ ಎಡವಿದ್ದಾರೆ. ಸಿನಿಮಾ ಕಥೆ ಪ್ರೇಕ್ಷಕರಿಗೆ ಇಂಟ್ರೆಸ್ಟಿಂಗ್ ಅಂತ ಅನಿಸೋ ಹೊತ್ತಿಗೆ ಬೇರೆಯದ್ದೇ ಟ್ರ್ಯಾಕ್‌ಗೆ ಜಾರುತ್ತೆ. ಅದು ಕೆಲವು ಕಡೆಗಳಲ್ಲಿ ಸಿನಿಮಾದ ತೀವ್ರತೆಗೆ ಧಕ್ಕೆಯುಂಟು ಮಾಡುತ್ತೆ.

'ಭೂತ್ ಬಂಗ್ಲಾ' ಇಷ್ಟ ಆಗುತ್ತಾ?

ಬಾಲಿವುಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಹಾರರ್-ಕಾಮಿಡಿ ಜಾನರ್ ಸಿನಿಮಾಗಳ ಸಾಲಿನಲ್ಲಿ ಭೂತ್ ಬಂಗ್ಲಾ ಹಿಂದೆ ಬಿದ್ದಿದೆ. ಹಾಗಂತ ಕೆಟ್ಟ ಸಿನಿಮಾವೇನೂ ಅಲ್ಲ. ಆದರೆ, ಸಿನಿಮಾದಲ್ಲಿ ಹೊಸತನವೇನು ಇಲ್ಲ. ಹೀಗಾಗಿ ಪ್ರೇಕ್ಷಕರಿಗೆ ಸಿನಿಮಾ ಅದ್ಭುತ ಅಂತೇನು ಅನಿಸುವುದಿಲ್ಲ. ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್‌ ಸಿನಿಮಾ ಅಂತ ಅನಿಸುವುದಿಲ್ಲ. ಹೀಗಾಗಿ ಸಿನಿಮಾ ಮಂದಿಗೆ ಇಷ್ಟ ಆಗದೆ ಇರುವ ಸಾಧ್ಯತೆನೂ ಇದೆ.

English summary
Akshay Kumar, Paresh Rawal, Tabu starrer Bhoot Bangla Movie Review in Kannada and Rating.
Read more about: akshay kumar tabu hindi movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X