Kathanar Trailer Review: ಅನುಷ್ಕಾ ಶೆಟ್ಟಿಯ 'ಕಥನಾರ್' ಸಿನಿಮಾ ಟ್ರೈಲರ್ ಹೇಗಿದೆ?

ಕರಾವಳಿಯ ಸ್ವೀಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಿಂದ ಕೊಂಚ ಮಟ್ಟಿಗೆ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ಬಹಳ ದಿನಗಳ ಬಳಿಕ ನಟಿಸಿದ ತೆಲುಗು ಸಿನಿಮಾ 'ಘಾಟಿ' ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಹೆಚ್ಚು ಕಡಿಮೆ 'ಘಾಟಿ' ಸಿನಿಮಾದ ಜೊತೆಯಲ್ಲಿಯೇ ಶುರುವಾಗಿದ್ದ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ 'ಕಥನಾರ್' ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.

ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಲೆಯಾಳಂ ಚಿತ್ರ 'ಕಥನಾರ್' ಟ್ರೈಲರ್ ರಿಲೀಸ್ ಮಾಡಲಾಗಿದೆ. ಕೇರಳದ ಶ್ರೀಮಂತ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ 'ಶ್ರೀ ಗೋಕುಲಂ ಮೂವೀಸ್' ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದು ಅನುಷ್ಕಾ ಶೆಟ್ಟಿಗೆ ಕಮ್ ಬ್ಯಾಕ್ ಸಿನಿಮಾ ಆಗಬಹುದೆಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.

Anushka Shetty Pan India movie Kathanar Trailer review in Kannada

'ಕಥನಾರ್' ಸಿನಿಮಾಗೆ ರೋಜಿನ್ ಥಾಮಸ್ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಅನ್ನು ಚಿತ್ರತಂಡ ರಿಳಿಸ್ ಮಾಡಿದೆ. ಭಾರೀ ಕುತೂಹಲದೊಂದಿಗೆ ಕಾಯುತ್ತಿದ್ದ ಅನುಷ್ಕಾ ಅಭಿಮಾನಿಗಳಿಗೆ ಸ್ವಲ್ಪ ಸಿಹಿ.. ಸ್ವಲ್ಪ ಕಹಿ ಸಿಕ್ಕಿದೆ ಅದ್ಯಾಕೆ? 'ಕಥನಾರ್' ಟ್ರೈಲರ್ ಹೇಗಿದೆ? ಹೈಲೈಟ್‌ಗಳೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಇನ್ನೊಂದು ಕಡೆ ಮಾಲಿವುಡ್‌ನ ಸ್ಟಾರ್ ನಟ ಜಯಸೂರ್ಯ, ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ, ಕುಲಪ್ರೀತ್ ಯಾದವ್ ಸೇರಿದಂತೆ ಹಲವು ಮಂದಿ ಕಲಾವಿದರು ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅನುಷ್ಕಾ ಶೆಟ್ಟಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಇರೋದ್ರಿಂದ ಎಲ್ಲರ ಗಮನ ಇಲ್ಲೇ ಇದೆ.

'ಕಥನಾರ್' ಟ್ರೈಲರ್‌ನಲ್ಲಿ ಅನುಷ್ಕಾ ಶೆಟ್ಟಿ ಪಾತ್ರವನ್ನು ಬಹಿರಂಗ ಪಡಿಸಿಲ್ಲ. ಅವರ ಕ್ಲೋಸ್ ಅಪ್ ಝಲಕ್‌ಗಳನ್ನು ತೋರಿಸಿದ್ದಾರೆ. ಅವರ ಪಾತ್ರ ಹಾಗೂ ಲುಕ್ ಅನ್ನು ಟ್ರೈಲರ್‌ನಲ್ಲಿ ರಿವೀಲ್ ಮಾಡಿಲ್ಲ. ಹೀಗಾಗಿ ಅವರ ಅಭಿಮಾನಿಗಳಿಗೆ ನಿರಾಸೆ ಆಗಬಹುದು. ಆದರೆ, ಕಾಣಿಸಿಕೊಳ್ಳುವ ಝಲಕ್‌ನಲ್ಲಿ ಸುಂದರವಾಗಿ ಕಾಣುತ್ತಾರೆ. ಅದರಿಂದ ಅಭಿಮಾನಿಗಳಿಗೆ ಖುಷಿನೂ ಆಗಬಹುದು.

