Captain Miller: 'ಕ್ಯಾಪ್ಟನ್ ಮಿಲ್ಲರ್' ಚಿಂದಿ, ಫಸ್ಟ್ ಹಾಫ್‌ನಲ್ಲಿ ಶಿವಣ್ಣ ಕಾಣಿಸೋದು 5 ನಿಮಿಷ ಅಷ್ಟೇ!

ಧನುಷ್ 49ನೇ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಇಂದು (ಜನವರಿ 12) ವಿಶ್ವದಾದ್ಯಂತ ತೆರೆಕಂಡಿದೆ. ಧನುಷ್ ಸಿನಿಮಾ ರಿಲೀಸ್‌ಗೂ ಮುನ್ನ ಹೆಚ್ಚು ಸದ್ದು ಮಾಡುವುದಿಲ್ಲ. ಆದರೆ, ತೆರೆಕಂಡ ಮೇಲೆ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸೌಂಡು ಮಾಡೋದಕ್ಕೆ ಶುರು ಮಾಡುತ್ತೆ.

ಧನುಷ್ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಟಾಕ್ ಇದೆ. ಸಿನಿಮಾ ನೋಡಿ ಅಭಿಮಾನಿಗಳು ಪಾಸಿಟಿವ್ ಕಮೆಂಟ್‌ಗಳನ್ನು ಪಾಸ್ ಮಾಡುತ್ತಿದ್ದಾರೆ.

Captain Miller Twitter review in Kannada

ಅರುಣ್ ಮಾಥೇಶ್ವರನ್ ನಿರ್ದೇಶಿಸಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗೆ ಬಹುತೇಕ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಧನುಷ್ ಜೊತೆ 'ಪಟ್ಟಾಸ್', 'ಮಾರನ್' ಅಂತಹ ಸಿನಿಮಾಗಳನ್ನು ನಿರ್ಮಿಸಿರೋ ಸತ್ಯ ಜ್ಯೋತಿ ಸಂಸ್ಥೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ 'ಜೈಲರ್‌'ನಲ್ಲಿ ಕಣ್ಣಲ್ಲೇ ಕಿಕ್ ಕೊಟ್ಟಿದ್ದ ಶಿವಣ್ಣ ಈ ಸಿನಿಮಾದಲ್ಲೂ ನಟಿಸಿದ್ದಾರೆ. ಹಾಗಿದ್ದರೆ, ಸಿನಿಮಾ ನೋಡಿದ ನೆಟ್ಟಿಗರು ಕ್ಯಾಪ್ಟನ್ ಮಿಲ್ಲರ್ ಬಗ್ಗೆ ಏನಂತಿದ್ದಾರೆ? ತಿಳಿಯೋಕೆ ಮುಂದೆ ಓದಿ.

"ಎಂತಹ ಅದ್ಭುತ ನಟ?"

'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ನೋಡಿದ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಅದರಲ್ಲೂ ಧನುಷ್ ನಟನೆ ನೋಡಿ ಮೆಚ್ಚಿಕೊಂಡಿದ್ದಾರೆ. "ಧನುಷ್ ಎಂತಹ ಅದ್ಭುತ ನಟ. ತಮಿಳು ಚಿತ್ರರಂಗ ಇಂತಹ ನ್ಯಾಚುಲರ್ ನಟನನ್ನು ಪಡೆದಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಿ ಥಿಯೇಟರ್‌ನಲ್ಲಿ ಉತ್ತಮ ಸಿನಿಮಾವನ್ನು ನೋಡಿ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

"ಫಸ್ಟ್ ಹಾಫ್ ಮಿಲ್ಲರ್ ಎಂಟ್ರಿ"

