Hostel Hudugaru Twitter Review: ಹಾಸ್ಟೆಲ್ ಹುಡುಗರನ್ನು ನೋಡಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು ಏನಂದ್ರು?
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೊಸಬರ ಸಿನಿಮಾ ಆಗಿದ್ದರೂ ಸ್ಟಾರ್ ಸಿನಿಮಾಗಳಿಗೆ ಸಿಕ್ಕಷ್ಟೇ ಹೈಪ್ ಸಿಕ್ಕಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕ್ರಿಯೆಟಿವ್ ಆಗಿ ಪ್ರಚಾರ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ಇನ್ನೊಂದು ವಿವಾದ ಸುಳಿಗೆ ಸಿಕ್ಕು, ಅದನ್ನು ಗೆದ್ದು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದೆ ಸಿನಿಮಾ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಪಕ್ಕಾ ಯೂತ್‌ಫುಲ್ ಸಿನಿಮಾ. ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಜೀವನವನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಹೀಗಾಗಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಕಿಸುವಷ್ಟು ನಗಿಸುತ್ತೇವೆ ಅನ್ನೋ ಭರವಸೆಯನ್ನು ಚಿತ್ರತಂಡ ನೀಡಿತ್ತು.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಇಂದು (ಜುಲೈ 21) ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಜನರು ಕೂಡ ಸಿನಿಮಾವನ್ನು ನೋಡಿದ್ದು, ಬಳಿಕ ಟ್ವಿಟರ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಈ ಸಿನಿಮಾ ಬಗ್ಗೆ ಚುಟುಕಾಗಿ ವಿಮರ್ಶೆ ಕೂಡ ಮಾಡಿದ್ದಾರೆ. ಹಾಗಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಿನಿಮಾ ಬಗ್ಗೆ ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ನಕ್ಕು ನಕ್ಕು ಹೊಟ್ಟೆ ನೋವ್ ಬಂತು"
"ಟ್ರಾವೆಲ್ ಮಾಡಿ ಬಂದು ನೋಡಿದಕ್ಕೂ ಸಾರ್ಥಕ ಆಯ್ತು ಗುರು .. ಥಿಯೇಟರ್‌ನಲ್ಲಿ ನಕ್ಕು ನಕ್ಕು ಹೊಟ್ಟೆ ನೋವ್ ಬಂದಿದೆ" ಎಂದು ಟ್ವಿಟರ್‌ನಲ್ಲಿ ಬರೆದು ಹರ್ಷ ವ್ಯಕ್ತಪಡಿಸಿದ್ದಾರೆ.
"ಸಿನಿಮಾ ಮೇಕಿಂಗ್ ಅದ್ಭುತ"
"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಇದು ನೋಡಲೇ ಬೇಕಾದ ಸಿನಿಮಾ. ಸಿನಿಮಾದ ಮೇಕಿಂಗ್ ವಿಭಿನ್ನವಾಗಿದೆ. ಬಿಜಿಎಂ, ಸಿನಿಮಾದ ವಿಜ್ಯೂವಲ್ ಅದ್ಭುತವಾಗಿದೆ. ದಯವಿಟ್ಟು ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ" ಎಂದು ಸಿನಿಮಾ ನೋಡಿದವರೊಬ್ಬರು ಟ್ವೀಟ್ ಮಾಡಿದ್ದಾರೆ.
"ಇಂತಹ ಕೆಟ್ಟ ಸಿನಿಮಾ ಬಂದೇ ಇಲ್ಲ"
"ಹಾಸ್ಟೆಲ್ ಹುಡುಗರು ನಟನೆ ಅತ್ಯದ್ಭುತ. ಟಾಪ್ ಲೆವೆಲ್ ಕಾಮಿಡಿ. ಥಿಯೇಟರ್‌ನಲ್ಲಿ ಮಿಸ್ ಮಾಡದೆ ಸಿನಿಮಾ ನೋಡಿ. ಇಂತಹ ಕೆಟ್ಟ ಸಿನಿಮಾ ಯಾವತ್ತೂ ಮಾಡಿಯೇ ಇಲ್ಲ. ನನ್ನ ರೇಟಿಂಗ್ 5ಕ್ಕೆ 4." ಎಂದು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲೇ ವಿಮರ್ಶೆ ಮಾಡಿದ್ದಾರೆ.
ಸಿನಿಮ್ಯಾಟೋಗ್ರಫಿನೇ ಸಿನಿಮಾ
"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಹಾಸ್ಯ ಪ್ರಧಾನ ಸಿನಿಮಾ. ಅಸಾಂಪ್ರದಾಯಿಕ ಕಥೆ, ಹುಚ್ಚುತನ ಹಾಗೂ ಅತ್ಯದ್ಭುತ ಸಿನಿಮ್ಯಾಟೋಗ್ರಫಿಗಾಗಿ ಆದರೂ ಈ ಸಿನಿಮಾ ನೋಡಲೇ ಬೇಕು. ನನ್ನ ರೇಟಿಂಗ್ 5ಕ್ಕೆ 3.8" ಎಂದು ಬರೆದುಕೊಂಡಿದ್ದಾರೆ.
"ಕಥೆ, ಬಿಜಿಎಂ, ಹಾಡು ಸೂಪರ್"
"ಕಥೆ, ಬಿಜಿಎಂ, ಹಾಡುಗಳು ತುಂಬಾನೇ ಚೆನ್ನಾಗಿವೆ. ಹಾಸ್ಟೆಲ್ ಹುಡುಗರ ನಟನೆ ಅದ್ಭುತವಾಗಿದೆ. ಸಿನಿಮಾ ತೆಗೆದಿದ್ದು ಅದ್ಭುತವಾಗಿದೆ. ಛಾಯಾಗ್ರಾಹಕರೇ ಈ ಸಿನಿಮಾದ ರಿಯಲ್ ಹೀರೊ. ರೇಟಿಂಗ್ 5ಕ್ಕೆ 4.5" ಎಂದು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
"ಸಿನಿಮಾದುದ್ಧಕ್ಕೂ ಮನರಂಜನೆ"
" ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಉದ್ದಕ್ಕೂ ಮನರಂಜನೆ ನೀಡುತ್ತೆ. ದ್ವಿತಿಯಾರ್ಧಕ್ಕಿಂತ ಮೊದಲಾರ್ಧ ಅತ್ಯದ್ಭುತ. ಬೇರೆ ಸಿನಿಮಾಗಳಂತೆ ಈ ಸಿನಿಮಾದಲ್ಲಿ ಕಾಲೇಜ್ ಡ್ರಾಮ ಇಲ್ಲ. ಇದು ಹಾಸ್ಟೆಲ್ ಹುಡುಗರ ಕಥೆಯನ್ನು ಆಧರಿಸಿದ ಸಿನಿಮಾ ಆಗಿದ್ದು, ಹಾಸ್ಟೆಲ್‌ನಲ್ಲಿ ಇದ್ದಿದ್ದರೆ ನಿಮಗೆ ಕೆಲವು ನೆನಪುಗಳು ಕಾಡುತ್ತವೆ" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











