Devil Review: ರಾಜಕೀಯ ಅಖಾಡದಲ್ಲಿ ಡಬಲ್ 'ಚಾಲೆಂಜ್'; 'ಡೆವಿಲ್'-ಕೃಷ್ಣ ಆಟ ಆಡ್ತಿರೋದ್ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ರಿಲೀಸ್ ದೊಡ್ಡ ಮಟ್ಟಕ್ಕೆ ಹೈಪ್ ಕ್ರಿಯೇಟ್ ಮಾಡಿತ್ತು. ಬಿಡುಗಡೆಗೂ ಮುನ್ನವೇ ಸಿನಿಮಾ ಟ್ರೈಲರ್, ಸಾಂಗ್ಸ್ ಸದ್ದು ಮಾಡಿದ್ದವು. ದರ್ಶನ್ ಜೈಲಿನಲ್ಲಿ ಇರೋದ್ರಿಂದ ಇಷ್ಟೊಂದು ಪ್ರಚಾರ ಆಯ್ತೋ? ಇಲ್ಲಾ ಪ್ರಚಾರ ಮಾಡಿದ್ದರಿಂದ ಸಿನಿಮಾ ಹೌಸ್‌ಫುಲ್ ಆಯ್ತಾ? ಈ ಪ್ರಶ್ನೆಗೆ ಸಿನಿಮಾವೇ ಉತ್ತರ ಕೊಡುತ್ತಿದೆ. ಇಂದು (ಡಿಸೆಂಬರ್ 11) 'ಡೆವಿಲ್' ರಾಜ್ಯದ ಮೂಲೆ ಮೂಲೆಯಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ.
ದರ್ಶನ್ ಜೊತೆಗೆ ನಟಿ ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಇದೆ. ವಿಲನ ಪ್ರಕಾಶ್ (ಪ್ರಕಾಶ್ ವೀರ್) ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಕ್ಲಾಸ್ ಹಾಗೂ ಮಾಸ್ ಆಡಿಯನ್ಸ್ ಇಷ್ಟ ಆಗಬಹುದೆಂಬ ಅಂದಾಜು ಬಂದಿತ್ತು. ಏನಿಲ್ಲ ಅಂದರೂ ಸಿನಿಮಾ ರಿಚ್ ಆಗಿರುತ್ತೆಂದು ಅಭಿಮಾನಿಗಳ ತಲೆಯಲ್ಲಿ ಕೂತುಬಿಟ್ಟಿತ್ತು.

'ಕಾಟೇರ' ಬಳಿಕ ದರ್ಶನ್ ಆಯ್ಕೆ ಮಾಡಿಕೊಂಡಿರುವ 'ಡೆವಿಲ್' ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳು ಹರ್ಷೋದ್ಗಾರ ಥಿಯೇಟರ್ ಮುಂದೆ ಮುಗಿಲು ಮುಟ್ಟಿದೆ. ಹಾಗಿದ್ದರೆ, 'ಡೆವಿಲ್' ಸಿನಿಮಾದ ಕಥೆಯೇನು? ದರ್ಶನ್ ನಟಿಸಿದ ಪಾತ್ರಗಳು ಹೇಗಿವೆ? ಈ ಸಿನಿಮಾ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಡೆವಿಲ್' ಕಥೆಯೇನು?
