Krishnam Pranaya Sakhi; ಗಣೇಶ್ ಸಿನಿಮಾ ಫಸ್ಟ್ ಹಾಫ್ ಹೇಗಿದೆ? ಸೆಕೆಂಡ್ ಹಾಫ್ ಕಥೆಯೇನು?
ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಇಂದು (ಆಗಸ್ಟ್ 15) ರಿಲೀಸ್ ಆಗಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ಇರುವ ಕಾರಣ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಗಬಹುದೆಂಬ ನಿರೀಕ್ಷೆಯಿದೆ. ಬಿಗ್ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಹಾಡುಗಳಿಂದಲೇ ಸಿನಿಮಾ ಪ್ರಚಾರ ಮಾಡಲಾಗಿದೆ.
ಗೋಲ್ಡನ್ ಗಣೇಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾಂಬಿನೇಷನ್ ಮತ್ತೊಮ್ಮೆ ವರ್ಕ್‌ಔಟ್ ಆಗಿದೆ. ಸಿನಿಮಾದ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ದಂಡುಪಾಳ್ಯದಂತಹ ಸಿನಿಮಾವನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ರಾಜು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

'ಕೃಷ್ಣಂ ಪ್ರಣಯ ಸಖಿ' ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ಪಕ್ಕಾ ಗೋಲ್ಡನ್ ಸ್ಟಾರ್ ಗಣೇಶ್‌ಗಾಗಿಯೇ ಮಾಡಿದ ಸಿನಿಮಾ. ಟ್ರೈಲರ್, ಟೀಸರ್ ಬಿಡದೆ ಸಿನಿಮಾದ ತಿರುಳನ್ನು ಹಾಗೇ ಉಳಿಸಿಕೊಂಡಿರುವ 'ಕೃಷ್ಣಂ ಪ್ರಣಯ ಸಖಿ' ತಂಡಕ್ಕೆ ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ಕೊಡುತ್ತಿದ್ದಾರೆ? ಪ್ರೀಮಿಯರ್ ಶೋ ನೋಡಿದವರಿಗೆ ಸಿನಿಮಾ ಇಷ್ಟ ಆಯ್ತಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅದ್ಭುತ ಪರ್ಫಾಮೆನ್ಸ್
"ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿದ ಬಳಿಕ ಮತ್ತಷ್ಟು ಇಷ್ಟ ಪಡುವುದಕ್ಕೆ ಶುರು ಮಾಡುತ್ತಾರೆ. ಇದೊಂದು ಅದ್ಭುತ ಸಿನಿಮಾ" ಎಂದು ನೆಟ್ಟಿಗರೊಬ್ಬರು ಗಣೇಶ್ ಸಿನಿಮಾ ಕೃಷ್ಣಂ ಪ್ರಣಯ ಸಖಿ ನೋಡಿ ತಮ್ಮ ಎಕ್ಸ್ ಖಾತೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಪಕ್ಕಾ ಕೌಟುಂಬಿಕ ಸಿನಿಮಾ
"ಈ ಸಿನಿಮಾ ನಿಮ್ಮನ್ನು ನಗುವಂತೆ ಮಾಡುತ್ತೆ. ಈ ಸಿನಿಮಾ ನಿಮ್ಮನ್ನು ಅಳಿಸುತ್ತೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಪಕ್ಕಾ ಕೌಟುಂಬಿಕ ಸಿನಿಮಾ. ಮಿಸ್ ಮಾಡಿಕೊಳ್ಳಬೇಡಿ. ತಪ್ಪದೇ ನೋಡಿ" ಎಂದು ಮತ್ತೊಮ್ಮ ನೆಟ್ಟಗರ ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಮಾತಾಡಿದ್ದಾರೆ.
ಸಾಧು ಕೋಕಿಲಾ ಬೆಂಕಿ
" ಇದು ಇತ್ತೀಚೆಗೆ ಬಂದ ಡಿಸೆಂಟ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾದ ಕಥೆ ಫ್ರೆಶ್ ಆಗಿದೆ ಅಂತಲ್ಲ. ಆದರೆ, ಕಥೆಯನ್ನು ಹೇಳಲು ಬಳಸಿಕೊಂಡ ಸ್ಕ್ರೀನ್ ಪ್ಲೇಯ ತಂತ್ರ ಮೆಚ್ಚುವಂತಹದ್ದೇ. ಮೊದಲಾರ್ಧ ಉತ್ತಮವಾಗಿ ಎಂಡ್ ಆಗುತ್ತೆ. ಸಾಕಷ್ಟು ಗೊಂದಲಗಳು ಹಾಗೂ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಲ್ಲ. ದ್ವಿತಿಯಾರ್ಧ ಶುರುವಾಗುತ್ತಿದ್ದಂತೆ ಎಲ್ಲದಕ್ಕೂ ಉತ್ತರ ಸಿಗುತ್ತಾ ಹೋಗುತ್ತೆ. ಕಾಮಿಡಿ ಸೀನ್‌ಗಳು ಸಂಪೂರ್ಣವಾಗಿ ವರ್ಕ್ ಆಗಿದೆ. ಗಣೇಶ್ ಇಷ್ಟ ಆಗ್ತಾರೆ. ನಾಯಕಿ ಅಭಿನಯ ಸೂಪರ್. ಅರ್ಜುನ್ ಜನ್ಯ ಸಖತ್ ಆಗಿದೆ. ಸಾಧು ಕೋಕಿಲಾ ಬೆಂಕಿ" ಅಂತ ಇನ್ನಿಬ್ಬರು ಕಾಮೆಂಟ್ ಮಾಡಿದ್ದಾರೆ.
"ಸೆಕೆಂಡ್ ಹಾಫ್‌ನಲ್ಲಿ ಸ್ವಲ್ಪ ರಿಲೀಫ್ ಸಿಗುತ್ತೆ"
"ಕೃಷ್ಣಂ ಪ್ರಣಯ ಸಖಿ ನಿಮ್ಮ ರಿಸ್ಕ್‌ನಲ್ಲಿ ನೋಡಿ. ಮೊದಲಾರ್ಧ ನೆಗ್ಲೆಟ್ ಮಾಡುವ ಹಾಗಿದೆ. ಇನ್ನು ಸೆಕೆಂಡ್ ಹಾಫ್ ಸ್ವಲ್ಪ ರಿಲೀಫ್ ಕೊಡುತ್ತೆ. ಕಾಮಿಡಿ ಮಾತ್ರ ಹೈಲೈಟ್ ಆಗಿದೆ. ಇದೊಂದು ಗಣೇಶ್ ಸರ್ ಅವರ ಕಮ್ ಬ್ಯಾಕ್ ಸಿನಿಮಾ ಆಗುತ್ತೆ ಅಂದುಕೊಂಡಿದ್ದೇವು. ಬಹುಶ: ಮುಂದಿನ ಸಿನಿಮಾವರೆಗೂ ಕಾಯಬೇಕು."


Click it and Unblock the Notifications











