Kuberaa Teaser:ಧನುಷ್‌ಗೆ ಮತ್ತೊಂದು ನ್ಯಾಷನಲ್ ಫಿಕ್ಸ್; 'ಕುಬೇರ' ಟೀಸರ್ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್

ಧನುಷ್, ನಾಗಾರ್ಜುನಾ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ ಸಿನಿಮಾ 'ಟ್ರಾನ್ಸ್ ಆಫ್ ಕುಬೇರ'. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕುಬೇರ ಕೂಡ ಸೇರಿಕೊಂಡಿದೆ. ತೆಲುಗಿನಲ್ಲಿ ಹೆಚ್ಚಾಗಿ ಲವ್‌ ಸ್ಟೋರಿಗಳನ್ನೇ ನಿರ್ದೇಶಿಸಿರುವ ಶೇಖರ್ ಕುಮ್ಮುಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್‌ ಆಗಿದ್ದು ಟ್ವಿಟರ್‌ನಲ್ಲಿ (ಎಕ್ಸ್) ಸಿನಿ ಪ್ರಿಯರು ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

'ಟ್ರಾನ್ಸ್ ಆಫ್ ಕುಬೇರ' ಸಿನಿಮಾದ ಟೀಸರ್‌ನಲ್ಲಿ ನಾಲ್ಕು ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದೆ. ಪ್ರಮುಖ ಪಾತ್ರದಲ್ಲಿ ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಹಾಗೂ ಜಿಮ್ ಸರ್ಬ್. ಈ ನಾಲ್ಕು ಪಾತ್ರಗಳ ನಡುವಿನ ಕತೆಯನ್ನೇ ತೆರೆಮೇಲೆ ತರಲಾಗಿದೆ. ಈ ಸಿನಿಮಾದ ಟೀಸರ್‌ನಲ್ಲಿ ಒಂದೇ ಒಂದು ಡೈಲಾಗ್‌ಗಳನ್ನೂ ಇಟ್ಟಿಲ್ಲ. ಆದರೆ, ನಂದೇ.. ನಂದೇ ಈ ಲೋಕವೆಲ್ಲ.." ಎನ್ನುವ ಹಾಡು ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿದೆ. ಇದು ಪ್ರೇಕ್ಷಕರಲ್ಲಿ ಒಂದು ಕುತೂಹಲವನ್ನು ಹುಟ್ಟಿಸಿದೆ. ಸಿನಿಮಾ ಪಾತ್ರಗಳನ್ನು ಪರಿಚಯಿಸಿದ ಈ ಹಾಡು ಗಮನ ಸೆಳೆಯುತ್ತಿದೆ.

Dhanush Nagarjuna Rashmika Mandanna Starrer Trance of Kuberaa teaser twitter reaction

ಧನುಷ್ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬೇರೆ ಬೇರೆ ಶೇರ್‌ಗಳಲ್ಲಿ ಧನುಷ್ ಗಮನ ಸೆಳೆದಿದ್ದಾರೆ. ನಾಗಾರ್ಜುನ ಈ ಕಥೆಯ ಪ್ರಮುಖ ಪಾತ್ರ ಎಂದೆನಿಸುತ್ತಿದೆ. ಇನ್ನು ರಶ್ಮಿಕಾ ಮಂದಣ್ಣ ಟಿಪಿಕಲ್ ಮಧ್ಯಮ ವರ್ಗದ ಹುಡುಗಿಯ ಪಾತ್ರ ಎಂದು ಅನಿಸುತ್ತಿದೆ. ಸದ್ಯ ಈ ಟೀಸರ್ ಅನ್ನು ನೋಡಿ ನೆಟ್ಟಿಗರು ಟ್ವಿಟರ್‌ನಲ್ಲಿ ಏನಂತಿದ್ದಾರೆ? ಅವರ ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಇದು ಪಕ್ಕಾ ಬ್ಲಾಕ್ ಬಸ್ಟರ್

