Captain Miller Review: ಅಭಿನಯಕ್ಕೆ ಧನುಷ್ 'ಕ್ಯಾಪ್ಟನ್'; ಮತ್ತೆ ತಮಿಳರ ಹೃದಯ ಗೆದ್ದ ಶಿವಣ್ಣ

ಈ ಬಾರಿ ಸಂಕ್ರಾಂತಿಗೆ ಕಾಲಿವುಡ್‌ನಲ್ಲಿ ಧನುಷ್ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ 49ನೇ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಿದ್ದಾರೆ. ಈಗಾಗಲೇ ಸಿನಿಮಾ ಟೀಸರ್, ಟ್ರೈಲರ್ ಹಾಗೂ ಹಾಡುಗಳಿಂದ ಸಿನಿಪ್ರಿಯರಲ್ಲಿ ಕುತೂಹಲವನ್ನು ಕೆರಳಿಸಿತ್ತು. ಇದು ರೆಗ್ಯೂಲರ್ ಧನುಷ್ ಸಿನಿಮಾ ಅಲ್ಲ ಅನ್ನೋದು ಗೊತ್ತಾಗಿತ್ತು.

ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಶಿವರಾಜ್‌ಕುಮಾರ್. 'ಜೈಲರ್' ಬಳಿಕ ಶಿವಣ್ಣ ನಟಿಸಿರೋ ಮತ್ತೊಂದು ತಮಿಳು ಸಿನಿಮಾವಿದು. ಇದರಲ್ಲಿ ಶಿವಣ್ಣ ಲುಕ್, ಗೆಟಪ್, ರೋಲ್ ಹೇಗಿದೆ? ಅನ್ನೋದನ್ನು ನೋಡುವುದಕ್ಕೆ ಕನ್ನಡಿಗರಷ್ಟೇ ಅಲ್ಲ. ತಮಿಳರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

Captain Miller Movie Review in Kannada: Shivarajkumar, Dhanush Starrer Action-Drama Movie Review

'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಅಸಲಿಗೆ ಸಿನಿಮಾ ಹೇಗಿದೆ? ಸಿನಿಮಾ ಕಥೆಯೇನು? ಧನುಷ್-ಶಿವಣ್ಣ ಕಾಂಬಿನೇಷನ್ ಹೇಗಿದೆ? ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕ್ಯಾಪ್ಟನ್ ಮಿಲ್ಲರ್' ಯಾರು?

'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಕಥೆ 1930ರಿಂದ ಆರಂಭ ಆಗುತ್ತೆ. ಗ್ರಾಮವೊಂದರ ಅನಾಲೀಸನ್ ಎಂಬ ಕೆಳ ಜಾತಿಯ ಹುಡುಗ ಬ್ರಿಟಿಷರ ಸೇನೆ ಸೇರುತ್ತಾನೆ. ಅಲ್ಲಿ ಆತ ಮಿಲ್ಲರ್ ಆಗಿ ಬದಲಾಗುತ್ತಾನೆ. ಆ ಬಳಿಕ ಮಿಲ್ಲರ್ ಕುಖ್ಯಾತ ವ್ಯಕ್ತಿ ಕ್ಯಾಪ್ಟನ್ ಮಿಲ್ಲರ್ ಆಗಿ ಬದಲಾಗುತ್ತಾನೆ. ಈತ ಜೀವನದಲ್ಲಿ ಎಲ್ಲಾ ಭರವಸೆಯನ್ನೂ ಕಳೆದುಕೊಂಡ ಈ ವ್ಯಕ್ತಿಯನ್ನು ಹಿಡಿಯುವುದಕ್ಕೆ ಬಿಟ್ರಿಷರು ಹುಡುಕಾಟ ನಡೆಸುತ್ತಾರೆ. ಇತ್ತ ಆ ಗ್ರಾಮದವರು ಕೂಡ ಅನಾಲೀಸನ್ ಕೃತಕ್ಕೆ ಬೇಸತ್ತು ಹೋಗಿರುತ್ತಾರೆ. ಹಾಗಿದ್ರೆ, ಬ್ರಿಟಿಷರು 'ಕ್ಯಾಪ್ಟನ್ ಮಿಲ್ಲರ್' ಅನ್ನು ಹಿಡಿಯುತ್ತಾರಾ? ಇದೇ ಸಿನಿಮಾದ ಕಥೆ.

'ಕ್ಯಾಪ್ಟನ್ ಮಿಲ್ಲರ್' ಹೈಲೈಟ್ ಏನು?

ಸ್ವತಂತ್ರ್ಯ ಪೂರ್ವದ ಭಾರತದ ಕಾಲಘಟ್ಟದಲ್ಲಿ ಸಿನಿಮಾ ಕಥೆ ಸಾಗುತ್ತೆ. ಅನಲೀಸನ್ ಉರ್ಫ್ ಇಸ್ಸಾ ಉರ್ಫ್ ಕ್ಯಾಪ್ಟನ್ ಮಿಲ್ಲರ್ ಅಮ್ಮ ಹೇಳುವ 600 ವರ್ಷಗಳ ಹಿಂದಿನ ಕಥೆ ಗಮನ ಸೆಳೆಯುತ್ತೆ. ಅಯ್ಯನಾರ್ ಕೊರನಾರ್ ಪುತ್ಥಳಿಯನ್ನು ರಹಸ್ಯವಾಗಿ ಸುಟ್ಟು ಹಾಕಲಾಗುತ್ತೆ. ಆ ಬಳಿಕ ಆದಿವಾಸಿಗಳು ದೇವಸ್ಥಾನ ಕಟ್ಟಿದರೂ, ಬಳಿಕ ರಾಜಮನೆತನಗಳು ಜಾತಿ ಭೇದ ಭಾವ ಮಾಡಿ ದೇವಸ್ಥಾನದ ಮೆಟ್ಟಿಲು ಹತ್ತದಂತೆ ನಿಷೇಧ ಹೇರುತ್ತಾರೆ. ಇದು ಸಿನಿಮಾ ಕಥೆಯ ಬೆನ್ನೆಲುಬು. ಅಸಲಿಗೆ ಕಥೆ ಮುಂದೆ ಸಾಗುವುದಕ್ಕೆ ಈ ಘಟನೆಗಳು ಭದ್ರಬುನಾದಿ ಹಾಕುತ್ತವೆ.

