Gadar 2 Movie Review: ಹಳೆ ಕಥೆ.. ಹಳೆ ಶೈಲಿ.. 'ಗದರ್ 2' ಸನ್ನಿ ಡಿಯೋಲ್ ಅಭಿಮಾನಿಗಳಿಗೆ ಮಾತ್ರ!

Rating:
2.5/5
Star Cast: Sunny Deol, Ameesha Patel, Utkarsh Sharma
Director: Anil Sharma

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ಗದರ್' ಕೂಡ ಒಂದು. ಸನ್ನಿ ಡಿಯೋಲ್ ಹಾಗೂ ಅಮಿಶಾ ಪಟೇಲ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಎನಿಸಿಕೊಂಡಿತ್ತು. 2001ರಲ್ಲಿ ತೆರೆಕಂಡಿದ್ದ 'ಗದರ್' ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈಗ ಅದೇ ಸಿನಿಮಾದ ಸೀಕ್ವೆಲ್ 22 ವರ್ಷಗಳ ಬಳಿಕ ನಿರ್ಮಾಣಗೊಂಡು ರಿಲೀಸ್ ಆಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ 'ಗದರ್ 2' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. 'ಗದರ್' ಸಿನಿಮಾದ ನಿರೀಕ್ಷೆಯೇ ಈ ಸಿನಿಮಾದ ಮೇಲೂ ಇದೆ. 22 ವರ್ಷಗಳ ಬಳಿಕ ತೆರೆಕಂಡಿರೋ ಸೀಕ್ವೆಲ್‌ನ ಪ್ರಮುಖ ಪಾತ್ರಗಳಲ್ಲಿ ಸನ್ನಿ ಡಿಯೋಲ್ ಹಾಗೂ ಅಮಿಶಾ ಪಟೇಲ್‌ರನ್ನೇ ಕಾಣಬಹುದು.

Gadar 2 Review in Kannada

ಅನಿಲ್ ಶರ್ಮಾ ಅವರೇ 'ಗದರ್ 2' ಸಿನಿಮಾದ ಸೀಕ್ವೆಲ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸನ್ನಿ ಡಿಯೋಲ್, ಅಮಿಶಾ ಪಟೇಲ್ ಹಾಗೂ ಉತ್ಕರ್ಷ್ ಶರ್ಮಾ ಮೂವರೂ ತಾರಾ ಸಿಂಗ್, ಸಕಿನಾ ಹಾಗೂ ಜೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಈ ಪ್ರೇಮಕಥೆ ಹೇಗಿದೆ? ಕಥೆ, ನಿರ್ದೇಶನ, ನಟನೆ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಗದರ್ 2' ಸಿನಿಮಾದ ಕಥೆಯೇನು?

'ಗದರ್ 2' ಸಿನಿಮಾದ 1971ರ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಸಿನಿಮಾದ ಹೀರೊ ತಾರಾ ಸಿಂಗ್ (Sunny Deol) ಮತ್ತೆ ಪಾಕಿಸ್ತಾನಕ್ಕೆ ತನ್ನ ಮಗನನ್ನು ಹುಡುಕಿಕೊಂಡು ಹೋಗುವ ಕಥೆ. ಪಾಕಿಸ್ತಾನದಿಂದ ತನ್ನ ಮಗ ಚರಣ್ ಜೀತ್ ಉರ್ಫ್ ಜೀತ್ ಅನ್ನು ಮರಳಿ ಭಾರತಕ್ಕೆ ಹೇಗೆ ಕರೆದುಕೊಂಡು ಬರುತ್ತಾನೆ ಅನ್ನೋದು ಒನ್‌ ಲೈನ್ ಸ್ಟೋರಿ. 2001ರ 'ಗದರ್' ನೋಡಿದವರಿಗೆ ಈ ಸಿನಿಮಾ ಕಥೆ ಅರ್ಥ ಆಗುತ್ತೆ. ಹಾಗೇ ಈ ಸಿನಿಮಾವನ್ನು ನೋಡುತ್ತಾ ಹಳೆಯ ಸಿನಿಮಾದ ಕಥೆ ಕಣ್ಮುಂದೆ ಬರುತ್ತಾ ಹೋಗುತ್ತೆ.

Gadar 2 Review in Kannada

ಹಳೆ ಕಥೆ.. ಹಳೆ ಶೈಲಿ

'ಗದರ್ 2' ಹಳೇ ಬಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ. 70 ದಶಕದ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುವವರಿಗೆ 'ಗದರ್ 2' ಹೇಳಿ ಮಾಡಿಸಿದಂತಿದೆ. ಹಾಗೇ ಸನ್ನಿ ಡಿಯೋಲ್ ಅಭಿಮಾನಿಗಳಿಗೆ ಬಹಳ ದಿನಗಳ ಬಳಿಕ ಮಾಸ್ ಹಾಗೂ ಅಡ್ವೆಂಚರ್ ಸ್ಟೋರಿ ಸಿನಿಮಾ ಸಿಕ್ಕಿದೆ ಅಂತ ಹೇಳಬಹುದು. ಆದರೆ, ನಗರ ಪ್ರದೇಶದ ಜನರಿಗೆ, ಇಂದಿನ ಪೀಳಿಗೆಗೆ ಈ ಸಿನಿಮಾದಲ್ಲಿ ಲಾಜಿಕ್ ಇಲ್ಲ ಅಂತ ಅನಿಸಬಹುದು. ಹಾಗೇ ಸಿನಿಮಾ ನಿರೂಪಣೆಯಲ್ಲಿ ಹೊಸತನವೇನೂ ಇಲ್ಲ ಅಂತಾನೂ ಅನಿಸಬಹುದು.