ಕುಬೇರ ಸಿನಿಮಾ ಟೀಸರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಟಿಟ್ವರ್‌ಗೆ ಲಗ್ಗೆ ಇಟ್ಟು ಕಮೆಂಟ್‌ಗಳನ್ನು ಹಾಕುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲಿ ಇಬ್ಬರು "ಕುಬೇರ ಧನುಷ್‌ಗೆ ಒಂಥರಾ ಹೋಮ್ ಗ್ರೌಂಡ್ ಇದ್ದಂತೆ. ಇದರಲ್ಲಿ ಧನುಷ್ ಅವರ ಆಳವಾದ ಅಭಿನಯದ ತುಣುಕುಗಳನ್ನು ನೋಡಬಹುದು. ಈ ಸಿನಿಮಾ ವರ್ಡ್ ಆಫ್ ಮೌತ್ ಪ್ರಕಾರ, ಬ್ಲಾಕ್‌ಬಸ್ಟರ್ ಆಗುವ ಎಲ್ಲಾ ಲಕ್ಷಣಗಳು ಇವೆ" ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಧನುಷ್ ಅಭಿನಯದ ಅಸಾಧಾರಣ

ಕುಬೇರ ಟೀಸರ್‌ನಲ್ಲಿ ಧನುಷ್ ಅಭಿನಯವನ್ನು ಕಂಡು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. " ಧನುಷ್ ಅವರದ್ದು ಅಸಾಧಾರಣ ಅಭಿನಯ. ಈ ಸಿನಿಮಾದ ತುಣುಕುಗಳನ್ನು ನಿಜಕ್ಕೂ ಇಂಪ್ರೆಸಿವ್ ಆಗಿದೆ. " ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಈ ಗ್ಲಿಂಪ್ಸ್‌ನಲ್ಲಿ ಧನುಷ್ ಅಭಿನಯದ ಬಗ್ಗೆನೇ ಹೆಚ್ಚು ಮಂದಿ ಮಾತಾಡುತ್ತಿದ್ದಾರೆ.

ನಾಗಾರ್ಜುನಗೆ ದೊಡ್ಡ ಪಾತ್ರ

"ಈ ಟೀಸರ್‌ನಲ್ಲಿ ಸಿನಿಮಾದ ಕಥೆಯ ಬಗ್ಗೆ ಚಿಕ್ಕದೊಂದು ಸುಳಿವನ್ನೂ ಕೊಟ್ಟಿಲ್ಲ. ಆದರೆ, ವಿಭಿನ್ನವಾಗಿದೆ. ಧನುಷ್ ಬಹುಮುಖ ಪ್ರತಿಭೆ ಈ ಟೀಸರ್‌ನಲ್ಲಿ ಎದ್ದು ಕಾಣುತ್ತಿದೆ. ಅದು ನಿಜಕ್ಕೂ ಗ್ರೇಟ್. ಈ ಸಿನಿಮಾದಲ್ಲಿ ನಾಗಾರ್ಜುನ ಅವರಿಗೆ ಡೊಡ್ಡ ಪಾತ್ರವೇ ಸಿಕ್ಕಿದೆ ಎಂದು ತೋರುತ್ತಿದೆ. ಹಿನ್ನೆಲೆ ಸಂಗೀತ ಕೂಡ ಅದ್ಭುತ" ಎಂದು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹಿರಿಯರು ಇಂತಹ ಪಾತ್ರ ಮಾಡೋದಿಲ್ಲ

"ಇಂತಹ ಪಾತ್ರವನ್ನು ಮಾಡುವುದಕ್ಕೆ ಬಹುತೇಕ ಹಿರಿಯ ನಟರು ಒಪ್ಪುವುದಿಲ್ಲ. ಆದರೆ, ಧನುಷ್ ಈ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರಕ್ಕೆ ಧನುಷ್ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ" ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕುಬೇರ ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ, ಅದು ದೇವಿಶ್ರೀ ಪ್ರಸಾದ್. ಈ ಟೀಸರ್‌ನಲ್ಲಿ ಅವರ ಸಂಗೀತ ಹೈಲೈಟ್ ಆಗಿದೆ. ಧನುಷ್ ಪಾತ್ರವನ್ನು ನೋಡಿ ಬಹುತೇಕ ಅಭಿಮಾನಿಗಳು ಮತ್ತೊಂದು ನ್ಯಾಷನಲ್ ಅವಾರ್ಡ್ ಫಿಕ್ಮ್ಸ್ ಎಂದು ಹೇಳುತ್ತಿದ್ದಾರೆ. ಈಗಾಗಲೇ 'ಆಡುಕಲಾಂ' ಹಾಗೂ 'ಅಸುರನ್' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೂನ್ 20ರಂದು ಬಿಡುಗಡೆ ಸಜ್ಜಾಗಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Dhanush, Nagarjuna, Rashmika Mandanna Starrer Trance of Kuberaa teaser twitter reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X