Pushpa 2 First Half Review:ಪುಷ್ಪ-ಶೇಖಾವತ್ ಜಿದ್ದಾಜಿದ್ದಿ.. ಗ್ಯಾಪ್‌ನಲ್ಲೊಂದು ಪೀಲಿಂಗ್ಸು.. ಅಷ್ಟೇ ಫಸ್ಟ್ ಹಾಫ್

Rating:
3.0/5
Star Cast: Allu Arjun, Rashmika Mandanna, Fahadh Faasil
Director: Sukumar

ಪುಷ್ಪ ಅಲಿಯಾಸ್ ಪುಷ್ಪರಾಜ್ ಮತ್ತೆ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾಗಿದೆ. ಬಹಳ ದಿನಗಳಿಂದ ಇದೊಂದು ಕ್ಷಣಕ್ಕಾಗಿ ಕಾದು ಕೂತಿದ್ದ ಅಲ್ಲು ಅರ್ಜುನ್ ಫ್ಯಾನ್ಸ್‌ ಥಿಯೇಟರ್ ಮುಂದೆ ಹಬ್ಬ ಮಾಡುವುದಕ್ಕೆ ಶುರು ಮಾಡಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ ' ಅವತಾರ ಕಣ್ತುಂಬಿಕೊಳ್ಳುವುದಕ್ಕೆ ಕಾದಿದ್ದರು. ಮೊದಲ ಪಾರ್ಟ್‌ನಲ್ಲಿ 'ಪುಷ್ಪ' ಅಬ್ಬರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು.

ಇದೇ ಜೋಷ್‌ನಲ್ಲಿಯೇ ನಿರ್ದೇಶಕ ಸುಕುಮಾರ್ ' ಪುಷ್ಪ 2' ತೆರೆಮೇಲೆ ತರುವುದಕ್ಕೆ ನಿರ್ಧರಿಸಿದ್ದರು. 'ಪುಷ್ಪ'ಗೆ ಸಿಕ್ಕ ರೆಸ್ಪಾನ್ಸ್ ನೋಡಿದ ಬಳಿಕ ಕಥೆ ಹಾಗೂ ಸ್ಕ್ರೀನ್ ಪ್ಲೇನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದರು. ನಿರ್ಮಾಪಕರು ಬಜೆಟ್‌ ಅನ್ನು ಏರಿಕೆ ಮಾಡಿದ್ದರು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡು ಸಿನಿಮಾ ಮಾಡಿ, ಈಗ ರಿಲೀಸ್ ಮಾಡುತ್ತಿದ್ದಾರೆ.

Allu Arjun  Rashmika Mandanna movie Pushpa 2 first half review in Kannada and rating

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಬೆಳ್ಳಿ ಪರದೆಗೆ ಕಿಚ್ಚು ಹಚ್ಚುವುದಕ್ಕೆ ಬಂದಿದ್ದಾರೆ. ಪುಷ್ಪ ಅಬ್ಬರಕ್ಕೆ ಕಡಿವಾಣ ಹಾಕುವುದಕ್ಕೆ, ಮೊದಲ ಭಾಗದಲ್ಲಿ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಶೇಖಾವತ್ ನಿಂತಿದ್ದಾನೆ. ಜಾಲಿ ರೆಡ್ಡಿ ಮತ್ತೆ ಚೇತರಿಸಿಕೊಂಡಿರೋ ಹಾಗಿದೆ. ಹಾಗಿದ್ದರೆ, 'ಪುಷ್ಪ 2' ಸಿನಿಮಾದ ಮೊದಲಾರ್ಧ ಹೇಗಿದೆ? ಫಸ್ಟ್ ಹಾಫ್‌ನ ಹೈಲೈಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಫಸ್ಟ್ ಹಾಫ್ ಸ್ಟೋರಿ ಏನು?

'ಪುಷ್ಪ 2' ಟ್ರೈಲರ್‌ನಲ್ಲೇ ಚಿಕ್ಕದೊಂದು ಸುಳಿವು ಸಿಕ್ಕಿತ್ತು. 'ಪುಷ್ಪ' ನ್ಯಾಷನಲ್ ಅಲ್ಲ ಇಂಟರ್‌ನ್ಯಾಷನಲ್ ಅನ್ನೋದನ್ನು ಚಿತ್ರತಂಡವೇ ಬಿಟ್ಟುಕೊಟ್ಟಿತ್ತು. ಅದರಂತೆ ಜಪಾನಿನ ಬಂದರಿನಲ್ಲಿ ನಡೆಯುವ ಸನ್ನಿವೇಶದಿಂದ 'ಪುಷ್ಪ 2' ಸಿನಿಮಾ ಆರಂಭ ಆಗುತ್ತೆ. ಆರಂಭದಿಂದಲೇ ಪುಷ್ಪರಾಜ್ ಅಬ್ಬರ ಬಲು ಜೋರು. ಭರ್ಜರಿ ಆಕ್ಷನ್ ಸೀನ್‌ ಮೂಲಕ ಪುಷ್ಪರಾಜ್ ಎಂಟ್ರಿ ಕೊಡಿಸಿದ್ದಾರೆ ನಿರ್ದೇಶಕ ಸುಕುಮಾರ್. ಹೀರೋ ಇಂಟ್ರುಡಕ್ಷನ್ ಸೀನ್‌ಗೆ ಈ ಕಾರಣಕ್ಕೆ ಭರ್ಜರಿ ಶಿಳ್ಳೆಗಳು ಬೀಳುತ್ತವೆ. ಆಕ್ಷನ್ ಪ್ರಿಯರಿಗೆ ಈ ಆಕ್ಷನ್ ಸೀನ್ ಸಖತ್ ಕಿಕ್ ಕೊಡುತ್ತೆ.

