»   » ಡರ್ಟಿ ಪಾಲಿಟಿಕ್ಸ್ : ಮಲ್ಲಿಕಾ ಮೈಮಾಟ ಬಿಟ್ರೆ ಚಿತ್ರ ಸಪ್ಪೆ

ಡರ್ಟಿ ಪಾಲಿಟಿಕ್ಸ್ : ಮಲ್ಲಿಕಾ ಮೈಮಾಟ ಬಿಟ್ರೆ ಚಿತ್ರ ಸಪ್ಪೆ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಮ್ಮ ಸೆಕ್ಸಿ ಮೈಮಾಟದಿಂದ ಪಡ್ಡೆಗಳನ್ನು ಹಾಫ್ ಮರ್ಡರ್ ಮಾಡಿರುವ ತಾರೆ ಮಲ್ಲಿಕಾ ಶೆರಾವತ್ ಅವರ ಅಭಿನಯದ ಬಾಲಿವುಡ್ ಚಿತ್ರ 'ಡರ್ಟಿ ಪಾಲಿಟಿಕ್ಸ್' ನೋಡಿದರೆ ಮೈ ಕೈ ಪರಚಿಕೊಂಡು ಸೀಟು ಹರಿದು ಚಿತ್ರಮಂದಿರದಿಂದ ಹೊರ ಬರುವ ಎಲ್ಲಾ ಸಾಧ್ಯತೆಗಳಿದೆ. ಸ್ವಲ್ಪ ಕಾಲ ಗ್ಯಾಪ್ ತೆಗೆದುಕೊಂಡು ಬೆಳ್ಳಿ ಪರದೆಗೆ ಕಾಲಿಟ್ಟಿರುವ ಮಲ್ಲಿಕಾರನ್ನು ಈ ಚಿತ್ರದಲ್ಲಿ ನೋಡಲೇಬೇಕಾದರೆ ಅದು ನಿಮ್ಮ ಕರ್ಮ. ಮಾಡೋಕೆ ಬೇರೆ ಕೆಲ್ಸ ಇಲ್ಲದಿದ್ದರೆ ಧಾರಾಳವಾಗಿ ಚಿತ್ರಮಂದಿರದಲ್ಲಿ ಕಾಲ ಕಳೆಯಿರಿ.

'ಡರ್ಟಿ ಪಾಲಿಟಿಕ್ಸ್' ಚಿತ್ರ 'ಡರ್ಟಿ ಪಿಕ್ಚರ್'ನಂತೆ ಭಾರಿ ಸದ್ದು ಮಾಡದಿದ್ದರೂ ಕುತೂಹಲವನ್ನಂತೂ ಕೆರಳಿಸಿತ್ತು. ಈ ಚಿತ್ರದ ಕಥೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ರಾಜಸ್ತಾನದ ಗುರ್ಜಾರಿ ಸಮುದಾಯಕ್ಕೆ ಸೇರಿದ ಭನ್ವಾರಿ ದೇವಿ ಕುರಿತಾಗಿದ್ದು ಎಂಬುದು ಎಲ್ಲರ ಗಮನ ಸೆಳೆದಿತ್ತು. ಆದರೆ, ಚಿತ್ರದ ನಿರ್ದೇಶಕರು ಇದು ಭನ್ವಾರಿ ದೇವಿ ಕಥೆಯಲ್ಲ ಎಂದು ಸ್ಪಷ್ಟನೆ ನೀಡಿ ಇದ್ದ ಕುತೂಹಲಕ್ಕೂ ತಣ್ಣಿರೆರಚಿದ್ದರು. [ಶೆರಾವತ್ 'ಡರ್ಟಿ' ಚಿತ್ರಕ್ಕೆ ಕೋರ್ಟ್ ನಿಷೇಧ]

ಈ ಚಿತ್ರದ ಪಾತ್ರವರ್ಗದಲ್ಲಿ ಓಂ ಪುರಿ, ರಾಜ್ ಪಾಲ್ ಯಾದವ್ ಘಟಾನುಘಟಿಗಳ ಜೊತೆಗೆ ಮಲ್ಲಿಕಾ ಮೈಮಾಟ ಪ್ಲಸ್ ಆಗುವ ಬದಲು ಟುಸ್ ಆಗಿದೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸುತ್ತ ಹೆಣೆದ ಕಥೆಯಲ್ಲಿ ತಂತ್ರ-ಪ್ರತಿತಂತ್ರ, ಸೆಕ್ಸ್ ದೋಖಾ ಎಲ್ಲವೂ ಇದೆ.

