KD The Devil X Review: ಮೊದಲ 45 ನಿಮಿಷ ಸಹಿಸಿಕೊಂಡರೇ.. ಆಮೇಲೆ? ನೆಟ್ಟಿಗರ ರಿವ್ಯೂ ಏನು?

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಕೆಡಿ ದಿ ವಿಲನ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. ಬೆಳಗ್ಗೆ 6 ಹಾಗೂ 6.30ಕ್ಕೆ ಆರಂಭ ಆಗಬೇಕಿದ್ದ ಸಿನಿಮಾ ರದ್ದಾಗಿತ್ತು. ಬಳಿಕ 7 ಗಂಟೆಯಿಂದ ಶೋ ಆರಂಭ ಆಗಿದೆ. ಮೊದಲ ಶೋ ನೋಡಿ ಬಂದವರು ಎಕ್ಸ್‌ನಲ್ಲಿ (ಟ್ವಿಟರ್) ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಮೂರು ವರ್ಷಗಳಿಂದ ಈ ಸಿನಿಮಾ ಜರ್ನಿ ಮಾಡಿದ್ದಾರೆ. ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಅಂತಹ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ 'ಕೆಡಿ ದಿ ವಿಲನ್‌'ಗೆ ಫಸ್ಟ್ ಡೇ ಫಸ್ಟ್ ಶೋ ಸಿಗುವ ಪ್ರತಿಕ್ರಿಯೆ ಮೇಲೆ ಪ್ಯಾನ್ ಇಂಡಿಯಾ ರಿಲೀಸ್ ನಿರ್ಧಾರ ಆಗಿದೆ. ಹಾಗಿದ್ದರೆ, ಸಿನಿಮಾ ನೋಡಿ ಬಂದವರ ಟ್ವಿಟರ್‌ (ಎಕ್ಸ್‌) ಪ್ರತಿಕ್ರಿಯೆ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

Dhruva Sarja  Sanjay Dutt  Shilpa Shetty movie KD The Devil X Review in Kannada


ಕೊನೆಯ 5 ನಿಮಿಷ ಅದ್ಬುತ

'ಕೆಡಿ ದಿ ಡೆವಿಲ್' ನೋಡಲು ಉತ್ತಮವಾದ ಸಿನಿಮಾ. ಅದರಲ್ಲೂ ಸೆಕೆಂಡ್ ಹಾಫ್ ಚೆನ್ನಾಗಿದೆ. ಅತ್ಯುತ್ತಮ ನಿರ್ಮಾಣ, ಎಲೆವೇಷನ್ ಹೈ ಲೆವೆಲ್‌ನಲ್ಲಿದೆ. ಧ್ರುವ ಸರ್ಜಾ ಹಾಗೂ ನಾಯಕಿ ರೀಷ್ಮಾ ನಾಣಯ್ಯ ಅವರ ನಟನೆ ಟಾಪ್‌ ಲೆವೆಲ್‌ನಲ್ಲಿದೆ. ಪ್ರೇಮ್ ನಿರ್ದೇಶನ ಬೆಂಕಿ. ಹಾಗೇ ಕೊನೆಯ ಐದು ನಿಮಿಷಗಳಲ್ಲಿ ಬರುವ ಸುದೀಪ್ ಅವರಂತೂ ಅದ್ಬುತ." ಎಂದು ನೆಟ್ಟಿಗರೊಬ್ಬರು 4 ಸ್ಟಾರ್ ಕೊಟ್ಟಿದ್ದಾರೆ.

ಮೊದಲ 45 ನಿಮಿಷ ಸಹಿಸಿಕೊಂಡರೇ...

