Dunki Trailer ‍‍‍‍‍‍‍‍‍‍X Review:"500 ಕೋಟಿ ಫಿಕ್ಸ್..ಕಾಮಿಡಿ ಚೆನ್ನಾಗಿಲ್ಲ": 'ಸಲಾರ್'-'ಡಂಕಿ'ಯಾವ್ದು ಸೂಪರ್?

ಈ ವರ್ಷದ ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ'ಯ ಟ್ರೈಲರ್ ರಿಲೀಸ್ ಆಗಿದೆ. ಡಂಕಿ ಡ್ರಾಪ್ 4 ಅಂತಲೂ ಹೇಳುವ ಈ ಸಿನಿಮಾದ ತುಣುಕನ್ನು ನೋಡಿ ನೆಟ್ಟಿಗರು ಡಿಸೈನ್ ಡಿಸೈನ್ ಆದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್ ಆಗಿದ್ದರಿಂದ ಈ ಸಿನಿಮಾ ಟ್ರೈಲರ್ ಕುತೂಹಲ ಕೆರಳಿಸಿತ್ತು.

'ಡಂಕಿ' ಹಾಗೂ 'ಸಲಾರ್' ಕಾಂಪಿಟೇಷನ್‌ಗೆ ಬಿದ್ದಿವೆ. ಈಗಾಗಲೇ ಪ್ರಶಾಂತ್ ನೀಲ್ ನಿರ್ದೇಶಿಸಿರೋ 'ಸಲಾರ್‌' ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಈಗ 'ಡಂಕಿ' ಟ್ರೈಲರ್ ರಿಲೀಸ್ ಆಗಿದ್ದು, ಅದನ್ನು ನೋಡಿ ನೆಟ್ಟಿಗರು ಏನಂತಿದ್ದಾರೆ? ಟ್ವಿಟರ್‌ (‍X)ನಲ್ಲಿ 'ಡಂಕಿ' ಟ್ರೈಲರ್‌ಗೆ ಸಿಕ್ಕಿರೋ ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Dunki Trailer: SRK Fans Flood Twitter Aka X Platform with Overwhelming Response - Buzz

"500 ಕೋಟಿ ಕಲೆಕ್ಷನ್ ಮಾಡುತ್ತೆ"

"ಡಂಕಿ ಟ್ರೈಲರ್ ನೋಡಿದ ಬಳಿಕ ಒಂದಂತೂ ಸ್ಪಷ್ಟವಾಗಿದೆ. ಅದೇನು ಅಂದರೆ, ಈ ಸಿನಿಮಾ ಭಾರತದಲ್ಲಿ ಆರಾಮಾಗಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಇಲ್ಲಾ ಅದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಬಹುದು. ವ್ಹಾವ್ ಎಂತಹ ಅದ್ಭುತ ಟ್ರೈಲರ್." ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇಬ್ಬರು ಕಿಂಗ್ ಸಮಾಗಮ

"ರಾಜ್‌ಕುಮಾರ್ ಹಿರಾನಿ ಯಾವತ್ತೂ ನಿರಾಸೆ ಮಾಡಿಲ್ಲ. ಬಾಲಿವುಡ್ ಕಿಂಗ್ ಅನ್ನು ಕಿಂಗ್ ಆಫ್ ಕಂಟೆಂಡ್ ಭೇಟಿ ಮಾಡಿದ ಮೇಲೆ ಇದು ನಡೆಯಲೇಬೇಕು." ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

"ಹಾಸ್ಯ ನ್ಯಾಚುರಲ್ ಆಗಿಲ್ಲ"

"ಈ ಸಿನಿಮಾದಲ್ಲಿ ಹಾಸ್ಯ ನ್ಯಾಚುರಲ್ ಅಂತ ಅನಿಸುತ್ತಿಲ್ಲ. ಇದೊಂದು ಮಾಮೂಲಿ ಹಾಸ್ಯ ಕಥೆ ಅಂತ ಅನಿಸುತ್ತೆ. ಶಾರುಖ್ ಖಾನ್ ಡೈಲಾಗ್ ಕೆಟ್ಟದಾಗಿ ಕೇಳಿಸುತ್ತೆ. ಬಾಯಲ್ಲಿ ಏನೋ ಇಟ್ಟುಕೊಂಡಿದ್ದಾರೆ ಅಂತ ಭಾಸವಾಗುತ್ತೆ. ಇದು ಹಿರಾನಿಯ ಹಿಂದಿನ ಸಿನಿಮಾಗಳನ್ನು ನೆನಪಿಸೋದಿಲ್ಲ." ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

