"ನಿಧಾನವಾಗಿ ಸುಟ್ಟು ಹಾಕುವ ಥ್ರಿಲ್ಲರ್.. ಇಂಟರ್‌ವಲ್ ಅದ್ಭುತ: 'ಧೂಮಂ' ಬಗ್ಗೆ ನೆಟ್ಟಿಗರ ಟ್ವಿಟರ್ ವಿಮರ್ಶೆ
ಪವನ್ ಕುಮಾರ್ ಸಿನಿಮಾಗಳನ್ನು ನೋಡಿದವರಿಗೆ ಅವರ ಟೇಸ್ಟ್ ಏನು ಅನ್ನೋದು ಗೊತ್ತಿರುತ್ತೆ. ಈಗಾಗಲೇ 'ಲೂಸಿಯಾ', 'ಯೂಟರ್ನ್'ನಂತಹ ಸಿನಿಮಾಗಳನ್ನು ನಿರ್ದೇಶಿಸಿ ಮನಗೆದ್ದಿರೋ ಪವನ್ ಈಗ 'ಧೂಮಂ' ಅನ್ನೋ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮೂಲಕ ಬಂದಿದ್ದಾರೆ.
ಕನ್ನಡದ ನಿರ್ದೇಶಕ ಪವನ್ ಕುಮಾರ್‌ಗೆ ಮಾಲಿವುಡ್ ಸ್ಟಾರ್ ನಟ ಫಹಾದ್ ಫಾಸಿಲ್ ಜೊತೆಯಾಗಿದ್ದಾರೆ. ಇಬ್ಬರು ಟ್ಯಾಲೆಂಟೆಡ್ ಫಿಲ್ಮ್ ಮೇಕರ್ಸ್ ಒಟ್ಟಿಗೆ ದುಡಿದ ಸಿನಿಮಾ 'ಧೂಮಂ' ಇಂದು (ಜೂನ್ 23) ತೆರೆಕಂಡಿದೆ. ಈ ಸಿನಿಮಾ ನೋಡಿದ ಬಳಿಕ ನೆಟ್ಟಿಗರು ಥ್ರಿಲ್ ಆಗಿದ್ದಾರೆ.

ಒರಿಜಿನಲ್ ಆಗಿ ಮಲಯಾಳಂ ಭಾಷೆಯಲ್ಲಿ ನಿರ್ಮಾಣಗೊಂಡಿದ್ದರೂ, ಕನ್ನಡಕ್ಕೂ ಈ ಸಿನಿಮಾವನ್ನು ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಈಗಾಗಲೇ ಸಿನಿಮಾ ನೋಡಿರುವ, ಹಾಗೂ ನೋಡುತ್ತಿರುವ ಪ್ರೇಕ್ಷಕರು ಟ್ವೀಟರ್‌ನಲ್ಲಿ 'ಧೂಮಂ' ಬಗ್ಗೆ ಮನಬಿಚ್ಚಿ ಮಾತಾಡುತ್ತಿದ್ದಾರೆ. ಹಾಗಿದ್ರೆ, 'ಧೂಮಂ' ಬಗ್ಗೆ ಟ್ವಿಟರ್‌ನಲ್ಲಿ ಹೇಗಿದೆ ಪ್ರತಿಕ್ರಿಯೆ? ತಿಳಿಯಲು ಮುಂದೆ ಓದಿ.
"ನಿಧಾನವಾಗಿ ಸುಟ್ಟು ಹಾಕುವ ಥ್ರಿಲ್ಲರ್"
" ಧೂಮಂ ಸಿನಿಮಾವನ್ನು ಬೋಸ್ಟನ್‌ನಲ್ಲಿ ನೋಡಿದೆ. ಹಿಡಿದು ಕೂರಿಸುವ ಸನ್ನಿವೇಶಗಳೊಂದಿಗೆ ನಿಧಾನವಾಗಿ ಸುಟ್ಟು ಹಾಕುವ ಥ್ರಿಲ್ಲರ್ ಇದು. ಟಿಪಿಕಲ್ ಪವನ್ ಕುಮಾರ್ ಕ್ಲೈಮ್ಯಾಕ್ಸ್. ಧೂಮಪಾನದ ಅಂಶಗಳನ್ನು ಪ್ರಚಾರ ಮಾಡದೇ ಕಥೆ ಹೆಣೆಯಲಾಗಿದೆ. ಈ ಸಿನಿಮಾವು ಸ್ಪೂನ್ ಫೀಡಿಂಗ್ ಇಲ್ಲದೆ ಪ್ರೇಕ್ಷಕರ ಮೆದುಳನ್ನು ಕೆಲಸ ಮಾಡುವಂತೆ ಮಾಡುತ್ತೆ. ನನಗೆ ಈ ಸಿನಿಮಾ ಇಷ್ಟ ಆಗಿದೆ." ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.
"ಇಂಟರ್‌ವಲ್ ಇಂಟ್ರೆಸ್ಟಿಂಗ್"
"ಧೂಮಂ ಸಿನಿಮಾ ಇಂಟರ್‌ವಲ್ ಹೊತ್ತಿಗೆ ಕುತೂಹಲ ಕೆರಳಿಸುತ್ತದೆ. ಎಲ್ಲೂ ಉತ್ತಮ ಹಾಗೂ ಪ್ರಭಾವಶಾಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಸೆಕೆಂಡ್ ಹಾಫ್ ತುಂಬಾನೇ ನಿರ್ಣಾಯಕವಾಗಿದೆ."
"ಧೂಮಂ ವಿಭಿನ್ನ, ಅನಿರೀಕ್ಷಿತ"
" ಧೂಮಂ ಇಂಟರ್‌ವಲ್ ಅಧ್ಬುತ. ಪವನ್ ಕುಮಾರ್ ನೀವು ಯಾವಾಗಲೂ ಸರ್ಪ್ರೈಸ್‌ಗಳನ್ನು ನೀಡುತ್ತೀರಿ. ವಿಭಿನ್ನ, ಅನಿರೀಕ್ಷಿತ, ತಿರುವು, ಥ್ರಿಲ್, ಆಕ್ಷನ್, ಟ್ರಿಕ್ಕಿ ಎಡಿಟಿಂಗ್ ಎಲ್ಲವೂ ಪರ್ಫೆಕ್ಟ್ ಆಗಿದೆ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