ಡೆವಿಲ್ ಅರ್ಥಾತ್ ಧನುಷ್ (ದರ್ಶನ್) ತಂದೆ ರಾಜಶೇಖರ (ಮಹೇಶ್ ಮಂಜ್ರೇಕರ್) ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗುತ್ತಾರೆ. ಮುಖ್ಯಮಂತ್ರಿಯಾಗಿದ್ದು ಭ್ರಷ್ಟಾಚಾರ ಆರೋಪ ಎದುರಿಸಿದ್ದ ರಾಜಶೇಖರ, ಜಾಮೀನು ಪಡೆದು ವಾಪಾಸ್ ಬರುತ್ತಾರೆ. ಈಗ ತನ್ನ ಕುರ್ಚಿಯಲ್ಲಿ (ಮುಖ್ಯಮಂತ್ರಿ) ತನ್ನ ಮಗ ಧನುಷ್ ಕೂರಬೇಕು. ಅವನೇ ಮುಖ್ಯಮಂತ್ರಿ ಆಗಬೇಕು ಅಂತ ಹಠಕ್ಕೆ ಬೀಳುತ್ತಾನೆ. ಆದರೆ, ಮಗ ಧನುಷ್ ವಿದೇಶದಲ್ಲಿ ನೆಲೆಸಿದ್ದು, ವಾಪಸ್ ಬರುವುದಕ್ಕೆ ಇಷ್ಟವಿರುವುದಿಲ್ಲ. ಹೀಗಾಗಿ ಮಗನಂತೆ ಕಾಣುವ ಇನ್ನೊಬ್ಬ ವ್ಯಕ್ತಿ ಕೃಷ್ಣನನ್ನು ಕರೆದುಕೊಂಡು ಧನುಷ್ ಎಂಬಂತೆ ನಟನೆ ಮಾಡಿಸುತ್ತಾರೆ. ಯಾಕಂದ್ರೆ, ಅವನಿಗೆ ಆಕ್ಟಿಂಗ್ ಅಂದರೆ ಇಷ್ಟ. ಯಾರು ಸಿಎಂ ಆಗುತ್ತಾರೆ? ಅನ್ನೋದೇ ಕಥೆ. ಮುಂದೆ ಕೃಷ್ಣ ಮುಖ್ಯಮಂತ್ರಿ ಆಗುತ್ತಾನಾ? 'ಡೆವಿಲ್' ಅಲಿಯಾಸ್ ಧನುಷ್ ಆಗುತ್ತಾನಾ? ಅನ್ನೋದು ಅಸಲಿಗೆ ಕಥೆ.

'ಡೆವಿಲ್' ಟೆಕ್ನಿಕಲಿ ಹೇಗಿದೆ?
ದರ್ಶನ್ ಇಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದಾರೆ. ಬಳ ದಿನಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಇಬ್ಬರು ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಟೆಕ್ನಿಕಲಿ ಸಿಕ್ಕಾಪಟ್ಟೆ ವರ್ಕ್‌ಔಟ್ ಮಾಡಲಾಗಿದೆ. ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಅಂತ ಅನಿಸುವುದಿಲ್ಲ. ಸಿಜಿ ವರ್ಕ್ ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ಪ್ರೆಸೆನ್ಸ್ ತುಂಬಾನೇ ಚೆನ್ನಾಗಿದೆ. ಸಿನಿಮ್ಯಾಟೋಗ್ರಫಿ ಕೂಡ ಚೆನ್ನಾಗಿದೆ.
'ಡೆವಿಲ್' ಪ್ಲಸ್ ಪಾಯಿಂಟ್ ಏನು?