"ಟಿಪಿಕಲ್ ಹಿರಾನಿ ಸಿನಿಮಾ"

"ಇದೊಂದು ಟಿಪಿಕಲ್ ಹಿರಾನಿ ಮಾಸ್ ಸಿನಿಮಾ. ಡಂಕಿ ಸಿನಿಮಾ ಕೇವಲ ಲಂಡನ್‌ಗೆ ವಲಸೆ ಹೋಗುವುದಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚು. ಆಲ್‌ ಟೈಮ್ ಬ್ಲಾಕ್ ಬಸ್ಟರ್ ಸಿನಿಮಾ ಬರುತ್ತಿದೆ." ಎಂದು ಮತ್ತೊಬ್ಬರ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಪರಿಪೂರ್ಣ ಸಿನಿಮ್ಯಾಟಿಕ್ ಎಕ್ಸ್‌ಪ್ರೆಷನ್

"ಹಿಂದೆಂದೂ ನಾವು ಇಂತಹದ್ದನ್ನು ನೋಡಿರಲಿಲ್ಲ. ಈ ಸಿನಿಮಾ ಖಂಡಿತಾ ಸಿನಿಮ್ಯಾಟಿಕ್ ಮಾಸ್ಟರ್‌ಪೀಸ್ ಆಗುವುದರಲ್ಲಿ ಅನುಮಾನವಿಲ್ಲ. ಹಲವು ವರ್ಷಗಳ ವರೆಗೂ ಈ ಸಿನಿಮಾವನ್ನು ನೆನಪಿಸನಲ್ಲಿ ಇಟ್ಟುಕೊಳ್ಳುತ್ತಾರೆ." ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಸ್ವದೇಶ್-ಚಕ್‌ ದೇ ಇಂಡಿಯಾ ಲೀಗ್

"ಈ ವರ್ಷದ ಅದ್ಭುತ ಪರ್ಫಾಮೆನ್ಸ್. ಹರ್ದಿಯಾಲ್ ಸಿಂಗ್ ಉರ್ಫ್ ಹಾರ್ಡಿ ಪಾತ್ರದಲ್ಲಿ ಶಾರುಖ್ ಖಾನ್ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಡಂಕಿ ಸಿನಿಮಾ ಸ್ವದೇಶ್ ಹಾಗೂ ಚಕ್ ದಿ ಇಂಡಿಯಾದ ಸಾಲಿನಲ್ಲಿ ನಿಲ್ಲುತ್ತೆ ಎಂದಿದ್ದಾರೆ.

"ನಿರೀಕ್ಷಿಸಿದಂತೆ ಇಲ್ಲ"

"ನಿರೀಕ್ಷೆ ಮಾಡಿದಂತೆ ಇಲ್ಲ. ಎಡಿಟಿಂಗ್ ಕೆಟ್ಟದಾಗಿದೆ. ಇದು ಖಂಡಿತಾ ರಾಜು ಹಿರಾನಿ ಸಿನಿಮಾ ಅಲ್ಲವೇ ಅಲ್ಲ." ಎಂದು ಹೇಳಿದ್ದಾರೆ.

'ಸಲಾರ್' ಟ್ರೈಲರ್‌ನಂತೆ 'ಡಂಕಿ'ಗೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ರಾಜ್‌ಕುಮಾರ್ ಹಿರಾನಿ ಸಿನಿಮಾ ಕಂಟೆಂಟ್ ಜೊತೆ ಎಂಟರ್‌ಟೈನ್ಮೆಂಟ್ ಕೂಡ ಇರುತ್ತೆ ಅನ್ನೋ ನಂಬಿಕೆಯಲ್ಲಿ ಸಿನಿಪ್ರಿಯರಿದ್ದಾರೆ. ಏನಕ್ಕೂ ರಿಲೀಸ್‌ಗೆ ಇನ್ನೂ ಕೆಲವು ದಿನ ಬಾಕಿ ಉಳಿದಿದೆ. ಅಷ್ಟರಲ್ಲಿ 'ಸಲಾರ್' ಮತ್ತೆ ಡಂಕಿಗೆ ಟಕ್ಕರ್ ಕೊಡಬಹುದು.

More from Filmibeat

English summary
Dunki Trailer Twitter Reaction: SRK Fans Give Overwhelming Response:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X