Ghost Twitter Review: "ಎಲ್ಲಾ ಮಾಸ್‌ಗಳಿಗೂ ಶಿವಣ್ಣನೇ ಬಿಗ್ ಡ್ಯಾಡಿ.. ಶ್ರೀನಿ ಹುಚ್ಚು ಹಿಡಿಸವ್ನೆ": ಫ್ಯಾನ್ಸ್ ರಿವ್ಯೂ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ಘೋಸ್ಟ್' ರಿಲೀಸ್ ಆಗಿದೆ. ಅಕ್ಟೋಬರ್ 19ರ ಮಧ್ಯರಾತ್ರಿನೇ ಫ್ಯಾನ್ಸ್ ಶೋ ಪ್ರದರ್ಶನ ಕಂಡಿದೆ. ಶಿವರಾಜ್‌ಕುಮಾರ್, ಅನುಪಮ್ ಖೇರ್, ಜಯರಾಮ್, ಅರ್ಚನಾ ಜೋಯಿಸ್ ಅಂತಹ ಕಲಾವಿದರ ಒಟ್ಟಿಗೆ ಸೇರಿ ನಟಿಸಿರುವ ಸಿನಿಮಾವಿದು.

ಶಿವಣ್ಣ ಒರಿಜಿನಲ್ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಶಿವರಾಜ್‌ಕುಮಾರ್ ಹಿಂದೆಂದಿಗಿಂತಲೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೇಜಿ ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು.

ghost Twitter review in Kannada

ಶ್ರೀನಿ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ಹೇಗೆ ಕಾಣಿಸಿಕೊಂಡಿದ್ದಾರೆ? ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನ್‌ ಹೇಗಿದೆ? ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಹೇಗಿದೆ? ಉಳಿದ ಪಾತ್ರಗಳು ಹೇಗಿವೆ? ಫ್ಯಾನ್ಸ್ ಶೋ ನೋಡಿದ ಶಿವಣ್ಣ ಅಭಿಮಾನಿಗಳು ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಘೋಸ್ಟ್' ರಿಪೋರ್ಟ್

"ಘೋಸ್ಟ್' ಸಿನಿಮಾದ ಫಸ್ಟ್ ರಿಪೋರ್ಟ್: ನಾನ್ ಲೀನಿಯರ್ ಸ್ಕ್ರೀನ್ ಪ್ಲೇ.. ಆಕ್ಷನ್ಸ್.. ವಿಭಿನ್ನ ಅವತಾರದಲ್ಲಿ ಶಿವಣ್ಣ.. ಮೈನವಿರೇಳಿಸುವ ದೃಶ್ಯಗಳನ್ನು ಫಸ್ಟ್ ಹಾಫ್‌ನಲ್ಲಿ ನಿರೀಕ್ಷೆ ಮಾಡಬಹುದು" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಇವರಿಗೆ ಶಿವಣ್ಣ ಲುಕ್, ಆಕ್ಷನ್ ಸೀನ್ಸ್, ಸ್ಕ್ರೀನ್ ಪ್ಲೇ ಇಷ್ಟ ಆಗಿದೆ. ಅದರಲ್ಲೂ ಸ್ಕ್ರೀನ್ ಪ್ಲೇಯನ್ನೇ ಹೆಚ್ಚು ಇಷ್ಟ ಪಟ್ಟಿದ್ದಾರೆ.

ಶಿವಣ್ಣನ ರಗಡ್ ಲುಕ್

"ಶಿವಣ್ಣನ ರಗಡ್ ಲುಕ್ ಚಿಂದಿಯಾಗಿದೆ. ಹಿಂದೆಂದಿಗಿಂತಲೂ ಕ್ರೇಜಿ ಲುಕ್ ಕೊಟ್ಟಿದ್ದಾರೆ. ಎಲ್ಲಾ ಮಾಸ್‌ಗಳಿಗೂ ಶಿವಣ್ಣನೇ ಬಿಗ್ ಡ್ಯಾಡಿ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಶಿವಣ್ಣನ ಅಭಿಮಾನಿಗಳಿಗೆ ರಗಡ್ ಲುಕ್ ಇಷ್ಟ ಆಗಿದೆ. ಮಾಸ್ ಅವತಾರದಲ್ಲಿ ಶಿವರಾಜ್‌ಕುಮಾರ್ ನೋಡಬೇಕು ಅನ್ನೋ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ ಎಂದೇ ಹೇಳಬಹುದು.


