Jailer First Half Twitter Review: ರಜನಿ.. ಇಂಟರ್‌ವಲ್.. ಕಾಮಿಡಿ ಎಲ್ಲಾ ಸೂಪರ್.. ಅರ್ಥ ಆಯ್ತಾ ರಾಜ!

ಸೂಪರ್‌ಸ್ಟಾರ್ ರಜನಿಕಾಂತ್ ಸತತ ಎರಡು ಸೋಲುಗಳನ್ನು ಕಂಡಿದ್ದರು. ಹೀಗಾಗಿ 'ಜೈಲರ್' ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಇದೇ ಕುತೂಹಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜೈಲರ್ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಮುಂದಾಗಿದ್ದರು.

ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ ಇಬ್ಬರಿಗೂ 'ಜೈಲರ್' ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಅದರಂತೆ ಮೊದಲ ದಿನವೇ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Jailer-Twitter Review

ರಜನಿಕಾಂತ್ ಮ್ಯಾನರಿಸಂ ಮತ್ತೊಮ್ಮೆ ಕಿಕ್ ಕೊಟ್ಟಿದೆ. ರಜನಿಗೆ ಸೂಪರ್‌ಸ್ಟಾರ್‌ಗಳು ಸಾಥ್ ಕೊಟ್ಟಿದ್ದು ಪ್ಲಸ್ ಪಾಯಿಂಟ್. ಹಾಗೇ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ರಂಜಿಸುತ್ತವೆ. ಹಿನ್ನೆಲೆ ಸಂಗೀತ ಕೂಡ ಅದ್ಭುತ ಎಂದು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ಅಷ್ಟಕ್ಕೂ ರಜನಿ 'ಜೈಲರ್' ಫಸ್ಟ್ ಹಾಫ್ ಬಗ್ಗೆ ನೆಟ್ಟಿಗರು ಏನಂತಿದ್ದಾರೆ? ತಿಳಿಯಲು ಮುಂದೆ ಓದಿ..

"ರಜನಿಕಾಂತ್‌ಗೆ ಅದ್ಬುತ ಕಥೆ ಸಿಕ್ಕಿದೆ"

"ಜೈಲರ್ ವಿಮರ್ಶೆ.. ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಅದ್ಬುತ ಕಥೆ ಸಿಕ್ಕಿದೆ ಹಾಗೇ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ವಿನಾಯಕನ್, ರಮ್ಯಾ, ಯೋಗಿ ನಟನೆ ಮಸ್ತ್ ಆಗಿದೆ. ಅನಿರುದ್ಧ್ ಹಿನ್ನೆಲೆ ಸಂಗೀತ ಸೂಪರ್‌ ಆಗಿದೆ. ಫ್ಲ್ಯಾಶ್ ಬ್ಯಾಕ್ ಸೀನ್ ಸಖತ್ ಆಗಿದೆ. ಮ್ಯಾಥ್ಯೂ ಹಾಗೂ ನರಸಿಂಹ ಸೀನ್‌ಗಳು ಮೈನವಿರೇಳಿಸುತ್ತವೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಚೆನ್ನಾಗಿದೆ. 3.5/5 ರೇಟಿಂಗ್" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ರಜನಿಯನ್ನು ಗಮನದಲ್ಲಿಟ್ಟುಕೊಂಡ ಸೃಷ್ಟಿಸಿದ ಸಿನಿಮಾ

"ಜೈಲರ್ ಫಸ್ಟ್ ಹಾಫ್ ವಿಮರ್ಶೆ.. ರಜನಿಕಾಂತ್ ವಯಸ್ಸು ಹಾಗೂ ಎನರ್ಜಿಯನ್ನು ಗಮನದಲ್ಲಿಟ್ಟುಕೊಂಡು ಅದ್ಭುತವಾಗಿ ವಿನ್ಯಾಸ ಮಾಡಿದ ಸಿನಿಮಾವಿದು. ಹಿನ್ನೆಲೆ ಸಂಗೀತ ಅದ್ಬುತವನ್ನೇ ಸೃಷ್ಟಿಸಿದೆ. ಅಲ್ಲದೆ ನೆಲ್ಸನ್ ದಿಲೀಪ್ ಕುಮಾರ್ ಕಾಮಿಡಿ ಟಚ್ ಈ ಬಾರಿ ಸಖತ್ ಆಗಿಯೇ ವರ್ಕ್‌ಔಟ್ ಆಗಿದೆ. ಮೊದಲಾರ್ಧ ಸಖತ್ ಆಗಿದೆ. ದ್ವಿತಿಯಾರ್ಧದ ಮೇಲೆ ಹಣೆ ಬರಹ ನಿಂತಿದೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಇಂಟರ್‌ವಲ್ ಸೀನ್ ಸೂಪರ್