"ಮೊದಲ 45 ನಿಮಿಷ ಸಹಿಸಿಕೊಂಡರೆ ಉಳಿದ ಭಾಗ ಸೂಪರ್ ಹಿಟ್. ಧ್ರುವ ಸರ್ಜಾ ಅವರ ಭಾವನಾತ್ಮಕ ಸನ್ನಿವೇಶಗಳು ಚೆನ್ನಾಗಿ ಕೆಲಸ ಮಾಡಿದೆ. ಆಕ್ಷನ್ ಅಂತ ಬಂದಾಗ ಮಚ್ಚು ಬಿಟ್ಟು ಕುಸ್ತಿ ಆಟದ ಎಲೆವೆಷನ್ ಸೀನ್‌ಗಳು ಚೆನ್ನಾಗಿವೆ. ರಮೇಶ್ ಸರ್ ಪಾತ್ರ ಇಷ್ಟ ಆಗತ್ತೆ. ಮತ್ತೆ ಕುತೂಹಲ ಮೂಡಿಸುತ್ತೆ. ಪ್ರೇಮ್ ಸರ್ ನಿರ್ದೇಶನ ಹಾಗೂ ಮುಂದಿನ ಭಾಗಕ್ಕೆ ತಳಹದಿ ಚೆನ್ನಾಗಿ ಹಾಕಿದ್ದಾರೆ." ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕಿಚ್ಚನ ಡೈಲಾಗ್, ಮ್ಯಾನರಿಸಂ ಬೆಂಕಿ

ದಿ ಶೋಮ್ಯಾನ್ ವಾಪಸ್ ಬಂದಾಯ್ತು. ಧ್ರುವ ಸರ್ಜಾ ಕೇವಲ ಆಕ್ಷನ್ ಪ್ರಿನ್ಸ್ ಅಷ್ಟೇ ಅಲ್ಲ. ಅವರು ಆಕ್ಟಿಂಗ್ ಪ್ರಿನ್ಸ್ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಡೈಲಾಗ್ ಹಾಗೂ ಮ್ಯಾನರಿಸಂ ಸ್ಕ್ರೀನ್ ಮೇಲೆ ಬೆಂಕಿ ಹಚ್ಚುತ್ತವೆ. ಈ ದೃಶ್ಯವನ್ನು ನೋಡಿದರೆ, ಥಿಯೇಟರ್‌ನಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಅನಿಸುತ್ತಿದೆ. ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಧ್ರುವ ಸರ್ಜಾ ಬೆಂಕಿ

ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಮಾಸ್‌ ಬ್ಲಾಕ್‌ ಬಸ್ಟರ್ ಕೊಟ್ಟಿದ್ದಾರೆ. ಅದ್ದೂರಿ ಕಮ್‌ಬ್ಯಾಕ್ ಮಾಡಿದ್ದಾರೆ. ಧ್ರುವ ಸರ್ಜಾದು ಏನ್ ಆಕ್ಟಿಂಗ್ ಗುರು. ಸೆಕೆಂಡ್ ಹಾಫ್‌ನಲ್ಲಿ ಡೈಲಾಗ್ ಡಿಲೇವರಿ ಮಾತ್ರ ನೆಕ್ಸ್‌ಟ್‌ ಲೆವೆಲ್‌ನಲ್ಲಿ ಇದೆ. ನಿರ್ದೇಶಕರ ಹೀರೋ ಅಂತ ಸುಮ್ನೆ ಹೇಳ್ತಾರಾ? ಎಮೋಷನ್ಸ್ ಕೂಡ ವರ್ಕ್‌ ಆಗಿದೆ. ಬಾಸ್ ಎಂಟ್ರಿ ಬೆಂಕಿ." ಎಂದು 'ಕೆಡಿ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಸೆಕೆಂಡ್ ಹಾಫ್ ಕ್ರೇಜಿ

ಯಾವುದೇ ಡಲ್ ಆಗಿರುವ ಸನ್ನಿವೇಶಗಳು ಇಲ್ಲ. ಪ್ರತಿಯೊಂದು ದೃಶ್ಯವೂ ಇಂಪ್ಯಾಕ್ಟ್ ಮಾಡುತ್ತೆ. ಧ್ರುವ ಸರ್ಜಾ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸೆಕೆಂಡ್ ಹಾಫ್ ಅಂತೂ ಸಿಕ್ಕಾಪಟ್ಟೆ ಕ್ರೇಜಿಯಾಗಿದೆ." ಎಂದು ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

English summary
Dhruva Sarja, Sanjay Dutt, Shilpa Shetty movie KD The Devil X Review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X