ಶ್ರೀನಿ ಆಡಿಯನ್ಸ್‌ನ ಹುಚ್ಚೆಬ್ಬಿಸವ್ನೆ

"ಈಗಷ್ಟೇ ಫ್ಯಾನ್ಸ್ ಶೋ ನೋಡಿಕೊಂಡು ಬಂದೆ. ಶ್ರೀನಿ ಕಂಟೆಂಟ್ ಜೊತೆ ಆಡಿಯನ್ಸ್‌ನ ಹುಚ್ಚು ಎಬ್ಬಿಸವ್ನೆ. ಅರ್ಜುನ್ ಜನ್ಯ ವೃತ್ತಿ ಜೀವನದಲ್ಲೇ ಬೆಸ್ಟ್ ಸಿನಿಮಾ. ಶಿವಣ್ಣ ಸ್ವ್ಯಾಗ್‌ಗೆ ಪದಗಳೇ ಇಲ್ಲ. ಮ್ಯಾನರಿಸಂ, ವಾಯ್ಸ್ ಎಲ್ಲವೂ ಅದ್ಭುತವಾಗಿದೆ." ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ನಿರ್ದೇಶಕ ಶ್ರೀನಿ ಆಡಿಯನ್ಸ್ ಪಲ್ಸ್ ಗೊತ್ತಾಗಿದೆ. ಹೀಗಾಗಿ ಶಿವಣ್ಣನ ಅಭಿಮಾನಿಗಳು ಖುಷಿ ಪಡುವಂತಹ ಸಿನಿಮಾ ಮಾಡಿದ್ದಾರೆ ಅನ್ನೋದು ಅಭಿಪ್ರಾಯ.


ಶಿವಣ್ಣ ಫ್ಯಾನ್ಸ್‌ಗೆ ಹಬ್ಬ

"ಇದು ಪಕ್ಕಾ ಶ್ರೀನಿ ವಿಷನ್. ಶಿವಣ್ಣ ಅಭಿಮಾನಿಗಳಿಗೆ ಇದು ಹಬ್ಬ. ಅರ್ಜುನ್ ಜನ್ಯ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಬೆಂಕಿ. ನಾವು ಈ ರೀತಿ ಶಿವಣ್ಣನನ್ನು ನೋಡುವುದಕ್ಕೆ ಇಷ್ಟ ಪಡುತ್ತೇವೆ." ಎಂದು ಮತ್ತೊಬ್ಬರು ಘೋಸ್ಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹಿಂದೆಂದೂ ಶಿವಣ್ಣನನ್ನು ಹೀಗೆ ತೋರಿಸಿಲ್ಲ

"ಘೋಸ್ಟ್ ಫಸ್ಟ್ ಹಾಫ್ ಶಿವಣ್ಣನ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಾನ್ ಲೀನಿಯರ್ ಸ್ಕ್ರೀನ್ ಪ್ಲೇ ಎಂಗೇಜಿಂಗ್ ಆಗಿದೆ. ಹಿಂದೆಂದೂ ಇಂತಹ ಎಲೆವೇಷನ್ ಸೀನ್‌ಗಳಲ್ಲಿ ಶಿವಣ್ಣನನ್ನು ತೋರಿಸಿರಲಿಲ್ಲ. ಶಿವಣ್ಣ ಆಕ್ಷನ್ ಸೀನ್ ಅದ್ಭುತವಾಗಿದೆ. ಶಿವಣ್ಣ ಅಭಿಮಾನಿಗಳು ಅಲ್ಲದವರಿಗೆ ಕಥೆ ಸ್ಲೋ ಆಗಿದೆ. ಶ್ರೀನಿ ಸ್ಟೋರಿ, ಸ್ಕ್ರೀನ್ ಪ್ಲೇಗಿಂತ ಎಲೆವೇಷನ್ ಸೀನ್‌ಗಳಿಗೆ ಹೆಚ್ಚು ಗಮನ ಹರಿಸಿದ್ದಾರೆ. ಶಿವಣ್ಣನಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಇದೆ. ಮಲಯಾಳಂ ನಟ ಜಯರಾಮ್‌ಗೆ ಹೆಚ್ಚು ಸ್ಪೇಸ್ ಇದೆ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Ghost Movie Twitter Review in Kannada: What's the Buzz on Twitter?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X