Landlord X Review: 'ಲ್ಯಾಂಡ್‌ಲಾರ್ಡ್' ನೋಡಿ ನೆಟ್ಟಿಗರು ಏನಂದ್ರು? ಎಷ್ಟು ರೇಟಿಂಗ್ ಕೊಟ್ಟರು?

ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಇಂದು (ಜನವರಿ 23) ಅದ್ಧೂರಿಯಾಗಿ ರಿಲೀಸ್ ಆಗಿದೆ. ಪಕ್ಕಾ ಕನ್ನಡ ಮಣ್ಣಿನ ಈ ಸಿನಿಮಾದಲ್ಲಿ ಬ್ಲ್ಯಾಕ್ ಕೋಬ್ರಾ ವಿಜಯ್, ಡಿಂಪಲ್ ಕ್ವೀನ್ ರಚಿತಾ ರಾಮ್ ಗ್ರಾಮೀಣ ಭಾಗದ ಜನರ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಅವರ ಪುತ್ರಿ ರಿತಾನ್ಯಾ ಕೂಡ ನಟಿಸಿದ್ದಾರೆ.

'ಕಾಟೇರ' ಸಿನಿಮಾಗೆ ಕಥೆಯನ್ನು ಒದಗಿಸಿದ್ದ ಜಡೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅಲ್ಲದೆ ಸ್ಯಾಂಡಲ್‌ವುಡ್‌ನ ಲಕ್ಕಿ ಪ್ರಡ್ಯೂಸರ್ 'ಸಾರಥಿ' ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಕಾರಣಕ್ಕೆ 2026ರ ಮೊದಲ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತೆ ಅನ್ನೋ ನಿರೀಕ್ಷೆಯಿತ್ತು. ಅದಕ್ಕೆ ಸಿನಿಮಾ ನೋಡಿದವರು ಎಕ್ಸ್‌ನಲ್ಲಿ ಕೊಟ್ಟ ವಿಮರ್ಶೆ ಏನು? ತಿಳಿಯುವುದಕ್ಕೆ ಮುಂದೆ ಓದಿ.

Duniya Vijay  Rachira Ram  Ritanya Vijay Acted Landlord X review in Kannada

ಅಗತ್ಯವಿರುವ ಕಥೆ

"ತೀವ್ರವಾದ, ಗ್ರಾಮೀಣ ಹಿನ್ನಲೆಯುಳ್ಳ, ಹೃದಯವನ್ನು ಭಾರಗೊಳಿಸುವ ಲ್ಯಾಂಡ್‌ಲಾರ್ಡ್ ಎಲ್ಲರೂ ನೋಡಬೇಕಾದ ಸಿನಿಮಾವಾಗಿ ಮಾರ್ಪಾಡು ಆಗುತ್ತಿದೆ. ಇದು ಜಮೀನಿನ ಹಕ್ಕುಗಳಿಗಾಗಿ ಹೋರಾಟ ಮಾಡುವ ಪವರ್‌ಫುಲ್ ಹಾಗೂ ಅಗತ್ಯವಿರುವ ಕಥೆಯಾಗಿದೆ. ದುನಿಯಾ ವಿಜಯ್ ಅವರ ನಟನೆ ಟಾಪ್‌ನಲ್ಲಿದೆ" ಎಂದು ನೆಟ್ಟಿಗರೊಬ್ಬರು ಸಿನಿಮಾ ನೋಡಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡದ ಅದ್ಭುತ ಸಿನಿಮಾ

"ಲ್ಯಾಂಡ್‌ಲಾರ್ಡ್‌ ಸಿನಿಮಾ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳ ಪಟ್ಟಿಯಲ್ಲಿ ಎತ್ತರದಲ್ಲಿ ನಿಲ್ಲುತ್ತೆ. ಕಠೋರವಾದ, ಗ್ರಾಮೀಣ ಸೊಗಡಿನ ಹಾಗೂ ತೀವ್ರ ಕ್ರೂರ ಎನಿಸುವ ಸಿನಿಮಾ. ಯಾವುದೇ ಕೂಗಾಟದ ಸನ್ನಿವೇಶಗಳು ಇಲ್ಲ. ಖಳನಾಯಕನಾಗಿ ರಾಜ್ ಬಿ ಶೆಟ್ಟಿ ಅರ್ಥಪೂರ್ಣವಾದ ಪರ್ಫಾಮೆನ್ಸ್ ಅನ್ನು ನೀಡಿದ್ದಾರೆ." ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ದೊಡ್ಡ ಗೆಲುವು

