Vedha Teaser: ಕಲ್ಲು, ಮಚ್ಚು, ಪಂಜು, 'ವೇದ'ನ ಅಸ್ತ್ರ: ಶಿವಣ್ಣ 125ನೇ ಚಿತ್ರದ ಟೀಸರ್ ಚಿಂದಿ!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಖಾಡಕ್ಕಿಳಿಯೋ ಸಮಯ ಬಂದೇ ಬಿಟ್ಟಿದೆ. ಈ ವರ್ಷದ ಕೊನೆಯಲ್ಲಿ ಸೆಂಚುರಿ ಸ್ಟಾರ್ ಉಗ್ರ ಅವತಾರ ತಾಳಲಿದ್ದಾರೆ. ಆ ಸಿನಿಮಾನೇ 'ವೇದ'. ಇದು ಶಿವಣ್ಣನ 125ನೇ ಸಿನಿಮಾ. ಹೀಗಾಗಿ ಸೆಂಚುರಿ ಫ್ಯಾನ್ಸ್ ಕಾತುರ ದುಪ್ಪಟ್ಟಾಗಿದೆ.

ಕೆಲವು ದಿನಗಳ ಹಿಂದೆನೇ ಶಿವಣ್ಣ 125ನೇ ಸಿನಿಮಾ 'ವೇದ' ಟೀಸರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಅದರಂತೆ ಈಗ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಶಿವಣ್ಣ ಅಭಿಮಾನಿಗಳು ಟೀಸರ್ ನೋಡಿ ಥ್ರಿಲ್ ಆಗಿದ್ದಾರೆ.

'ವೇದ'ನ ಅಸ್ತ್ರಗಳು ಏನು? ಶಿವಣ್ಣನ ಲುಕ್ ಹೇಗಿದೆ. ಎ. ಹರ್ಷ ಹಾಗೂ ಶಿವರಾಜ್‌ಕುಮಾರ್ ನಾಲ್ಕನೇ ಕಾಂಬಿನೇಷನ್ ಹೇಗಿರುತ್ತೆ? ಅನ್ನೋದು ಕುತೂಹಲಕ್ಕೆ ತೆರೆಬಿದ್ದಿದೆ. ಈಗ 'ವೇದ' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹೈಲೈಟ್ ಏನು ಅಂತ ತಿಳಿಯಲು ಮುಂದೆ ಓದಿ.

60 ವರ್ಷಗಳ ಹಿಂದಿನ ಕಥೆ 'ವೇದ'!

60 ವರ್ಷಗಳ ಹಿಂದಿನ ಕಥೆ 'ವೇದ'!

ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ಸಿನಿಮಾ ಮೇಲೆ ಒಂದು ನಿರೀಕ್ಷೆ ಇದ್ದೇ ಇರುತ್ತೆ. ಈ ಜೋಡಿ ನಿರಂತರವಾಗಿ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿದೆ. ಈಗ ಮತ್ತೊಂದು ಸಿನಿಮಾ ಮೂಲಕ ಒಂದಾಗಿದೆ. ಅಂದ್ಹಾಗೆ 'ವೇದ' ಟೀಸರ್‌ನಲ್ಲಿ ತೋರಿಸಿರುವಂತೆ ಇದು 1960ರ ಕಾಲಘಟ್ಟದಲ್ಲಿ ನಡೆಯುವ ಕಥೆ. 60 ವರ್ಷ ಹಿಂದಿನ ಕಥೆಯಾಗಿರೋದ್ರಿಂದ ಪ್ರೇಕ್ಷಕರಿಗೆ ಅದ್ದೂರಿ ದೃಶ್ಯಗಳು ನೋಡುವುದಕ್ಕೆ ಸಿಗುತ್ತೆ. ಹೀಗಾಗಿ ಕನ್ನಡದ ಮತ್ತೊಂದು ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿ ನೋಡೋಕೆ ಸಿಗುತ್ತೆ. ಟೀಸರ್‌ನಲ್ಲಿ ಆ ಸುಳಿವು ಸಿಗುತ್ತಿದೆ.

'ವೇದ' ಸಿನಿಮಾದ ಅಸ್ತ್ರಗಳೇ ಹೈಲೈಟ್!

'ವೇದ' ಸಿನಿಮಾದ ಅಸ್ತ್ರಗಳೇ ಹೈಲೈಟ್!