Anushka Shetty Pan India movie Kathanar Trailer review in Kannada

ಈ ಮಲಯಾಳಂ ಸಿನಿಮಾ ಉತ್ತಮವಾದ ಕಂಟೆಂಟ್‌ ಅನ್ನು ಹೊತ್ತು ಬಂದಿದೆ ಎಂದು ಅನಿಸುತ್ತಿದೆ. ಟ್ರೈಲರ್‌ನಲ್ಲಿ ಸಂಭಾಷಣೆ ಹೆಚ್ಚಿದೆ. ಈ ಡೈಲಾಗ್‌ಗಳ ಮೂಲಕ ಸಿನಿಮಾದ ಥೀಮ್ ಅನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರಕ್ಕಾಗಿ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿರುವುದನ್ನು ಅದ್ಭುತ ದೃಶ್ಯಗಳು ತೋರಿಸುತ್ತವೆ. ಹಾಗೇ ಸಿನಿಮಾದ ಪಾತ್ರಗಳು ಕೂಡ ಅಷ್ಟೇ ಪವರ್‌ಫುಲ್ ಆಗಿವೆ.

ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ನಿರ್ಮಿಸಿರುವ ಈ ಸಿನಿಮಾ ಪಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ 'ಕಥನಾರ್' ಸಿನಿಮಾದ ಕನ್ನಡ ಟ್ರೈಲರ್ ಕೂಡ ರಿಲೀಸ್ ಆಗಿದೆ. ಕನ್ನಡದ ಡಬ್ ವರ್ಷನ್ ಟ್ರೈಲರ್ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ಜಯಸೂರ್ಯ ಮತ್ತು ಪ್ರಭುದೇವ ಅವರ ಪಾತ್ರಗಳು ಗಮನ ಸೆಳೆಯುತ್ತವೆ. ಅವರ
ತಾಂತ್ರಿಕವಾಗಿಯೂ ಸಿನಿಮಾ ಅತ್ಯಂತ ಶ್ರೀಮಂತವಾಗಿರೋ ಸುಳಿವು ಸಿಕ್ಕಿದೆ. ವಿ.ಎಫ್.ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸಗಳು ಉನ್ನತ ಮಟ್ಟದಲ್ಲಿದ್ದು, ಅದ್ಭುತ ದೃಶ್ಯಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ಈ ಬಹುನಿರೀಕ್ಷಿತ ಸಿನಿಮಾದ ಮೂಲಕ ಅನುಷ್ಕಾ ಶೆಟ್ಟಿ ಅವರ ವೃತ್ತಿಜೀವನವು ಮತ್ತಷ್ಟು ಎತ್ತರಕ್ಕೆ ತಲುಪಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಇನ್ನು ಈ ಸಿನಿಮಾಗೆ ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಕ್ಯಾಮರಾ ವರ್ಕ್ ಇದೆ. ರಾಹುಲ್ ಸುಬ್ರಮಣ್ಯನ್ ಸಂಗೀತ ಸಂಯೋಜಿಸಿದ್ದು, ಸಾಹಿತ್ಯವನ್ನೂ ಬರೆದಿರೋದು ವಿಶೇಷ. ರೋಜಿನ್ ಥಾಮಸ್ ಎಡಿಟಿಂಗ್ ಜೊತೆ ವಿಎಫ್‌ಎಕ್ಸ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ 'ಕಥನಾರ್' ಟ್ರೈಲರ್ ಗಮನ ಸೆಳೆದಿದ್ದು, ಸಿನಿಮಾ ಹೇಗಿದೆಯೋ ನೋಡಬೇಕಿದೆ.

More from Filmibeat

English summary
Anushka Shetty Pan India movie Kathanar Trailer review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X