ಚಾಲೆಂಜಿಂಗ್ ಸ್ಟಾರ್ 'ಡೆವಿಲ್' ಈ ಸಿನಿಮಾದಲ್ಲಿ ನೋಡುವುದಕ್ಕೆ ಚೆನ್ನಾಗಿ ಕಾಣಿಸುತ್ತಾರೆ. ಆಕ್ಷನ್ ಸೀಕ್ವೆನ್ಸ್ ತುಂಬಾನೇ ಚೆನ್ನಾಗಿದೆ. ದರ್ಶನ್ ಜೊತೆ ರಚನಾ ರೈ ಆಕ್ಟಿಂಗ್ ಕೂಡ ಅಷ್ಟೇ ಚೆನ್ನಾಗಿದೆ. ಸಿನಿಮಾ ವಿಜ್ಯೂವಲಿ ಸೂಪರ್ ಆಗಿದೆ. ಡಬಲ್ ರೋಲ್‌ನಲ್ಲಿ ದರ್ಶನ್ ಅವರನ್ನು ನೋಡುವುದಕ್ಕೆ ಖುಷಿ ಕೊಡುತ್ತೆ. ಈ ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ, ಇಲ್ಲಿ ಒಳ್ಳೆಯವನು ಹಾಗೂ ಕೆಟ್ಟವನು ಎನ್ನುವ ಕಲ್ಪನೆಯನ್ನು ತರಲಾಗಿದೆ. ಕೃಷ್ಣ ಒಳ್ಳೆಯವನು.. ಧನುಷ್ ಕೆಟ್ಟವನು. ದರ್ಶನ್ ಮುಖಗಳನ್ನು ಇಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ವಿಲನ್ ಇಲ್ಲ. ಇಲ್ಲಿ ದರ್ಶನ್ ಅವರೇ ಹೀರೋ.. ದರ್ಶನ್ ಅವರೇ ವಿಲನ್. ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ, ಸಿನಿಮಾದ ಡೈಲಾಗ್. ದರ್ಶನ್ ಬಾಯಲ್ಲಿ ಬರೋ ಪ್ರತಿಯೊಂದು ಮಾಸ್ ಡೈಲಾಗ್‌ಗೆ ಶಿಳ್ಳೆಗಳು ಬೀಳುತ್ತವೆ.
ಮೈನಸ್ ಪಾಯಿಂಟ್
'ಡೆವಿಲ್' ಸಿನಿಮಾದಲ್ಲಿ ಕೆಲವು ಮೈನಸ್ ಪಾಯಿಂಟ್‌ಗಳೂ ಸಿಗುತ್ತವೆ. ಮಿಲನ ಪ್ರಕಾಶ್ ನಿರ್ದೇಶಕ ಯಾಕೋ ಕೈಕೊಟ್ಟಂತೆ ಕಾಣುತ್ತಿದೆ. ಅದಕ್ಕೆ ಕಾರಣಗಳನ್ನು ನಿರೀಕ್ಷೆ ಮಾಡಬಹುದೇ? ಅನ್ನೋ ಪ್ರಶ್ನೆನೂ ಹುಟ್ಟುತ್ತೆ. ಈ ವೇಳೆ ಡೈರೆಕ್ಷನ್ ಇನ್ನೂ ಸ್ವಲ್ಪ ಚೆನ್ನಾಗಿ ಮಾಡಬಹುದಿತ್ತು ಅಂತಾನೂ ಅನಿಸುತ್ತೆ. ಸ್ಟೋರಿ ವೀಕ್ ಆಗಿದೆ. ಸ್ಕ್ರೀನ್‌ಪ್ಲೇ ಟೈಟ್ ಆಗಿರಬೇಕಿತ್ತು. ಪಾಲಿಟಿಕ್ಸ್ ಹೇಗೆ ಎಂಟ್ರಿ ಆಗುತ್ತಾರೆ? ಹೀರೋಯಿನ್ ಜೊತೆಗಿನ ಸೀನ್‌ಗಳು ಅಲ್ಲಲ್ಲಿ ಬೋರ್ ಹೊಡೆಸುತ್ತವೆ.
ಕೊನೆಯಲ್ಲಿ ಏನು?
'ಡೆವಿಲ್' ಸಿನಿಮಾ ಅವರ ಅಭಿಮಾನಿಗಳಿಗೆ ಖಂಡಿತಾ ಇಷ್ಟ ಆಗುತ್ತೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾನ್ಯ ಜನರು ಒಮ್ಮೆ ಸಿನಿಮಾವನ್ನು ನೋಡಬಹುದು. ಸಿನಿಮಾದ ಕೊನೆಯಲ್ಲಿ ಪಾರ್ಟ್ 2ಗೆ ಲೀಡ್ ಕೊಟ್ಟಿರಬಹುದೇ? ಇಂತಹದ್ದೊಂದು ಪ್ರಶ್ನೆ ಮೂಡದೇ ಇರುವುದಿಲ್ಲ.


Click it and Unblock the Notifications