'ವೇದ' ಟೀಸರ್ ನೋಡಿದ್ರೆ, ಸ್ಯಾಂಡಲ್‌ವುಡ್‌ನಿಂದ ಮತ್ತೊಂದು ಬ್ಲಾಕ್‌ ಬಸ್ಟರ್ ಸಿನಿಮಾ ಸಿಗೋದು ಗ್ಯಾರಂಟಿ. ಟೀಸರ್‌ನಲ್ಲಿ ಹೇಳಿರುವಂತೆ 'ವೇದ' ಸಿನಿಮಾ ಅಸ್ತ್ರಗಳನ್ನು ಪರಿಚಯಿಸಲಾಗಿದೆ. ಕಲ್ಲು, ಮಚ್ಚು ಹಾಗೂ ಪಂಚು ಈ ಸಿನಿಮಾದ ಅಸ್ತ್ರಗಳೆಂದು ತೋರಿಸಲಾಗಿದೆ. ಇದು ಟೀಸರ್‌ನ ಹೈಲೈಟ್. ಮೊದಲ ಟೀಸರ್‌ನಲ್ಲಿ ಅಸ್ತ್ರಗಳನ್ನು ತೋರಿಸಿ ತಂಡ ಗೆದ್ದಿದೆ. ಅಲ್ಲದೆ 'ವೇದ' ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಶಿವಣ್ಣನ ರಗಡ್ ಲುಕ್ ಸೂಪರ್!

ಶಿವಣ್ಣನ ರಗಡ್ ಲುಕ್ ಸೂಪರ್!

ಒಬ್ಬ ನಟನ 125ನೇ ಸಿನಿಮಾ ಅಂದ್ರೆ, ನಿರ್ದೇಶಕನಿಗೆ ಜವಾಬ್ದಾರಿ ಹೆಚ್ಚು. ಸಿನಿಮಾವನ್ನ ತುಂಬಾನೇ ಜಾಗರೂಕರಾಗಿ ನಿರ್ದೇಶನ ಮಾಡಬೇಕಾಗುತ್ತೆ. ಆ ಸ್ಟಾರ್ ನಟ ಲುಕ್‌ನಿಂದ ಹಿಡಿದು ಪ್ರತಿಯೊಂದು ಮ್ಯಾಟರ್ ಆಗುತ್ತೆ. 'ವೇದ'ದಲ್ಲಿ ಶಿವಣ್ಣನ ಲುಕ್ ಗಮನ ಸೆಳೆಯುತ್ತೆ. ಸೆಂಚುರಿ ಸ್ಟಾರ್ ರಗಡ್ ಲುಕ್ ಅವರ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಸೆಂಚುರಿ ಸ್ಟಾರ್ ಬಹಳ ದಿನಗಳ ಬಳಿಕ ಮತ್ತೊಂದು ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.

ಸಿನಿಮ್ಯಾಟೋಗ್ರಫಿ, ಮ್ಯೂಸಿಕ್ ಸೂಪರ್

ಸಿನಿಮ್ಯಾಟೋಗ್ರಫಿ, ಮ್ಯೂಸಿಕ್ ಸೂಪರ್

60 ರ ದಶಕದಿಂದ ಆರಂಭ ಆಗುವ ಕಥೆಯಾಗಿರೋದ್ರಿಂದ ಬಹುತೇಕ ಸಿನಿಮಾವನ್ನು ಸೆಟ್‌ಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಅದಕ್ಕಾಗಿಯೇ ಅದ್ಧೂರಿ ಸೆಟ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಸ್ವಾಮಿ ಜೆ ಗೌಡ ಸಿನಿಮ್ಯಾಟೋಗ್ರಫಿಯ ಝಲಕ್ ಮೆಚ್ಚುಗೆ ಗಳಿಸಿದೆ. ಹಾಗೆಯೇ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಕೂಡ ಮಜಾಗಿದೆ. ಮಾಸ್ ಪ್ರಿಯರಿಗೆ ಮತ್ತೊಂದು ಸಿನಿಮಾ ಮಜ ಕೊಡೋದು ಗ್ಯಾರಂಟಿ. ಗೀತಾ ಪಿಕ್ಚರ್ಸ್ ಹಾಗೂ ಜೀ ಸಂಸ್ಥೆ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕ್ರಿಸ್‌ಮಸ್‌ಗೆ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯ ಮೂಲಕ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

More from Filmibeat

English summary
Century Star Shivarajkumar 125th Movie Vedha The Brutal 1960 Teaser Review, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X