'ಗದರ್ 2'ನಲ್ಲಿ ನಟನೆ ಹೇಗಿದೆ?

70ರ ದಶಕದ ಕಾಲಘಟ್ಟವನ್ನು ಈ ಸಿನಿಮಾದಲ್ಲಿ ಸೆರೆ ಹಿಡಿಯುವಲ್ಲಿ ಸಿನಿಮಾ ತಂಡ ಯಶಸ್ವಿಯಾಗಿದೆ. ಸನ್ನಿ ಡಿಯೋಲ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಕ್ಷನ್, ಡ್ರಾಮ, ಭಾವನಾತ್ಮಕ ಸನ್ನಿವೇಶಗಳಲ್ಲಿ ಸನ್ನಿ ಡಿಯೋಲ್ ಪ್ರೇಕ್ಷಕರ ಮುಂದೆ ಎದುರಾಗುತ್ತಾರೆ. ಮಾಸ್ ಸಿನಿಮಾ ಇಷ್ಟ ಪಡುವ ಪ್ರೇಕ್ಷಕರಿಗೆ 'ಗದರ್ 2' ಇಷ್ಟ ಆಗಬಹುದು. ಸನ್ನಿ ಡಿಯೋಲ್ ಪಾತ್ರಕ್ಕೆ ಶ್ರಮ ಪಟ್ಟಿರೋದು ಎದ್ದು ಕಾಣುತ್ತೆ. ಹಾಗೇ ಅಮಿಶಾ ಪಟೇಲ್ ಕೂಡ ಗಮನ ಸೆಳೆಯುತ್ತಾರೆ. ಸನ್ನಿ ಡಿಯೋಲ್ ಮಗನಾಗಿ ಉತ್ಕಟ್ ಶರ್ಮಾ ಮಿಂಚಿದ್ದಾರೆ.

ನಿರ್ದೇಶನ ಹೇಗಿದೆ?

ನಿರ್ದೇಶಕ ಅನಿಲ್ ಶರ್ಮಾ 'ಗದರ್ 2' ಸಿನಿಮಾವನ್ನು ಮತ್ತಷ್ಟು ಅದ್ಭುತವಾಗಿಯೇ ಚಿತ್ರೀಕರಿಸಬಹುದಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿಕೊಂಡಿದ್ದ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಡ್ರಾಮ ಇದೆ ಅನಿಸುತ್ತೆ. ಟಿಪಿಕಲ್ ಸನ್ನಿ ಡಿಯೋಲ್ ಆಕ್ಷನ್ ಸೀಕ್ವೆನ್ಸ್‌ ಇಲ್ಲಿ ಕಾಣಬಹುದು. ಪಾರ್ಟ್ 1ರಲ್ಲಿ ಬಂದ ಹಾಡುಗಳೇ ಇಲ್ಲೂ ಆಗಾಗ ಎದುರಾಗುತ್ತವೆ. ಅದೇ ಈಗ ಸಿನಿಮಾವನ್ನು ಹಳೆಯದ್ದನ್ನು ನೆನಪಿಸುವಂತೆ ಮಾಡುತ್ತವೆ. ಅದು ಬಿಟ್ಟರೆ ನಿರ್ದೇಶನದಲ್ಲಿ ಅಂತಹದ್ದೇನು ಹೊಸತು ಕಾಣುವುದಿಲ್ಲ.

ಅಂತಿಮವಾಗಿ 'ಗದರ್ 2' ಹೇಗಿದೆ?

'ಗದರ್ 2' ಸಿನಿಮಾವನ್ನು ಸುಮ್ನನೆ ಎಳೆದಿದ್ದಾರೆ ಎಂದೆನಿಸುತ್ತೆ. ಇನ್ನೂ ಸ್ವಲ್ಪ ಕತ್ತರಿ ಹಾಕಬಹುದಿತ್ತು. ಕೆಲವು ಸನ್ನಿವೇಶಗಳನ್ನು ಅನಾವಶ್ಯಕವಾಗಿ ತುರುಕಿದ್ದಾರೆ ಅಂತಲೂ ಭಾಸವಾಗುತ್ತೆ. ಇದು ಸಿನಿಮಾದ ವೇಗಕ್ಕೆ ದೊಡ್ಡ ಪೆಟ್ಟುಕೊಟ್ಟಿದೆ. ಸನ್ನಿ ಡಿಯೋಲ್ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಅದು ಬಿಟ್ಟರೆ, ಸಿಂಗಲ್ ಸ್ಕ್ರೀನ್ ಆಡಿಯನ್ಸ್ ಈ ಸಿನಿಮಾ ಮೆಚ್ಚಿಕೊಳ್ಳಬಹುದು. ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ 'ಗದರ್ 2' ಇಷ್ಟ ಆಗೋದು ಅನುಮಾನ.

More from Filmibeat

English summary
Check Out the Sunny Deol, Ameesha Patel, Starrer Gadar 2 Movie Review in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X