Allu Arjun  Rashmika Mandanna movie Pushpa 2 first half review in Kannada and rating

'ಪುಷ್ಪ' ಆರ್ಭಟಕ್ಕೆ ಶೇಖಾವತ್ ಅಡ್ಡಗಾಲು

ಫಸ್ಟ್ ಪಾರ್ಟ್‌ನ ಕೊನೆಯಲ್ಲಿ ಬರುವ ಶೇಖಾವತ್ 'ಪುಷ್ಪ' ಆರ್ಭಟಕ್ಕೆ ಸವಾಲು ಎಸೆದಿರುತ್ತಾನೆ. ಅದು 'ಪುಷ್ಪ 2'ನಲ್ಲೂ ಮುಂದುವರೆದಿದೆ. ಸಿನಿಮಾದ ಮೊದಲಾರ್ಧದಲ್ಲಿಯೇ ಶೇಖಾವತ್ ಎಂಟ್ರಿ ಕೊಟ್ಟಾಗಿದೆ. ಪುಷ್ಪರಾಜ್ ಅರ್ಭಟಕ್ಕೆ ಶೇಖಾವತ್ ಅಡ್ಡಗಾಲು ಹಾಕುತ್ತಾನೆ. ಆದರೆ, ಪುಷ್ಪರಾಜ್ ವೇಗಕ್ಕೆ ತಡೆಯಾಗಿ ನಿಂತಿದ್ದ ಶೇಖಾವತ್‌ಗೆ ಆರಂಭದಲ್ಲಿಯೇ ತಿರುಗೇಟು ಕೊಡುತ್ತಾನೆ. ಶೇಖಾವತ್ ಪಾತ್ರದಲ್ಲಿ ನಟಿಸಿರುವ ಫಹಾದ್ ಫಾಸಿಲ್ ಪ್ರೇಕ್ಷಕರಿಗೆ ಇಷ್ಟ ಆಗುತ್ತಾನೆ.

ಟೈಟಲ್‌ ಸಾಂಗ್‌ಗೆ ಭರ್ಜರಿ ಸ್ಟೆಪ್ಸ್

ಮೊದಲಾರ್ಧದಲ್ಲಿ ಗಮನ ಸೆಳೆಯೋದು ಟೈಟಲ್ ಸಾಂಗ್. ಅಲ್ಲು ಅರ್ಜುನ್ ಅಂತಹ ಹೀರೋ ಇದ್ಮೇಲೆ ಡ್ಯಾನ್ಸ್ ಇಲ್ಲದೆ ಇದ್ದರೆ ಹೇಗೆ? ಅದಕ್ಕೆ ಪ್ರೇಕ್ಷಕರಲ್ಲಿ ಜೋಷ್ ಕೊಡುವುದಕ್ಕೆ ಭರ್ಜರಿಯಾಗಿ ಸ್ಟೆಪ್ಸ್ ಹಾಕುವಂತಹ ಸಾಂಗ್ ಇದೆ. ಮೊದಲಾರ್ಧದಲ್ಲಿಯೇ 'ಪೀಲಿಂಗ್ಸ್' ಸಾಂಗ್ ಕೂಡ ಬಂದು ಹೋಗುತ್ತೆ. ರಶ್ಮಿಕಾ ಹಾಗೂ ಅಲ್ಲುಅರ್ಜುನ್ ಸ್ಟೆಪ್ಸ್ ತೆರೆಮೇಲೆ ವಾವ್ಹ್ ಅಂತ ಅನಿಸುತ್ತೆ.

ಫಸ್ಟ್ ಹಾಫ್ ಹೇಗಿದೆ?

'ಪುಷ್ಪ' ಫಸ್ಟ್ ಹಾಫ್ ಇಂಟ್ರುಡಕ್ಷನ್, ಬಿಲ್ಡಪ್, ಸಾಂಗ್‌ಗಳಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಸಮರ ಆಗಾಗ ಕಿಕ್ ಕೊಡುತ್ತೆ. ಜಗಪತಿ ಬಾಬು ಫಸ್ಟ್ ಹಾಫ್‌ನ ಸರ್ಪ್ರೈಸ್. ಅದು ಬಿಟ್ಟರೆ, ಅಸಲಿ ಕಥೆ ಇನ್ನೂ ಶುರುವಾಗಿಲ್ಲ. ಇನ್ನೂ ಡಾಲಿ ಧನಂಜಯ್ ಬರೋದು ಬಾಕಿಯಿದೆ. ಇಂಟರ್ವಲ್‌ನಲ್ಲಿ ಸೆಕೆಂಡ್ ಹಾಫ್‌ನಲ್ಲಿ ಏನು ನಡೆಯಬಹುದು ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದರಿಂದ ನಿರ್ದೇಶಕ ಸುಕುಮಾರ್ ಹೇಗೆ ಕಥೆ ಹೆಣೆದಿರಬಹುದು ಅನ್ನೋದು ಕುತೂಹಲ.

More from Filmibeat

English summary
Allu Arjun, Rashmika Mandanna movie Pushpa 2 first half review in Kannada and rating;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X