Avatar: Fire and Ash X Review: 'ಅವತಾರ್ 3' ನೋಡಿದವರ ಪ್ರತಿಕ್ರಿಯೆ ಹೇಗಿದೆ?ಎಷ್ಟು ಸ್ಟಾರ್ ಕೊಟ್ರು?

ಜಗತ್ತಿನ ದುಬಾರಿ ಹಾಗೂ ಕ್ರಿಯೇಟಿವ್ ಸಿನಿಮಾಗಳ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮತ್ತೊಂದು 'ಅವತಾರ್' ಸೀಕ್ವೆಲ್‌ನೊಂದಿಗೆ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. 'ಅವತಾರ್ 3'('ಅವತಾರ್: ಫೈರ್ ಅಂಡ್ ಆಶ್') ಸಿನಿಮಾ ಇಂದು (ಡಿಸೆಂಬರ್ 19) ವಿಶ್ವದಾದ್ಯಂತ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಬಹಳ ದಿನಗಳಿಂದ 3ನೇ ಸೀಕ್ವೆಲ್ ಅನ್ನು ನೋಡುವುದಕ್ಕೆ ಕಾಯುತ್ತಿದ್ದವರು ಫ್ಯಾನ್ಸ್‌ ಕೊನೆಗೂ ಈ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ 'ಅವತಾರ್ 3' ಸಿನಿಮಾದಲ್ಲಿ ಸ್ಯಾಮ್ ವರ್ತಿಂಗ್‌ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್‌ಲೆಟ್, ಊನಾ ಚಾಪ್ಲಿನ್ ಸೇರಿದಂತೆ ವಿಶ್ವದ ಜನಪ್ರಿಯ ತಾರೆಯರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಏನಿಲ್ಲ ಅಂದರೂ ಪ್ರೇಕ್ಷಕರಿಗೆ ಸಖತ್ ವಿಜ್ಯೂವಲ್ ಟ್ರೀಟ್ ಅಂತೂ ನೀಡಲಿದೆ. ಹಾಗಿದ್ದರೆ, ಈಗಾಗಲೇ ಸಿನಿಮಾ ನೋಡಿದವರು ಏನೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

James Cameron movie Avatar  Fire and Ash twitter X review in Kannada

ನಿರೂಪಣೆಯಲ್ಲಿ ವಿಶೇಷತೆಯಿಲ್ಲ

"ಪಾರ್ಟ್‌ 2ನಲ್ಲಿ ಇರುವಂತೆಯೇ ನಿರೂಪಣೆ ಇಲ್ಲೂ ಮುಂದುವರೆದಿದೆ. ಹಾಗಾಗಿ ಇದೊಂತರ ಮುಂದುವರೆದ ಭಾಗ ಎನ್ನುವಂತೆಯೇ ಇದೆ. ಮಂಗ್ಕ್ವಾನ್ ಜನಾಂಗವನ್ನು ಹೊರತುಪಡಿಸಿದರೆ ಸ್ಟೋರಿ ವಿಷಯದಲ್ಲಿ ಏನೂ ಅದ್ಭುತ ಅಂತ ಅನಿಸಲಿಲ್ಲ. ಸಿನಿಮಾ ಅಂದುಕೊಂಡಿದ್ದಕ್ಕಿಂತ ಲೆಂಥ್ ಇದೆ. ಸಿನಿಮಾದ ಮೇಕಿಂಗ್, ಸೌಂಡ್, ಸಿಜಿಐ ಹಾಗೂ ದೃಶ್ಯಗಳು ಅದ್ಭುತವಾಗಿವೆ. ಸಿನಿಮಾದ ಅನುಭವ ಪಡೆಯುವುದಕ್ಕೆ ಈ ಸಿನಿಮಾ ನೋಡಬಹುದು" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದೊಂದು ಕನಸಿದ್ದಂತೆ

"ಅವತಾರ್: ಫೈರ್ ಅಂಡ್ ಆಶ್ ಒಂದು ಕನಸು ಇದ್ದಂತೆ. 3 ಗಂಟೆ 17 ನಿಮಿಷದ ಸಿನಿಮಾ ಹೇಗೆ ಚಿಕ್ಕ ಸಿನಿಮಾ ಅನಿಸಿತೋ ಗೊತ್ತಾಗಲಿಲ್ಲ. ಪ್ರತಿ ಸಮಯದಲ್ಲೂ ಒಂದು ದೃಶ್ಯ ಕಟ್ ಆಗಿ ಇನ್ನೊಂದಕ್ಕೆ ಹೋಗುತ್ತಿತ್ತು. ನನಗೆ ಇನ್ನೂ ಬೇಕು ಅಂತಲೇ ಅನಿಸುತ್ತಿತ್ತು." ಎಂದು ಸಿನಿಮಾದ ನೆಟ್ಟಿಗರೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಒಂದು ಗಂಟೆ ಕತ್ತರಿ ಹಾಕಬಹುದು