"ಲ್ಯಾಂಡ್‌ಲಾರ್ಡ್‌ ಸಿನಿಮಾದ ನಿರ್ದೇಶಕ ಜಗದೀಶ್ ಒಬ್ಬ ಲೇಖಕನಾಗಿ, ನಿರ್ದೇಶಕನಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎದ್ದು ನಿಂತು ಚಪ್ಪಾಳೆ ತಟ್ಟುವಂತಹ ಅಭಿನಯವನ್ನು ಕೊಟ್ಟಿದ್ದಾರೆ. ಎಲ್ಲಾ ಪಾತ್ರಗಳು ಅದ್ಭುತವಾಗಿ ನಟಿಸಿವೆ. ಮಾಸ್ತಿ ಡೈಲಾಗ್‌ಗಳು ಹಾಗೂ ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಕಿಕ್ ಕೊಟ್ಟಿದೆ. 2026‌ ಸ್ಯಾಂಡಲ್‌ವುಡ್‌ಗೆ ‌ ಸಿನಿಮಾಗೆ ದೊಡ್ಡ ಗೆಲವು ತಂದು ಕೊಡುತ್ತೆ." ಎಂದು ಮತ್ತೊಬ್ಬರು ಹೇಳಿದ್ದಾರೆ.


ಗ್ರಾಮೀಣ ಆಕ್ಷನ್ ಡ್ರಾಮ

"ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್‌' ಸಿನಿಮಾ ಶಕ್ತಿಯುತವಾದ ಆಕ್ಷನ್-ಡ್ರಾಮ. ಗ್ರಾಮೀಣ ಪ್ರದೇಶದಲ್ಲಿರುವ ಜನರು ಜಮೀನ ಹಕ್ಕುಗಳಿಗಾಗಿ, ಗೌರವಕ್ಕಾಗಿ ಕಷ್ಟ ಪಡುವುದು ಹೃದಯವನ್ನು ಕಲುಕುತ್ತದೆ. ಎಲ್ಲಾ ನಟರ ಅದ್ಬುತ ಪ್ರದರ್ಶನಗಳು, ಒಂದು ಕ್ಷಣವೂ ಅಲುಗಾಡದಂತೆ ಮಾಡುವ ಕಥೆ ಎಲ್ಲವೂ ಚೆನ್ನಾಗಿದೆ. ಈ ಸಿನಿಮಾವನ್ನು ಎಲ್ಲರೂ ನೋಡಬಹುದು. ಸ್ಯಾಂಡಲ್‌ವುಡ್ ಸಲಗ ಆಕ್ಟಿಂಗ್ ಬೆಂಕಿ" ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.

ಎಲ್ಲಾ ಪಾತ್ರಗಳು ನ್ಯಾಯ ಕೊಟ್ಟಿವೆ

"ಲ್ಯಾಂಡ್‌ಲಾರ್ಡ್ ಸಿನಿಮಾ ಸ್ಟ್ರಾಂಗ್ ಕಂಟೆಂಟ್ ಇರುವ ಸಿನಿಮಾ. ಗ್ರಾಮೀಣ ಪ್ರದೇಶಗಳಲ್ಲಿ ಜೀತದಾಳು ಸಂಸ್ಕೃತಿಯನ್ನು ವಿರೋಧಿಸುವ ಸಿನಿಮಾ. ಇಲ್ಲಿ ಪವರ್‌ಫುಲ್ ಪಾತ್ರಗಳಿವೆ. ಎಲ್ಲಾ ಪಾತ್ರಗಳು ಈ ಸಿನಿಮಾಗೆ ನ್ಯಾಯವನ್ನು ವದಗಿಸಿವೆ. ಚೊಚ್ಚಲ ಬಾರಿಗೆ ನಟಿಸಿರುವ ರಿತಾನ್ಯಾ ವಿಜಯ್ ಪಾತ್ರ ಚೆನ್ನಾಗಿದೆ. ಈ ಸಿನಿಮಾ ವರ್ಡ್ ಆಫ್ ಮೌತ್‌ನ ಅಗತ್ಯವಿದೆ." ಎಂದು 5ಕ್ಕೆ 4 ರೇಟಿಂಗ್ ಅನ್ನು ಕೊಟ್ಟಿದ್ದಾರೆ.

More from Filmibeat

English summary
Duniya Vijay, Rachira Ram, Ritanya Vijay Acted Landlord X review in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X