Mana Shankara Vara Prasad Garu First Review: ಚಿರಂಜೀವಿ ಸಿನಿಮಾದ ಮೊದಲ ವಿಮರ್ಶೆ ಹೇಗಿದೆ?

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ನಟನೆಯ 157ನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ರಿಲೀಸ್‌ಗೆ ಈಗಾಗಲೇ ಸಕಲ ಸಿದ್ಧತೆಗಳು ಕೂಡ ನಡೆದಿವೆ. ಮೆಗಾಸ್ಟಾರ್ ಫ್ಯಾನ್ಸ್ ಕೂಡ ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಚಿರಂಜೀವಿ ಕೂಡ ವಿಂಟೇಜ್ ಲುಕ್‌ನಲ್ಲಿ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಸತತ ಯಶಸ್ಸು ಕಂಡಿರುವ ನಿರ್ದೇಶಕ ಅನಿಲ್ ರವಿಪುಡಿ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮಾಸ್ ಎಂಟರ್‌ಟೈನರ್‌ ಅನ್ನು ಚಿರಂಜೀವಿ ಪುತ್ರಿ ಸುಸ್ಮಿತಾ ಕೊನಿಡೆಲಾ ಹಾಗೂ ನಿರ್ಮಾಪಕ ಸಾಹು ಗಾರಪತಿ ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಶೈನ್ ಸ್ಕ್ರೀನ್ಸ್ ಬ್ಯಾನರ್‌ಗಳ ಮೂಲಕ ನಿರ್ಮಾಣ ಮಾಡಿದ್ದಾರೆ.

Chiranjeevi Venkatesh starrer Mana Shankara Vara Prasad Garu Movie First Review Out

'ಮನ ಶಂಕರ ವರಪ್ರಸಾದ ಗಾರು' ಸಿನಿಮಾದ ಹೈಲೈಟ್ ಅಂದರೆ, ಅದು ನಾಯಕಿಯರು. ಈ ಸಿನಿಮಾದಲ್ಲಿ ಚಿರಂಜೀವಿ ಜೊತೆ ನಯನತಾರಾ ಹಾಗೂ ಕ್ಯಾಥರೀನ್ ಟ್ರೆಸಾ ನಾಯಕಿಯರಾಗಿ ಮಿಂಚಿದ್ದಾರೆ. ಇನ್ನೊಂದು ಹೈಲೈಟ್ ಅಂದರೆ, ಈ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿರು ಹಾಗೂ ವೆಂಕಿ ಇಬ್ಬರೂ ಒಂದೇ ಫ್ರೇಮ್‌ನಲ್ಲಿ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಈ ಸಿನಿಮಾದ ಫಸ್ಟ್ ರಿವ್ಯೂ ಹೊರಬಿದ್ದಿದ್ದು, ಹೈಲೈಟ್ಸ್ ಏನು ಎಂದು ತಿಳಿಯುವುದಕ್ಕೆ ಮುಂದೆ ಓದಿ.

ಸಂಕ್ರಾಂತಿ ಹಬ್ಬದಂದು ಅಂದರೆ, ಜನವರಿ 12ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿರುವ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳಿವೆ. ಈಗಾಗಲೇ ಸಿನಿಮಾ ಪ್ರೋಮೋಗಳು, ಹಾಡುಗಳು ಪ್ರೇಕ್ಷಕರ ಮನಗೆದ್ದಿವೆ. ಇದೊಂದು ಪಕ್ಕಾ ಮನರಂಜನೆ ಸಿನಿಮಾ ಅನ್ನೋದು ಸ್ಪಷ್ಟಪಡಿಸಿವೆ. 'ಹಾಸ್ಯ' ಆಕ್ಷನ್ ಹಾಗೂ ಕೌಟುಂಬಿಕ ಕತೆಯನ್ನು ತೆರೆಮೇಲೆ ತಂದಿರೋದು ಮೇಲ್ನೋಟಕ್ಕೆ ಗೊತ್ತಾಗಲಿದೆ.

ಇನ್ನೇನು ಬಿಡುಗಡೆಗೆ ಕೆಲವು ದಿನಗಳು ಇರುವಾಗಲೇ ಸೆನ್ಸಾರ್ ಬೋರ್ಡ್ ಈ ಸಿನಿಮಾವನ್ನು ವೀಕ್ಷಿಸಿದೆ. ಸಿನಿಮಾದಲ್ಲಿ ಯಾವುದೇ ಗಂಭೀರ ಆಕ್ಷೇಪಾರ್ಹ ದೃಶ್ಯಗಳು ಇಲ್ಲವೆಂದು ಹೇಳಿರೋದಾಗಿ ವರದಿಯಾಗಿದೆ. ಕೆಲವು ಸಂಭಾಷಣೆಗಳ ಬಗ್ಗೆ ಚಿಕ್ಕಪುಟ್ಟ ಸಲಹೆಗಳನ್ನು ಸೂಚಿಸಿದ್ದು, ಸಿನಿಮಾ ತಂಡಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ. 'ಮನ ಶಂಕರ ವರಪ್ರಸಾದ ಗಾರು' ಸಿನಿಮಾಗೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೇಟ್ ನೀಡಿ ಗೌರವಿಸಿದೆ.

Chiranjeevi Venkatesh starrer Mana Shankara Vara Prasad Garu Movie First Review Out

'ಮನ ಶಂಕರ ವರಪ್ರಸಾದ ಗಾರು' ಸಿನಿಮಾ 2 ಗಂಟೆ 42 ನಿಮಿಷಗಳು (162 ನಿಮಿಷಗಳು) ಇವೆ. ಅನಿಲ್ ರಾವಿಪುಡಿ ತಮ್ಮ ಹಿಂದಿನ ಸಿನಿಮಾಗಳ ಯಶಸ್ಸಿನ ಸೂತ್ರವನ್ನು ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲೂ ಬಳಸಿದ್ದಾರೆ. ಇದರೊಂದಿಗೆ ಚಿರಂಜೀವಿ ಇಮೇಜ್ ಹಾಗೂ ಜನಪ್ರಿಯತೆಯನ್ನು ಆಧರಿಸಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿರಂಜೀವಿ-ನಯನತಾರಾ ಕೆಮಿಸ್ಟ್ರಿ, ಕಾಮಿಡಿ ಸೀನ್‌ಗಳು ಸಿನಿಮಾದ ಹೈಲೈಟ್.

ಎಲ್ಲಕ್ಕಿಂತ ಹೆಚ್ಚಾಗಿ ಟಾಲಿವುಡ್‌ನ ಮತ್ತೊಂದು ಸ್ಟಾರ್ ಹೀರೋ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರ ಈ ಸಿನಿಮಾದ ಹೈಲೈಟ್. ಮೆಗಾಸ್ಟಾರ್ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್ ಇಬ್ಬರ ಮುಖಾಮುಖಿ ಇಬ್ಬರೂ ಅಭಿಮಾನಿಗಳಿಗೆ ಕಿಕ್ ಕೊಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಾಣುವ ಸೂಚನೆಗಳಿವೆ ಎಂದು ಫಿಲ್ಮಿಬೀಟ್ ತೆಲುಗು ವರದಿ ಮಾಡಿದೆ.

More from Filmibeat

English summary
Chiranjeevi Venkatesh starrer Mana Shankara Vara Prasad Garu Movie First Review Out.
Read more about: chiranjeevi venkatesh review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X