Ghaati First Review: ಶೀಲಾವತಿ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಬಲು 'ಘಾಟಿ'; ವಿಮರ್ಶೆ ಮಾಡಿದ್ಯಾರು?

ಸೆಪ್ಟೆಂಬರ್ ತಿಂಗಳ ಆರಂಭದಲ್ಲಿಯೇ ಟಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾ ರಿಲೀಸ್ ಆಗುತ್ತಿದೆ. ಬಹಳ ದಿನಗಳ ಬಳಿಕ ಅನುಷ್ಕಾ ಶೆಟ್ಟಿ ನಟಿಸಿರುವ ಸಿನಿಮಾ 'ಘಾಟಿ' ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಮತ್ತೆ 'ಅರುಂಧತಿ', 'ಬಾಹುಬಲಿ' ಪಾತ್ರಗಳಿಗಿಂತಲೂ ಅನುಷ್ಕಾ ಶೆಟ್ಟಿ ಇನ್ನೂ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದು ಅನುಷ್ಕಾ ಶೆಟ್ಟಿಯ ಕಮ್‌ ಬ್ಯಾಕ್ ಸಿನಿಮಾ ಎಂದು ಹೇಳಲಾಗುತ್ತಿದೆ.

'ಘಾಟಿ' ಹೆಸರಿಗೆ ತಕ್ಕಂತೆ ಅನುಷ್ಕಾ ಶೆಟ್ಟಿ ಇಲ್ಲಿ ಘಾಟಿಯಾಗಿಯೇ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ನೋಡಿನೇ ಅವರ ಪ್ಯಾನ್ಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಾಸ್, ರಗಡ್ ಲುಕ್‌ನಲ್ಲಿ ಕರಾವಳಿ ಸ್ವೀಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟೋರಿ, ಡೈರೆಕ್ಟರ್ ಕೈ ಹಿಡಿದರೆ, ಈ ಸಿನಿಮಾ 'ಅರುಂಧತಿ' ಸಿನಿಮಾವನ್ನು ಮೀರಿಸಬಹುದು.

Ghaati First Review  Anushka Shetty Shines in Powerful Comeback Role as Sheelavathi in this movie

ನಿರ್ದೇಶಕ ಕ್ರಿಶ್ ಜಾಗರ್ಲಮೂಡಿ 'ಘಾಟಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ಘಾಟಿ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಜೊತೆ ತಮಿಳಿನ ಲೆಜೆಂಡ್ ಶಿವಾಜಿ ಗಣೇಶನ್ ಅವರ ಮೊಮ್ಮಗ ವಿಕ್ರಮ್ ಪ್ರಭು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಂತಕಿಂಡ ಶ್ರೀನಿವಾಸ್ ಅವರು ಬರೆದಿರುವ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ರಾಜೀವ್ ರೆಡ್ಡಿ ಮತ್ತು ಸಾಯಿಬಾಬು ಜಾಗರ್ಲಮೂಡಿ ಇಬ್ಬರೂ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

'ಘಾಟಿ' ಸಿನಿಮಾ ಕ್ರೈಂ ಡ್ರಾಮಾ ಆಗಿರುವುದರಿಂದ ಮಾಸ್ ಆಡಿಯನ್ಸ್‌ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆಂದು ಭವಿಷ್ಯ ನುಡಿದಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಹಾಗೂ ವಿಕ್ರಮ್ ಪ್ರಭು ಜೊತೆ ಚೈತನ್ಯ ರಾವ್ ಮದಾದಿ, ಜಗಪತಿ ಬಾಬು, ಜಿಶು ಸೇನ್‌ಗುಪ್ತಾ, ಜಾನ್ ವಿಜಯ್, ರವೀಂದ್ರ ವಿಜಯ್, ವಿಟಿವಿ ಗಣೇಶ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮನೋಜ್ ರೆಡ್ಡಿ ಕಾಟಸಾನಿ ಕ್ಯಾಮರಾ, ತೂರುಪು ಚಾಣಕ್ಯ ರೆಡ್ಡಿ ಹಾಗೂ ನಾಗವೆಳ್ಳಿ ವಿದ್ಯಾಸಾಗರ್ ಸಂಗೀತ ನೀಡಿದ್ದಾರೆ.

'ಘಾಟಿ' ಸಿನಿಮಾ ಇದೇ ಸೆಪ್ಟೆಂಬರ್ 5ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಲಾಂಗ್ ಗ್ಯಾಪ್ ಕೊಟ್ಟ ಅನುಷ್ಕಾ ಶೆಟ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು, ತೆಲುಗು ಮಂದಿಯಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟಾಕಿವೆ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಸಿನಿಮಾಗೆ ಸೆನ್ಸಾರ್ ಆಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅಂದ್ಹಾಗೆ, ಸಿನಿಮಾದ ಅವಧಿ 2 ಗಂಟೆ 37 ನಿಮಿಷಗಳಿವೆ.

Ghaati First Review  Anushka Shetty Shines in Powerful Comeback Role as Sheelavathi in this movie

ಇತ್ತೀಚೆಗೆ ಸೆನ್ಸಾರ್ ಅಧಿಕಾರಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ಅಧಿಕಾರಿಗಳು ಕ್ರಿಶ್ ಜಾಗರ್ಲಮೂಡಿ ಕಥೆ ಹಾಗೂ ನಿರೂಪಣೆಯನ್ನು ಮೆಚ್ಚಿಕೊಂಡಿದ್ದಾರೆಂದು ಚಿತ್ರತಂಡ ಹೇಳಿಕೊಂಡಿದೆ. ಅನುಷ್ಕಾ ಶೆಟ್ಟಿಯ 'ಘಾಟಿ' ಕ್ರೈಂ ಡ್ರಾಮಾ ಜೊತೆ ಭಾವನಾತ್ಮಕ ಸಿನಿಮಾ ಕೂಡ ಹೌದು. ಈ ಸಿನಿಮಾದ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಆಕ್ಷನ್ ಸೀಕ್ವೆನ್ಸ್ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತವೆ. ಹಾಗೇ ಗುಹೆಯಲ್ಲಿನ ಫೈಟ್ ಸೀಕ್ವೆನ್ಸ್‌ ಫಸ್ಟ್ ಹಾಫ್‌ನಲ್ಲಿ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತವೆ. ಅಷ್ಟೇ ಅಲ್ಲದೆ ಇಂಟರ್‌ವಲ್ ಸೀನ್ ಕೂಡ ಪ್ರೇಕ್ಷಕರನ್ನು ಕುತೂಹಲ ಘಟ್ಟದಲ್ಲಿ ತೇಲಿಸುತ್ತವೆ.

ಇನ್ನೂ ಸೆಕೆಂಡ್ ಹಾಫ್‌ನಲ್ಲಿ ಶೀಲಾವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯ ಹೈಲೈಟ್. ಭಾವನಾತ್ಮಕ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಅನುಷ್ಕಾ ಶೆಟ್ಟಿ ಹಾಗೂ ಚೈತನ್ಯಾ ರಾವ್ ಅಭಿನಯ ಸಿನಿಮದ ಪ್ರಬಲ ಅಂಶಗಳಾಗಿವೆ. ಬುರ್ರಾ ಸಾಯಿ ಮಾಧವ್ ಮತ್ತು ಚಿಂತಕಿಂಡಿ ಶ್ರೀನಿವಾಸ್ ರಾವ್ ಅವರ ಸಂಭಾಷಣೆಗಳು ಮಾಸ್ ಆಗಿವೆ ಎಂದು ಹೇಳಲಾಗಿದೆ.

ಮನೋಜ್ ರೆಡ್ಡಿ ಕಾಟಸಾನಿ ವಿಜ್ಯೂವಲೈಸೇಷನ್ ಹಾಗೂ ಸಾಗರ್ ಹಿನ್ನೆಲೆ ಸಂಗೀತ ಹೊಸ ಅನುಭವ ನೀಡಲಿದೆ. 'ಘಾಟಿ' ಅನುಷ್ಕಾ ಶೆಟ್ಟಿ ವೃತ್ತಿ ಬದುಕಿನ ವಿಭಿನ್ನ ಸಿನಿಮಾ ಎಂದು ಚಿತ್ರತಂಡ ಹೇಳಿಕೊಡಿದೆ. ಇನ್ನು ಕಥೆ, ಚಿತ್ರಕಥೆ ಹಾಗೂ ಆಕ್ಷನ್ ಸೀನ್‌ಗಳು ಸೆನ್ಸಾರ್ ಮಂಡಳಿಗೆ ಕ್ಲೀನ್ ಸರ್ಟಿಫಿಕೇಟ್ ನೀಡಿದೆ. ಹೀಗಾಗಿ ಮತ್ತೆ ಅನುಷ್ಕಾ ಶೆಟ್ಟಿಯ ಕಮ್‌ಬ್ಯಾಕ್ ಸಿನಿಮಾ ಆಗಬಹುದೆಂಬ ನಿರೀಕ್ಷೆಯಿದೆ.

More from Filmibeat

English summary
Ghaati first review is out, and Anushka Shetty’s comeback as Sheelavathi has impressed audiences. Her powerful performance, strong screen presence, and emotional depth make Ghaati a must-watch for fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X