ಸೂಪರ್‌ಸ್ಟಾರ್ ರಜನಿಕಾಂತ್ ನೋಡಿದರೆ ಮೈನವಿರೇಳುತ್ತೆ. ರಜನಿಕಾಂತ್ ಅನ್ನು ಅದ್ಭುತವಾಗಿ ತೋರಿಸಲಾಗಿದೆ. ಈ ಹಿಂದಿನ ನೆಲ್ಸನ್ ದಿಲೀಪ್ ಕುಮಾರ್ ಪಾತ್ರಗಳಂತೆ. ಯೋಗಿಬಾಬು & ರಜನಿ ದೃಶ್ಯಗಳು ಅದ್ಭುತವಾಗಿಯೇ ವರ್ಕ್ ಆಗಿದೆ. ಕಾಮಿಡಿ ಸಖತ್ ಆಗಿದೆ. ಸ್ಕ್ರೀನ್ ಪ್ಲೇ ವೇಗವಾಗಿದೆ. ಅನಿರುದ್ಧ್ ಹಿನ್ನೆಲೆ ಸಂಗೀತ ಅದರಲ್ಲೂ ಹುಕುಂ ಬಿಜಿಎಂ ಮಸ್ತ್ ಆಗಿದೆ. ಅಲ್ಲದೆ ಇಂಟರ್‌ವಲ್ ಸೀನ್‌ಗಳು ಅದ್ಭುತವಾಗಿವೆ.

ಜೈಲರ್ ಫಸ್ಟ್ ಹಾಫ್ ರಿಪೋರ್ಟ್

"ಜೈಲರ್ ಫಸ್ಟ್ ಹಾಫ್ ಅದ್ಭುತವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಕಾಮಿಡಿಯನ್ನು ಅದ್ಭುತವಾಗಿ ತಂದಿದ್ದಾರೆ. ರಜನಿಕಾಂತ್ ಸ್ಟೈಲಿಷ್ ಆಗಿರೋ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಟರ್‌ವಲ್ ಸೀನ್ ಚಿಂದಿಯಾಗಿದೆ. ಮಾಸ್ ಮಸಾಲಾ ಎಂಟರ್‌ಟೈನರ್" ಎಂದು ಟ್ವಿಟರ್‌ನಲ್ಲಿ ಫಸ್ಟ್ ಹಾಫ್ ರಿವ್ಯೂ ಮಾಡಿದ್ದಾರೆ.

'ಜೈಲರ್' ರೇಟಿಂಗ್ 4/5

" ಜೈಲರ್ ಸಿನಿಮಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆಯಲಿದೆ. ತಮಿಳಿನಲ್ಲಿ ಬ್ರೇಕ್ ಮಾಡಲು ಸಾಧ್ಯವಿಲ್ಲದಂತಹ ದಾಖಲೆ ಬರೆಯುತ್ತೆ. ಹಳೇ ಕಾಲದ ರಜನಿಕಾಂತ್ ಮತ್ತೆ ಬಂದಿದ್ದಾರೆ. ಹಿನ್ನೆಲೆ ಸಂಗೀತ ಬೇರೆ ಲೆವೆಲ್‌ನಲ್ಲಿದ್ದು, ಸಿನಿಮಾ ಅಡ್ವಾಂಟೇಜ್ ಆಗಿದೆ. ಎಲ್ಲಾ ಸೇರಿ ಒಟ್ಟು ರೇಟಿಂಗ್ 4/5" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Jailer first half Twitter Review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X