Fighter Twitter Review: ಕೊನೆಯ 10 ನಿಮಿಷ ಅದ್ಭುತ, ಆಕ್ಷನ್, ದೇಶಭಕ್ತಿ ಕಮ್ಮಿಯೇನಿಲ್ಲ; ಫೈಟರ್‌ಗೆ ಪ್ರತಿಕ್ರಿಯೆ ಹೇಗಿದೆ?
ಬಾಲಿವುಡ್‌ನ ಆಕ್ಷನ್ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಹೊಸ ಸಿನಿಮಾ 'ಫೈಟರ್' ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಸಿನಿಮಾ ಬಿಡುಗಡೆಗೆ ಒಂದು ದಿನಕ್ಕೂ ಮುನ್ನ ವಾಯುಸೇನೆಯ ಅಧಿಕಾರಿಗಳಿಗಾಗಿ ಸಿನಿಮಾ ತೋರಿಸಲಾಗಿತ್ತು. ಈ ವೇಳೆ ಸಾಮಾನ್ಯ ಜನರು ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೇ ಅನಿಲ್ ಕಪೂರ್ ಕೂಡ 'ಫೈಟರ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಶೇಷ ಪ್ರದರ್ಶನದಲ್ಲಿ 'ಫೈಟರ್' ನೋಡಿದವರಿಗೆ ಸಿನಿಮಾ ತುಂಬಾನೇ ಇಷ್ಟ ಆಗಿದೆ.

'ಫೈಟರ್' ಸಿನಿಮಾವನ್ನು ತೆರೆಮೇಲೆ ನೋಡುವುದೇ ಒಂದು ಸ್ಪೆಷಲ್ ಟ್ರೀಟ್. ಆಕ್ಷನ್ ಅವತಾರದಲ್ಲಿ ಹೃತಿಕ್ ರೋಷನ್ ಅನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಬಣ್ಣಿಸುತ್ತಿದ್ದಾರೆ. ಹೃತಿಕ್ ರೋಷನ್-ದೀಪಿಕಾ ಪಡುಕೋಣೆ ಸ್ಟೈಲ್, ಆಕ್ಷನ್, ಮ್ಯಾನರಿಸಂ ಎಲ್ಲವು ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗಿದೆ. ಹಾಗಿದ್ರೆ, ಸಿನಿಮಾ ನೋಡಿದವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಏನೆಲ್ಲಾ ಹೇಳಿದ್ದಾರೆ ತಿಳಿಯಲು ಮುಂದೆ ಓದಿ.
'ವಾರ್', 'ಪಠಾಣ್' ಈಗ 'ಫೈಟರ್'
ಬಾಲಿವುಡ್‌ನ ವಿಮರ್ಶಕ ಹಾಗೂ ಟ್ರೇಡ್ ಎಕ್ಸ್‌ಪರ್ಟ್ ತರಾನ್ ಅದರ್ಶ್ ಸಿನಿಮಾ ನೋಡಿ ರಿವ್ಯೂ ಮಾಡಿದ್ದಾರೆ. "ವಾರ್, ಪಠಾಣ್ ಈಗ ಫೈಟರ್. ನಿರ್ದೇಶಕ ಸಿದ್ದಾರ್ಥ್ ಆನಂದ್ ಹ್ಯಾಟ್ರಿಕ್ ಸ್ಕೋರ್ ಮಾಡಿದ್ದಾರೆ. ಆಕಾಶದಲ್ಲಿ ಆಕ್ಷನ್, ಡ್ರಾಮ, ಎಮೋಷನ್ಸ್ ಹಾಗೂ ದೇಶಭಕ್ತಿಯಿದೆ. ಫೈಟರ್ ಸಿನಿಮಾ ಕಿಂಗ್ ಸೈಜ್ ಎಂಟರ್‌ಟೈನ್ಮೆಂಟ್. ಹೃತಿಕ್ ರೋಷನ್ ಅದ್ಭುತ ನಟನೆ ಮಾಡಿದ್ದಾರೆ. ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ." ಎಂದು ವಿಸ್ತಾರವಾದ ವಿಮರ್ಶೆ ಬರೆದು 4.5 ಸ್ಟಾರ್ ಕೊಟ್ಟಿದ್ದಾರೆ.
ಕೊನೆಯ 10 ನಿಮಿಷ ಅದ್ಭುತ
'ಫೈಟರ್' ಸಿನಿಮಾ ನೋಡಿದವರು ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ. ನೆಟ್ಟಿಗರೊಬ್ಬರು "ಫೈಟರ್ ಸಿನಿಮಾದ ಕೊನೆಯ 10 ನಿಮಿಷ ಅದ್ಭುತವಾಗಿದೆ. ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತೆ ಆಗುತ್ತೆ. ಹೃತಿಕ್ ರೋಷನ್ ಅನ್ನು ನೋಡುವುದಕ್ಕೆ ಖುಷಿಯಾಗುತ್ತೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಮೇಡ್ ಇನ್ ಇಂಡಿಯಾ ಸಿನಿಮಾ
"ಪ್ರೇಕ್ಷಕರಿಗೆ ಹೊಸದಾದ, ನಂಬಲು ಅಸಾಧ್ಯವಾದ ಅನುಭವವನ್ನು ನೀಡಲಿದೆ. ಇದು ಭಾರತೀಯ ಚಿತ್ರರಂಗದ ಕಲೆಯನ್ನು ಮೆಚ್ಚಿ ಹೊಗಳುವಂತೆ ಮಾಡುವ ಸಿನಿಮಾ. ಇದೊಂದು ಮೇಡ್ ಇನ್ ಇಂಡಿಯಾ ಸಿನಿಮಾ. ಹೃತಿಕ್ ರೋಷನ್ ಆಕ್ಷನ್, ಎಮೋಷನ್ಸ್ ಸೀನ್‌ಗಳನ್ನು ಪ್ರಯಾಸವಿಲ್ಲದೆ ಮಾಡಿದ್ದಾರೆ. ಇಡೀ ಸಿನಿಮಾವನ್ನೇ ರೂಲ್ ಮಾಡಿದ್ದಾರೆ. ದೀಪಿಕಾ ಪಡುಕೋಣೆಗೆ ಹೊಸ ರೋಲ್ ಹಾಗೂ ಹೊಸ ಇಮೇಜ್ ಸಿಕ್ಕಿದೆ. ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್ ಪ್ರಬುದ್ಧ ಅಭಿನಯದ ಅದ್ಭುತ ಅಂತ ಅನಿಸುತ್ತೆ. ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಇದೆ." ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.
ಆಕಾಶದಲ್ಲಿ ಅದ್ಭುತ ಆಕ್ಷನ್
'ಫೈಟರ್' ಸಿನಿಮಾ ನಿಮಗೆ ಆಕಾಶದೆತ್ತರದಲ್ಲಿ ಅದ್ಭುತ ಆಕ್ಷನ್ ಅನುಭವ ನೀಡುತ್ತೆ. ಇದರೊಂದಿಗೆ ಹಿನ್ನೆಲೆ ಕಥೆಗಳು ಹಾಗೂ ದೇಶಭಕ್ತಿ ಕೂಡ ಇದೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ. ಆಕಾಶದಲ್ಲಿ ಹಾಡುವ ವಿಮಾನಗಳು, ವಿಲನ್‌ಗಳು, ಹಿಡಿದಿಡುವ ಸ್ಕ್ರಿಪ್ಟ್ ಇವೆಲ್ಲವನ್ನು ತೆರೆಮೇಲೆ ನೋಡಿವುದಕ್ಕೆ ಖುಷಿ ಕೊಡುತ್ತೆ." ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