Captain Miller Movie Review in Kannada: Shivarajkumar, Dhanush Starrer Action-Drama Movie Review

'ಕ್ಯಾಪ್ಟನ್ ಮಿಲ್ಲರ್' ಪರ್ಫಾಮೆನ್ಸ್ ಏನು?

ಇತ್ತೀಚೆಗೆ ಧನುಷ್ ತಮ್ಮ ಅಭಿಮಾನಿಗಳನ್ನು ನಿರಾಸೆ ಮಾಡಿಲ್ಲ. ಹಾಗೇ 'ಕ್ಯಾಪ್ಟನ್ ಮಿಲ್ಲರ್' ಮಿಲ್ಲರ್‌ನಲ್ಲೂ ಧನುಷ್ ಮೋಸ ಮಾಡಿಲ್ಲ. ತನ್ನ ಅದ್ಭುತ ಪರ್ಫಾಮೆನ್ಸ್‌ನಿಂದ ಪ್ರೇಕ್ಷಕರನ್ನು ಎಳೆದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅನಲೀಸನ್ ಅವತಾರದಲ್ಲಿ, ಮಿಲ್ಲರ್ ಅವತಾರದಲ್ಲಿ, ಕ್ಯಾಪ್ಟನ್ ಅವತಾರದಲ್ಲಿ ಧನುಷ್ ಗಮನ ಸೆಳೆಯುತ್ತಾರೆ.

ಮತ್ತೆ ಗೆದ್ದ ಶಿವಣ್ಣ

'ಜೈಲರ್' ಸಿನಿಮಾದಲ್ಲಿ ನರಸಿಂಹನಾಗಿ ತಮಿಳರ ಹೃದಯ ಗೆದ್ದಿದ್ದ ಶಿವಣ್ಣ, ಕ್ಯಾಪ್ಟನ್ ಮಿಲ್ಲರ್‌ನಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲೂ ಶಿವಣ್ಣ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಇವರ ಪಾತ್ರ ಸಿನಿಮಾದಲ್ಲಿ ಪವರ್‌ಫುಲ್ ಆಗಿದೆ. ಇನ್ನು ಪ್ರಿಯಾಂಕಾ ಮೋಹನ್ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ ಅಂತ ಅನಿಸಿದರೂ, ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೆ.

ಟೆಕ್ನಿಕಲಿ ಹೇಗಿದೆ ಸಿನಿಮಾ?

'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಹೈಲೈಟ್ ಅಂದ್ರೆ, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್. ಇವರ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಇಷ್ಟ ಆಗುತ್ತವೆ. ಅದರಲ್ಲೂ ಕಿಲ್ಲರ್ ಕಿಲ್ಲರ್ ಹಾಡು ಸಿನಿಮಾದ ಹೈಲೈಟ್. ನಿರ್ದೇಶಕ ಅರುಣ್ ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ತಕ್ಕಂತೆ ಜಿವಿ ಪ್ರಕಾಶ್ ಹಿನ್ನೆಲೆ ಸಂಗೀತ ಸರಿಯಾಗಿ ಮ್ಯಾಚ್ ಆಗಿದೆ. ಇದರೊಂದಿಗೆ ಸಿದ್ಧಾರ್ಥ್ ಛಾಯಾಗ್ರಹಣ ಕೂಡ ಸಿನಿಮಾಗೆ ಪೂರಕವಾಗಿದೆ.

'ಕ್ಯಾಪ್ಟನ್ ಮಿಲ್ಲರ್' ಮೈನಸ್ ಏನು?

'ಕ್ಯಾಪ್ಟನ್ ಮಿಲ್ಲರ್' ಇಡೀ ಸಿನಿಮಾವಾಗಿ ನೋಡಿದರೆ ಚೆನ್ನಾಗಿದೆ. ಆದರೆ, ಮೊದಲಾರ್ಧ ನಿಧಾನವಾಗಿ ಸಾಗುತ್ತೆ ಅಂತ ಅನಿಸುತ್ತೆ. ಆದರೆ, ಸೆಕೆಂಡ್ ಹಾಫ್‌ನಲ್ಲಿ ಸಿನಿಮಾ ವೇಗವಾಗಿ ಸಾಗುತ್ತೆ. ಇನ್ನು ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಟ್ರಿಮ್ ಮಾಡಬಹುದಿತ್ತು ಅಂತ ಅನಿಸಿದರೂ, ಸಿನಿಮಾ ನೋಡುವಾಗ ಇದು ಗಮನಕ್ಕೆ ಬರುವುದಿಲ್ಲ ಅನ್ನೋದು ಕೂಡ ಅಷ್ಟೇ ಮುಖ್ಯ.

More from Filmibeat

English summary
Shivarajkumar, Dhanush's Captain Miller Movie Review in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X