ಕಮಲ್ ಹಾಸನ್ 'ವಿಶ್ವರೂಪಂ-2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ-2' ಬಿಡುಗಡೆ ಆಗಿದೆ. ಐದು ವರ್ಷದ ನಂತರ ತೆರೆಕಂಡಿರುವ 'ವಿಶ್ವರೂಪಂ-2' ಚಿತ್ರ ಹಿಂದಿನಿಂದಲೂ ಭಾರಿ ನೀರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇಂದು(ಆಗಸ್ಟ್ 10) ಬಿಡುಗಡೆ ಆಗಿರುವ 'ವಿಶ್ವರೂಪಂ-2' ಚಿತ್ರವನ್ನು ಅಭಿಮಾನಿಗಳು ಕಾತುರದಿಂದ ನೋಡಿದ್ದಾರೆ.
ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ 'ವಿಶ್ವರೂಪಂ-2' ಚಿತ್ರ ಬಿಡುಗಡೆ ಆಗಿದೆ. ಸಾಕಷ್ಟು ವಿವಾದಗಳ ಮಧ್ಯೆ ಬಿಡುಗಡೆ ಆಗಿರುವ ಚಿತ್ರದಲ್ಲಿನ ಕಮಲ್ ಹಾಸನ್ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಬಹು ಭಾಷೆಯಲ್ಲಿ ನಿರ್ಮಾಣ ಆಗಿರುವ ಆಕ್ಷನ್-ಥ್ರಿಲ್ಲರ್ 'ವಿಶ್ವರೂಪಂ-2' ಸಿನಿಮಾ ವಿದೇಶದಲ್ಲಿಯೂ ಸ್ಕ್ರೀನಿಂಗ್ ಆಗುತ್ತಿದ್ದು ಸಿನಿಮಾ ನೋಡಿದ ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೆಲವರಿಗೆ ಸಿನಿಮಾ ಮೆಚ್ಚುಗೆ ಆಗಿದ್ದರೆ ಮತ್ತೆ ಕೆಲವರು ಸಿನಿಮಾ ಕಳಪೆ ಆಗಿದೆ ಎಂದಿದ್ದಾರೆ. ಹಾಗಾದರೆ ಮೊದಲ ದಿನ 'ವಿಶ್ವರೂಪಂ-2' ಸಿನಿಮಾ ನೋಡಿದ ಪ್ರೇಕ್ಷಕರು ಕೊಟ್ಟ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ. ಮುಂದೆ ಓದಿ
ಆಕ್ಷನ್-ಕಮರ್ಷಿಯಲ್ ಸಿನಿಮಾ
'ವಿಶ್ವರೂಪಂ-2' ಬಿಡುಗಡೆ ಬಗ್ಗೆ ಪ್ರೇಕ್ಷಕರಿಗೆ ಇನ್ನು ತಿಳಿಯಬೇಕಿದೆ. ಯಾಕೆಂದರೆ ಕೊನೆಯ ಕ್ಷಣದಲ್ಲಿ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲಾಯಿತು. ಸಿನಿಮಾ ಫಸ್ಟ್ ಹಾಫ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಎಮೋಷನಲ್ ಹಾಗೂ ಆಕ್ಷನ್ ಎಲಿಮೆಂಟ್ಸ್ ನಿಂದ ಕೂಡಿದೆ. ಕಮಲ್ ಹಾಸನ್ ಮತ್ತು ತಂಡ ಸಿನಿಮಾಗಾಗಿ ಹಾಕಿರುವ ಶ್ರಮ ತೆರೆ ಮೇಲೆ ಕಾಣುತ್ತೆ. ಸಂಕಲನ, ಸಂಭಾಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾಗೆ ಫ್ಲಸ್ ಪಾಯಿಂಟ್ ಹಿನ್ನಲೆ ಸಂಗೀತ. ಆದರೆ ಕಳಪೆ ವಿಎಫ್ ಎಕ್ಸ್ ಚಿತ್ರ ಗುಣಮಟ್ಟವನ್ನು ಹಾಳು ಮಾಡುತ್ತಿದೆ.
ನಿರಾಸೆ ಮಾಡಿದ 'ವಿಶ್ವರೂಪಂ-2'
ಈ ರೀತಿ ಹೇಳಲು ಬೇಸರ ಆಗುತ್ತಿದೆ. ಸಿನಿಮಾ ನೋಡಿ ತುಂಬಾ ನಿರಾಸೆ ಆಯ್ತು. ಕಮಲ್ ಹಾಸನ್ 'ವಿಶ್ವರೂಪಂ-2' ಅದ್ಬುತ ಸಿನಿಮಾ ಆಗುತ್ತದೆ ಎಂದು ಕೊಂಡಿದ್ದೆ. ಸಿನಿಮಾ ನಿರ್ಮಾಣ ಮಾಡದೇ ಇದ್ದರೆ ಹಣ ಉಳಿಯುತ್ತಿತ್ತು. ನಿರಾಸೆ ಜೊತೆಗೆ ತಲೆ ನೋವು ಬಂತು. ನನಗಷ್ಟೇ ಅಲ್ಲ ನನ್ನ ಸ್ನೇಹಿತರಿಗೂ ಕೂಡ. ಸಿನಿಮಾದಲ್ಲಿ ಕಥೆ ಇಲ್ಲ. ಮೇಕಿಂಗ್ ಚೆನ್ನಾಗಿಲ್ಲ.
'ವಿಶ್ವರೂಪಂ-2' ನೋಡುವ ಮುನ್ನ ಭಾಗ-1 ನೋಡಿ
ವಿಶ್ವರೂಪಂ ಪಾರ್ಟ್ 2 ಇದೇ ಎನ್ನುವುದನ್ನು ಹೇಳಿಕೊಳ್ಳಲು ಎರಡನೇ ಭಾಗವನ್ನು ನಿರ್ಮಾಣ ಮಾಡಿದಂತಿದೆ. ಐದು ವರ್ಷದ ನಂತರ ಬಿಡುಗಡೆ ಆಗುತ್ತಿರುವುದರಿಂದ ಮೊದಲ ಭಾಗವನ್ನು ನೋಡಿಕೊಂಡು ನಂತರ 'ವಿಶ್ವರೂಪಂ-2' ನೋಡುವುದು ಉತ್ತಮ.
ಅದ್ಬುತ ಸಿನಿಮಾ ಅಲ್ಲ ಆದರೆ ಚೆನ್ನಾಗಿದೆ
ಕಮಲ್ ಹಾಸನ್ , ಆಕ್ಷನ್ ಸೀನ್ ಗಳು ಹಿನ್ನಲೆ ಸಂಗೀತ ಎಲ್ಲವೂ ಚೆನ್ನಾಗಿದೆ. ಅಮ್ಮ-ಮಗನ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಕೆಲವು ಕಡೆ ವಿ ಎಫ್ ಎಕ್ಸ್ ಚೆನ್ನಾಗಿ ಆಗಬೇಕಿತ್ತು. ಮೊದಲಾರ್ಧ ನಿಧಾನವಾಗಿ ಸಾಗುತ್ತದೆ. 'ವಿಶ್ವರೂಪಂ-2' ಮಾಸ್ಟರ್ ಪೀಸ್ ಸಿನಿಮಾ ಅಲ್ಲ ಆದರೆ ಚೆನ್ನಾಗಿದೆ.


Click it and Unblock the Notifications