ಮಲ್ಲಿಕಾ ಶೆರಾವತ್ ಅವರು ಅನೂಕಿ ದೇವಿ ಪಾತ್ರವನ್ನು ಚಿತ್ರದಲ್ಲಿ ಪೋಷಿಸಿದ್ದಾರೆ. ನಿರ್ದೇಶಕರು ಏನೇ ಹೇಳಿದರೂ ಚಿತ್ರದ ಕಥೆ ಭನ್ವಾರಿ ದೇವಿ, ಮಡರ್ನಾ ಸೆಕ್ಸ್ ಟೇಪ್ ವಿವಾದ ಸುತ್ತಾ ಸುತ್ತುತ್ತದೆ. ಸನ್ನಿ ಲಿಯೋನ್ ಜಮಾನದಲ್ಲಿ ಮಲ್ಲಿಕಾ ನಟನೆ ಗಂಧವನ್ನು ಪೂಸಿಕೊಳ್ಳದೆ ಮೈಮಾಟ ನಂಬಿಕೊಂಡಿದ್ದರೆ ದೇವರೆ ಗತಿ!

ಕೊಳಕು ಚಿತ್ರ ಅಭಿಮಾನಿಗಳಿಗೆ ಮಾತ್ರ : ನೌ ರನ್ನಿಂಗ್

ಐಟಂ ನಂಬರ್, ಸೆಕ್ಸಿ ಸೀನ್, ಅವಾಚ್ಯ ಶಬ್ದ, ಕೊಳಕು ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಓಕೆ. ಇಲ್ಲದಿದ್ದರೆ ಚಿತ್ರಮಂದಿರದ ಕಡೆ ತಲೆ ಹಾಕಬೇಡಿ. ಎ ಸರ್ಟಿಫಿಕೇಟ್ ಇದ್ದರೂ ನಾಸೀರುದ್ದೀನ್ ಶಾ, ಓಂ ಪುರಿ, ಅನುಪಮ್ ಖೇರ್, ಅತುಲ್ ಕುಲ್ಕರ್ಣಿ, ಜಾಕಿ ಶ್ರಾಫ್ ರಂಥ ಹಿರಿಯ ತಲೆಗಳ ನಡುವೆ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣ ಸೋತಿದೆ-ನೊಯೊನ್ ಜ್ಯೋತಿ- ನೌರಿಂಗ್ 1/5

ಎಲ್ಲವೂ ಸಾಧಾರಣ, ಮಲ್ಲಿಕಾ 'ಡರ್ಟಿ' ಚಿತ್ರ ಕೂಡಾ ಡರ್ಟಿ

ರಾಜಕೀಯ ಆಧಾರಿತ ಚಿತ್ರಗಳನ್ನು ನಿಭಾಯಿಸಲು ಒಂದಷ್ಟು ತರಬೇತಿ ಬೇಕಾಗುತ್ತದೆ. ಪ್ರಕಾಶ್ ಝಾ, ಮಧುರ್ ಭಂಡಾರ್ಕರ್ ಚಿತ್ರಗಳನ್ನು ನೊಡಿ ಕೆಸಿ ಬೋಕಾಡಿಯಾ ಕಲಿಯುವುದು ಸಾಕಷ್ಟಿದೆ.ದೊಡ್ಡ ತಾರಾಗಣ, ಮಲ್ಲಿಕಾ ಮೈಮಾಟ ಇದ್ದರೂ ಚಿತ್ರ ಸ್ಕ್ರಿಪ್ಟ್, ನಿರೂಪಣೆಯಲ್ಲಿ ಸೋತಿದೆ. 110 ಕೋಟಿ ರು ಸುರಿದು ಒಳ್ಳೆ ಚಿತ್ರವನ್ನು ಕತ್ತು ಹಿಸುಕಿ ಅಂತ್ಯಗಾಣಿಸಲಾಗಿದೆ. -ಜಸ್ಟ್ ಬಾಲಿವುಡ್