"ಕ್ಯಾಪ್ಟನ್ ಮಿಲ್ಲರ್ ಮೊದಲಾರ್ಧದಲ್ಲಿ ಮಿಲ್ಲರ್ ಎಂಟ್ರಿ ಆಗುತ್ತೆ. ಜಿವಿ ಪ್ರಕಾಶ್ ಹಿನ್ನೆಲೆ ಸಂಗೀತ ಬೆಂಕಿಯಾಗಿದೆ. ಮೇಕಿಂಗ್ ಹಾಗೂ ದೃಶ್ಯ ವೈಭವ ಕಣ್‌ಕುಕ್ಕುವಂತಿದೆ. ಸೆಕೆಂಡ್ ಹಾಫ್‌ವರೆಗೂ ನಿಧಾನವಾಗಿ ಸಾಗುತ್ತೆ. ಇದು ಇಷ್ಟ ಆದರೆ, ಬ್ಲಾಕ್ ಬಸ್ಟರ್ ಗ್ಯಾರಂಟಿ" ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

"ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡಿದೆ"

"ಈಗತಾನೇ ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ನೋಡಿದೆ. ಕ್ಲಾಸ್‌ಗಳನ್ನು ಬಂಕ್ ಮಾಡಿ ಸಿನಿಮಾ ವೀಕ್ಷಿಸಿದೆ. ಈ ಸಿನಿಮಾ ತುಂಬಾನೇ ಅದ್ಭುತವಾಗಿದೆ. ಮೊದಲ ಪಿರಿಯಡ್ ಮುಗಿಯುತ್ತಿದ್ದಂತೆ ಸಿನಿಮಾ ಮುಗಿಸಿದ ಮತ್ತೆ ಕ್ಲಾಸ್‌ಗ ಬಂದೆ" ಎಂದು ಸಿನಿಮಾ ಪ್ರೇಮಿ ಕಮೆಂಟ್ ಮಾಡಿದ್ದಾರೆ.

"ಮತ್ತೆ ತಮಿಳರ ಹೃದಯ ಗೆದ್ದ ಶಿವಣ್ಣ"

"ಕ್ಯಾಪ್ಟನ್ ಮಿಲ್ಲರ್ ಗೆದ್ದಾಗಿದೆ.. ತಮ್ಮ ಪಾತ್ರದಲ್ಲಿ ಧನುಷ್ ಜೀವಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಶಿವರಾಜ್‌ಕುಮಾರ್ ಎಂಟ್ರಿ ಬ್ಯಾಂಗ್ ಆಗಿದೆ. ಜೈಲರ್ ಬಳಿಕ ಮತ್ತೆ ಗೆದ್ದು ಬೀಗಿದಿದ್ದಾರ ಶಿವರಾಜ್‌ಕುಮಾರ್. ಜಿವಿ ಪ್ರಕಾಶ್ ಅವರ ಬಿಜಿಎಂ ಸಖತ್ ಆಗಿದೆ." ಎಂದು ಶಿವಣ್ಣನ ಪಾತ್ರವನ್ನು ಗುಣಗಾನ ಮಾಡಿದ್ದಾರೆ.

"ಫಸ್ಟ್ ಹಾಫ್‌ನಲ್ಲಿ ಶಿವಣ್ಣ 5 ನಿಮಿಷ ಕಾಣಿಸೋದು"

" ಕ್ಯಾಪ್ಟನ್ ಮಿಲ್ಲರ್ ಇಂಟರ್‌ವಲ್ ಅದ್ಭುತವಾಗಿದೆ. ಧನುಷ್ ಮಾಸ್ ಎಂಟ್ರಿ ಬೆಂಕಿಯಾಗಿದೆ. ಫಸ್ಟ್ ಹಾಫ್‌ನಲ್ಲಿ ಶಿವಣ್ಣ ಕೇವಲ 5 ನಿಮಿಷಗಳಷ್ಟೇ ಬಂದು ಹೋಗುತ್ತಾರೆ. ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಇಂಟರ್‌ವಲ್‌ನಲ್ಲಿ ಬರೋ ಫೈಟ್ ಮಾಸ್ ಆಗಿದೆ. ಸಿನಿಮ್ಯಾಟೋಗ್ರಫಿ ಅಂತೂ ಅದ್ಭುತ" ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

More from Filmibeat

English summary
Explore What is Audience Responses To Captain Miller Kannada Movie On Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X