"ಇಲ್ಲಿವರೆಗೂ ಬಂದ ಅವತಾರ್ ಸೀಕ್ವೆಲ್‌ಗಳಲ್ಲಿ ಇದು ಅತ್ಯಂತ ಕೆಟ್ಟ ಸಿನಿಮಾ. ಅವತಾರ್: ದಿ ವೇ ಆಫ್ ವಾಟರ್ ಸಿನಿಮಾವನ್ನು ಇನ್ನೊಂದು ವಿಭಿನ್ನ ವರ್ಷನ್‌ನಲ್ಲಿ ನೋಡಿದಂತೆ ಆಯ್ತು. ಒಳ್ಳೆಯ ಸ್ಕ್ರಿಪ್ಟ್ ಇಲ್ಲ. ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಸಂಘರ್ಷಗಳಿಲ್ಲ. ಜೇಮ್ಸ್ ಕ್ಯಾಮರೂನ್ ಅವತಾರ್ 2 ನಿಂದ ಹೊರ ಬಂದಿದ್ದಾರೆ. ಆದರೆ, ಈ ಬಾರಿ 'ಟೆಕ್' ಟ್ರಿಕ್ ಈ ಬಾರಿ ಕೆಲಸ ಮಾಡಿಲ್ಲ. ಗಂಭೀರವಾದ ಸ್ಕ್ರೀನ್‌ಪ್ಲೇ ಸಮಸ್ಯೆಯನ್ನು ಎದುರಿಸಿದ್ದಾರೆ. ಆರಾಮಾಗಿ ಇಂದು ಗಂಟೆ ವಿಜ್ಯೂವಲ್ಸ್ ಕತ್ತರಿ ಹಾಕಬಹುದು" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಥಿಯೇಟರ್ ಎಕ್ಸ್‌ಪೀರಿಯನ್ಸ್ ಅದ್ಭುತ

"ಅವತಾರ್" ಫೈರ್ ಅಂಡ್ ಆಶ್‌ನ ಪಂಡೋರ ಪ್ರಪಂಚಕ್ಕೆ ಕಾಲಿಡುವುದಕ್ಕೂ ಮುನ್ನ ನನಗೇನು ಅನುಭವ ಸಿಗುತ್ತೆ ಅನ್ನೋದು ಗೊತ್ತಿತ್ತು. ಅದ್ಭುತವಾದ ಥಿಯೇಟರ್ ಎಕ್ಸ್‌ಪೀರಿಯನ್ಸ್, ಅಷ್ಟೇ ಸುಂದರವಾಗಿರುವ ದೃಶ್ಯಗಳು, ಒಳ್ಳೆಯ ಡ್ರಾಮಾ ಹಾಗೇ ಸಖತ್ತಾಗಿರೋ ಆಕ್ಷನ್ ಬ್ಲಾಕ್‌ಗಳು ಇವೆ. ಆದರೆ, ಸೆಕೆಂಡ್‌ ಹಾಫ್‌ನಲ್ಲಿ ಈ ಸಿನಿಮಾ ಬೋರಿಂಗ್ ಅಂತ ಅನಿಸುತ್ತೆ." ಎಂದಿದ್ದಾರೆ.

'ಅವತಾರ್ 3' ಗೊಂದಲಮಯ

"ಎಂದಿನಂತೆ ದೃಶ್ಯಗಳು ಅದ್ಭುತವಾಗಿವೆ. ಆದರೆ, ನಿರೂಪಣೆಯಲ್ಲಿ ಹಿಂದೆ ಬಿದ್ದಿದ್ದಾರೆ. ವೇ ಆಫ್ ವಾಟರ್ ಬಳಿಕ ನೈಜ ಭಾವನಾತ್ಮಕ ಸನ್ನಿವೇಶಗಳ ಕೊರತೆ ಎದ್ದು ಕಾಣುತ್ತಿದೆ. ವಾವ್ಹ್ ಎನ್ನುವಂತ ಸಂದರ್ಭಗಳು ಇಲ್ಲ. ಆಶ್ ಜನಾಂಗದ ಕಥೆ ಸರಿಯಾಗಿ ಹೆಣೆದಿಲ್ಲ. ಬಹುತೇಕ ಗೊಂದಲಮಯವಾಗಿದೆ" ಎಂದಿದ್ದಾರೆ.

More from Filmibeat

English summary
James Cameron movie Avatar: Fire and Ash twitter X review in Kannada;
Read more about: avatar movie review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X