ಹೋಳಿ ದಿನದಂದು ರಸಹೀನ ಚಿತ್ರ ದರ್ಶನ 0.5/5

ಫಿಫ್ಟಿ ಶೇಡ್ಸ್ ಆಫ್ ಗ್ರೇ ಚಿತ್ರಕ್ಕೆ ನಿಷೇಧ ಹೇರಲಾಗುತ್ತದೆ. ಡರ್ಟಿ ಪಾಲಿಟಿಕ್ಸ್ ನಂಥ ಕೊಳಕು ಚಿತ್ರ ಚಿತ್ರಮಂದಿರದಲ್ಲಿ ರಾರಾಜಿಸುತ್ತದೆ. ಹೋಳಿ ದಿನದ ರಂಗು ರಂಗಿನ ಆಟದ ಮುಂದೆ ರಸಹೀನ ಚಿತ್ರ ನೋಡಿ ಮೂಡ್ ಹಾಳು ಮಾಡಿಕೊಳ್ಳಲು ಈ ಚಿತ್ರ ತಪ್ಪದೇ ನೋಡಿ. ಮಲ್ಲಿಕಾ ನಟನೆ ಕ್ಲಾಸ್ ಗೆ ಸೇರುವುದಿರಲಿ. ಇತರೆ ಹಿರಿಯ ನಟರನ್ನು ನೋಡಿಯಾದರೂ ಕಲಿಯಲಿ.-ಶುಭ್ರ ಗುಪ್ತ.

ಜಸ್ಟ್ ಟೈಂ ಪಾಸ್, ಟೈಂ ಇದ್ರೆ ನೋಡಿ 2/5

ಹಿರಿಯ ನಟರ ಅಭಿನಯಕ್ಕಾಗಿ ಚಿತ್ರವನ್ನು ಒಮ್ಮೆ ನೋಡಬಹುದು .ಚಿತ್ರಮಂದಿರಕ್ಕೆ ಹೋಗಲು ಆಗದಿದ್ದರೆ ಮನೆಯಲ್ಲೇ ಕೂತು ನೋಡಿ ಇನ್ನೇನು ಚಿತ್ರ ತೋಪೆದ್ದು ಟಿವಿಗೆ ಬರುವ ಎಲ್ಲಾ ಲಕ್ಷಣಗಳಿವೆ. ರಾಜಕೀಯ, ಬ್ಲಾಕ್ ಮೇಲ್ ಎಲ್ಲವೂ ಅನೇಕ ಚಿತ್ರಗಳಲ್ಲಿ ಬಂದಿದೆ. ನೈಜ ಕಥೆ ಆಧಾರಿಸಿದ ಚಿತ್ರ ಎಂಬ ಹೆಗ್ಗಳಿಕೆ ಹಾಳುಮಾಡಿರುವ ಈ ಚಿತ್ರ ನೋಡಿದಿದ್ದರೆ ನಷ್ಟವೇನೂ ಇಲ್ಲ- ಇಂಡಿಯಾಟಿವಿನ್ಯೂಸ್.ಕಾಂ

ಎಲ್ಲವೂ ವೇಸ್ಟ್ ವೇಸ್ಟ್, 1/5 ಮಸಾಲ.ಕಾಂ

ಮಸಾಲ.ಕಾಂ ಲೋಕೇಶ್ ಬರೆಯುತ್ತಾರೆ...ನಾಸೀರ್ ರಿಂದ ಓಂಪುರಿ -ಸುಶಾಂತ್, ಅನುಪಮ್ -ಅತುಲ್ ಕುಲ್ಕರ್ಣಿ-ಯಶಪಾಲ್ ಪ್ರತಿಭೆ ಹಾಳುಗೆಡವಿದ ನಿರ್ದೇಶಕ ಬೋಕಾಡಿಯಾ, ಮಲ್ಲಿಕಾರಿಂದ ಒಂದಾದರೂ ಎಕ್ಸ್ ಪ್ರೆಷನ್ ತೆಗೆಸಿದ್ದರೆ ಸಾರ್ಥಕವಾಗುತ್ತಿತ್ತು. ಒಂದು ದೃಶ್ಯದಲ್ಲಿ ಮಲ್ಲಿಕಾ ಫೋನ್ ನೆಲಕ್ಕಪ್ಪಿಳಿಸುತ್ತಾಳೆ. ಕೆಳಗೆ ಬಿದ್ದ ಫೋನ್ ಕೊಡುವ ಭಾವನೆ ಆಕೆ ಮುಖದಲ್ಲಿ ಹುಡುಕಿದರೂ ಸಿಗುವುದಿಲ್ಲ. -1/5.

English summary
The movie Dirty Politics which is bringing sensuous Mallika Sherawat back on the screen after a long gap is having its release on the festival of Holi.Directed by K.C. Bokadia, Dirty Politics features Mallika Sherawat along with veteran actors like Om Puri, Ashutosh Rana, Anupam Kher, Naseeruddin Shah and Jackie Shroff and here is a review of Dirty Politics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada