Ghaati Critics Review: ಅನುಷ್ಕಾ ಶೆಟ್ಟಿ ಸಿನಿಮಾ ಬಗ್ಗೆ ವಿಮರ್ಶಕರ ವಿಮರ್ಶೆ ಹೇಗಿದೆ?

ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಬಹಳ ದಿನಗಳ ಬಳಿಕ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬಾಹುಬಲಿ' ಬಳಿಕ ಸೈಲೆಂಟ್ ಆಗಿದ್ದ ಅನುಷ್ಕಾ ಈಗ ವೈಲೆಂಟ್ ಆಗಿದ್ದಾರೆ. ಮತ್ತೊಮ್ಮೆ ಇಂತಹದ್ದೊಂದು ಅವತಾರದಲ್ಲಿ ಅನುಷ್ಕಾ ಶೆಟ್ಟಿಯನ್ನು ನೋಡಬೇಕು ಅಂತಿದ್ದ ಅಭಿಮಾನಿಗಳ ಕನಸು ಈಗ ನನಸಾಗಿದೆ. ಅನುಷ್ಕಾ 'ಘಾಟಿ' ಅವತಾರವೆತ್ತಿ ಇನ್ನೇನು ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ.

'ಘಾಟಿ' ಸಿನಿಮಾಗೆ ತೆಲುಗಿನ ಜನಪ್ರಿಯ ನಿರ್ದೇಶಕ ಕೃಶ್ ಜಾಗರ್ಲಮೂಡಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ನಾಳೆ ಅಂದರೆ, ಸೆಪ್ಟೆಂಬರ್ 5, 2025 ರಂದು ವಿಶ್ವಾದ್ಯಂತ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಹಾಗೂ ತಮಿಳು ಲೆಜೆಂಡ್ ಶಿವಾಜಿ ಗಣೇಶನ್ ಅವರ ಮೊಮ್ಮಗ ವಿಕ್ರಮ್ ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಚೈತನ್ಯ ರಾವ್ ಮದಡಿ, ಜಗಪತಿ ಬಾಬು, ಜಿಶು ಸೇನ್‌ಗುಪ್ತ, ಜಾನ್ ವಿಜಯ್, ರವೀಂದ್ರ ವಿಜಯ್ ಮತ್ತು ವಿಟಿವಿ ಗಣೇಶ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Ghaati Movie Critics Review  Critics Praise Anushka Shetty   s Powerful Role as Sheelavathi

ಅನುಷ್ಕಾ ಶೆಟ್ಟಿ ನಟಿಸಿರುವ 'ಘಾಟಿ' ಸಿನಿಮಾ ಕಥೆಯನ್ನು ಚಿಂತಕಿಂದ ಶ್ರೀನಿವಾಸ್ ಬರೆದಿದ್ದು, ಈ ಸ್ಟೋರಿಯನ್ನು ಆಧರಿಸಿ ರಾಜೀವ್ ರೆಡ್ಡಿ ಮತ್ತು ಸಾಯಿಬಾಬು ಜಾಗರ್ಲಮೂಡಿ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ ಇದೊಂದು ಆಕ್ಷನ್-ಕ್ರೈಮ್ ಡ್ರಾಮಾ ಆಗಿದ್ದು, ಅನುಷ್ಕಾ ಶೆಟ್ಟಿಯನ್ನು ಮತ್ತೆ ಪವರ್‌ಫುಲ್ ಪಾತ್ರದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಈಗಾಗಲೇ ಸಿನಿಮಾ ನೋಡಿರುವ ವಿಮರ್ಶಕರು ಈ ಸಿನಿಮಾ ವಿಮರ್ಶೆ ಮಾಡಿದ್ದಾರೆ. ಅವರ ಅಭಿಪ್ರಾಯ ಹೇಗಿದೆ ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.

'ಘಾಟಿ' ಸಿನಿಮಾ ಪ್ರಮುಖ ಆಕರ್ಷಣೆಯೇ ಅನುಷ್ಕಾ ಶೆಟ್ಟಿ. 'ಅರುಂಧತಿ', 'ಬಾಹುಬಲಿ' ಅಂತಹ ಪವರ್‌ಫುಲ್ ಪಾತ್ರಗಳಲ್ಲಿ ಮತ್ತೆ ನೋಡಬೇಕು ಅನ್ನೋ ಫ್ಯಾನ್ಸ್ ಆಸೆ ಈಡೇರಿದೆ. ಅದಕ್ಕೆ ನಿರ್ದೇಶಕ ಕಿಶ್, ಛಾಯಾಗ್ರಾಹಕ ಮನೋಜ್ ರೆಡ್ಡಿ ಕಾಟಸಾನಿ, ಸಂಗೀತ ನಿರ್ದೇಶಕರಾದ ತೂರ್ಪು ಚಾಣಕ್ಯ ರೆಡ್ಡಿ ಮತ್ತು ನಾಗವೇಳಿ ವಿದ್ಯಾಸಾಗರ್ ಸಾಥ್ ಕೊಟ್ಟಿದ್ದಾರೆ. 'ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ಸ್' ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನು ಈ ಸಿನಿಮಾದ ಕುರಿತು ಈಗಾಗಲೇ ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಘಾಟಿ' ಒಂದು ಪಕ್ಕಾ ಕಮರ್ಷಿಯಲ್ ಆಕ್ಷನ್ ಡ್ರಾಮಾ. ಈ ಸಿನಿಮಾವನ್ನು ಕ್ರಿಶ್ ಅವರ ಟ್ರೇಡ್‌ಮಾರ್ಕ್ ಎನ್ನಬಹುದು. ಜೊತೆಗೆ ಅನುಷ್ಕಾ ಶೆಟ್ಟಿ ಅಭಿನಯ ಅತ್ಯಂತ ಭಾವನಾತ್ಮಕವಾಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಾರೆ. ಅಲ್ಲದೆ ಸಿನಿ ಪ್ರೇಮಿಗಳಿಗೆ ಇದು ಉತ್ತಮ ಥಿಯೇಟರಿಕಲ್ ಅನುಭವ ನೀಡಲಿದೆ ಎಂದು ವಿಮರ್ಶಕರೊಬ್ಬರು ಹೇಳಿದ್ದಾಗಿ ಫಿಲ್ಮಿಬೀಟ್ ತೆಲುಗು ವರದಿ ಮಾಡಿದೆ.

ಇನ್ನೊಬ್ಬ ವಿಮರ್ಶಕರು 'ಘಾಟಿ' ಸಿನಿಮಾದ ಟೀಸರ್ ಹಾಗೂ ಟ್ರೈಲರ್‌ನಲ್ಲಿರುವಷ್ಟು ತೀವ್ರತೆ ಇಡೀ ಸಿನಿಮಾದ ಉದುದ್ದಕ್ಕೂ ಇರುತ್ತೆ ಎಂದು ಮತ್ತೊಬ್ಬರ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. 'ಘಾಟಿ' ಸಿನಿಮಾ ಒಟ್ಟು 2 ಗಂಟೆ 35 ನಿಮಿಷಗಳಷ್ಟು ಉದ್ದವಿದೆ. ಸಿನಿಮಾದ ಫಸ್ಟ್ ಹಾಫ್ ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದ್ದರೆ. ಸೆಕೆಂಡ್ ಹಾಫ್ ಮೈ ರೋಮಾಂಚನ ಎನಿಸುವ ಆಕ್ಷನ್ ಡ್ರಾಮಾಗಳಿಂದ ಕೂಡಿದೆ. ಇದು ಅನುಷ್ಕಾ ಶೆಟ್ಟಿ ಮತ್ತು ನಿರ್ದೇಶಕ ಕೃಶ್ ಇಬ್ಬರಿಗೂ ಒಂದೊಳ್ಳೆ ಕಮ್‌ ಬ್ಯಾಕ್ ಸಿನಿಮಾ ಆಗಲಿದೆ ಎಂದು ಮತ್ತೊಬ್ಬ ವಿಮರ್ಶಕರು ತಿಳಿಸಿದ್ದಾರೆ.

Ghaati Movie Critics Review  Critics Praise Anushka Shetty   s Powerful Role as Sheelavathi

ಶೀಲಾವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಈ ಸಿನಿಮಾದಲ್ಲಿ ಅವರ ಉಗ್ರ ಸ್ವರೂಪ ತೆರೆಮೇಲೆ ನೋಡುವುದಕ್ಕೆ ಮಜಾ ಕೊಡುತ್ತೆ. ಇದೇ ಮೊದಲ ಬಾರಿಗೆ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಕ್ರಮ್ ಪ್ರಭು ಕೂಡ ಜನರಿಗೆ ಇಷ್ಟ ಆಗುತ್ತಾರೆ. ಇನ್ನು ಫಸ್ಟ್ ಹಾಫ್ ರೋಲರ್ ಕೋಸ್ಟರ್ ರೈಡ್‌ನಂತಿದ್ದರೆ, ಸೆಕೆಂಡ್ ಹಾಫ್‌ನಲ್ಲಿ ಆಕ್ಷನ್ ಸೀನ್‌ಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಈ ಸಿನಿಮಾ ಸೂಪರ್ ಹಿಟ್ ಆಗಲು ಬೇಕಾದ ಎಲ್ಲಾ ಅಂಶಗಳು ಇವೆ ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

'ಘಾಟಿ' ಸಿನಿಮಾ ಶೀಲಾವತಿ ಎಂಬ ಸಂತ್ರಸ್ತ ಮಹಿಳೆ ಕ್ರಿಮಿನಲ್ ಆಗಿ ಬದಲಾಗುವ ಕತೆ. ಸಿನಿಮಾ ಮುಗಿಯುವಷ್ಟರಲ್ಲಿ ದಂತಕಥೆಯಾಗಿ ಬದಲಾಗುತ್ತಾರೆ ಎಂಬುವುದೇ ಕಥಾವಸ್ತು. ವಿಮರ್ಶಕರ ನೀಡಿರುವ ವರದಿ ಪ್ರಕಾರ, ಇದೊಂದು ಸರಾಸರಿಗಿಂತ ಉತ್ತಮವಾದ ಸಿನಿಮಾ ಎಂದು ಹೇಳಿದ್ದಾರೆ. ಕೆಲವೊಮ್ಮೆ ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್‌ನಲ್ಲಿ ಕೆಲವು ಕಡೆಗಳಲ್ಲಿ ನಿಧಾಗತಿಯಲ್ಲಿ ಸಾಗುತ್ತೆ. ಹಾಗೇ ಅನುಷ್ಕಾ ಶೆಟ್ಟಿ, ಜಗಪತಿ ಬಾಬು, ಚೈತನ್ಯ ರಾವ್ ಮತ್ತು ವಿಕ್ರಮ್ ಪ್ರಭು ನಟನೆ ಇಷ್ಟ ಆಗುತ್ತೆ. ಹಾಗೇ ವಿಎಫ್‌ಎಕ್ಸ್ ಕೆಲಸ ಚೆನ್ನಾಗಿದೆ. ಇನ್ನು ಸಿನಿಮಾದ ಕಥೆ ಹೊಸದಾಗಿದೆ. ಹಾಗೇ ಬಜೆಟ್ ಕೊರತೆಯಿಂದಾಗಿ ಕೆಲವು ಟೆಕ್ನಿಕಲ್ ಸಮಸ್ಯೆಗಳು ಕಾಣಿಸುತ್ತವೆ. 'ಬಾಹುಬಲಿ' ಬಳಿಕ ಅನುಷ್ಕಾ ನಟಿಸಿದ ಸಿನಿಮಾಗಳಿಗೆ ಹೋಲಿಸಿದರೆ ಇದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

More from Filmibeat

English summary
Critics have given positive reviews for Ghaati, highlighting Anushka Shetty’s stunning performance as Sheelavathi.
Read more about: anushka shetty telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X