Avatar 3 First Review: "ನಿರೀಕ್ಷೆಗೂ ಮೀರಿ ಅದ್ಭುತ ಕಥೆ"; 'ಅವತಾರ್ 3' ಮೊದಲ ವಿಮರ್ಶೆಯಲ್ಲೇನಿದೆ?

ಬೆರಗುಗೊಳಿಸುವಂತಹ ಸಿನಿಮಾಗಳನ್ನು ಸಿನಿಪ್ರಿಯರಿಗೆ ನೀಡುತ್ತಾ ಬಂದಿರುವ ನಿರ್ದೇಶಕ ಜೇಮ್ಸ್ ಕ್ಯಾಮರೂನ್. ಇವರ ಬತ್ತಳಿಕೆಯಲ್ಲಿ ಇದೂವರೆಗೂ ಕಲ್ಪನೆಗೂ ಮೀರಿದ ಸಿನಿಮಾಗಳು ಬಂದಿವೆ. ಅದರಲ್ಲಿ 'ಅವತಾರ್' ಕೂಡ ಒಂದು. ವಿಶ್ವದ ಶ್ರೇಷ್ಠ ನಿರ್ದೇಶಿಸಿದ ಈ ಸಿನಿಮಾದ ಮೂರನೇ ಅವತರಣಿಕೆ ಈ ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

'ಅವತಾರ್ 3' ಅಥವಾ 'ಅವತಾರ್: ಫೈರ್ ಅಂಡ್ ಆಶ್' ಡಿಸೆಂಬರ್ 19ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ 'ಅವತಾರ್‌'ನ ಎರಡು ಸೀರಿಸ್‌ಗಳು ಬಾಕ್ಸಾಫೀಸ್‌ನಲ್ಲೂ ಮೋಡಿ ಮಾಡಿವೆ. ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ 'ಅವತಾರ್' ಎಂಬ ಅದ್ಭುತ ಕಲ್ಪನೆಗೆ ವಿಶ್ವದ ಮೂಲೆ ಮೂಲೆಯಲ್ಲೂ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ.

James Cameron s Avatar Fire And Ash First Review censor board cbfc clears movie UA certificate

'ಅವತಾರ್ 3' ಸಿನಿಮಾವನ್ನು ಸ್ವತ: ಜೇಮ್ಸ್ ಕ್ಯಾಮರೂನ್ ಹಾಗೂ ಜಾನ್ ಲ್ಯಾಂಡೌ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಮ್ ವರ್ತಿಂಗ್‌ಟನ್, ಜೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್‌ಲೆಟ್ ಮತ್ತು ಊನಾ ಚಾಪ್ಲಿನ್ ಸೇರಿದಂತೆ ಹಲವು ಹಾಲಿವುಡ್ ನಟರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಮಾಡರ್ನ್ ಟೆಕ್ನಾಲಿಜಿಯನ್ನು ಬಳಸಿ ನಿರ್ಮಾಣ ಮಾಡಿರುವ ಸಿನಿಮಾ. ಇಂದಿಗೂ ಇಂತಹದ್ದೊಂದು ಪ್ರಯತ್ನ ಮಾಡುವುದಕ್ಕೆ ಬೇರಾವುದೇ ಚಿತ್ರರಂಗಕ್ಕೆ ಸಾಧ್ಯವಾಗಲೇ ಇಲ್ಲ.

ಜೇಮ್ಸ್ ಕ್ಯಾಮರೂನ್ ಅವರ ಮಹತ್ವಕಾಂಕ್ಷೆಯ ಸಿನಿಮಾ 'ಅವತಾರ್ 3' ಪ್ರೀಮಿಯರ್ ಇತ್ತೀಚೆಗೆ ಅಂದರೆ, ಡಿಸೆಂಬರ್ 1 ರಂದು ನಡೆದಿದೆ. ಹಾಲಿವುಡ್‌ನ ಪ್ರತಿಷ್ಠಿತ ಡಾಲ್ಬಿ ಥಿಯೇಟರ್‌ನಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಿನಿಮಾದ ಕಥೆ ಹಾಗೂ ತಾಂತ್ರಿಕವಾಗಿ ಸಿನಿಮಾವನ್ನು ಮೆಚ್ಚಿಕೊಂಡಿದ್ದಾಗಿ ವರದಿಯಾಗಿದೆ. ಸಿನಿಮಾ ಕಥೆ ಭಾವನಾತ್ಮಕವಾಗಿದ್ದು, ಇಲ್ಲಿ ಜೇಮ್ಸ್ ಕ್ಯಾಮರೂನ್ 'ಮಂಗ್ಕ್ವಾನ್' ಅಥವಾ 'ಆಶ್ ಪೀಪಲ್' (ಬೂದಿ ಜನರು) ಎಂಬ ನಾವಿ ಬುಡಗಟ್ಟು ಜನಾಂಗವನ್ನು ಪರಿಚಯಿಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗ ಕರಗಿದ ಬಂಡೆಗಳು ಮತ್ತು ಹೊಗೆಯಿರುವ ವಾತಾವರಣದಲ್ಲಿ ವಾಸ ಮಾಡುತ್ತದೆ.

James Cameron s Avatar Fire And Ash First Review censor board cbfc clears movie UA certificate

ಇನ್ನು ಸಿನಿಮಾ ಕಥಾ ಹಂದರದ ಕಡೆ ಬರೋದಾರೆ, ಕಲ್ನಲ್ ಕ್ವಾರಿಚ್ ಎಂಬುವವನ ನೇತೃತ್ವದಲ್ಲಿ, ವಾರಂಗ್ ಎಂಬ ಸೈನಿಕ ನಾವಿ ಬುಡಕಟ್ಟು ಜನಾಂಗದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಾನೆ. ಅಂತಿಮವಾಗಿ ಈ ಯುದ್ಧದಲ್ಲಿ ಗೆಲ್ಲೋದು ಯಾರು? ಎಂಬುದೇ 'ಅವತಾರ್ 3' ಸಿನಿಮಾ ಕಥೆ. ಸುಮಾರು 400 ಮಿಲಿಯನ್ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾದ ಮೊದಲ ವಿಮರ್ಶೆ ಹೊರಬಿದ್ದಿದೆ.

ಮಂಗ್ಕ್ವಾನ್ ಬುಡಕಟ್ಟಿನ ಇಂಟ್ರುಡಕ್ಷನ್‌ಗೆ ಹೆಚ್ಚು ಸಮಯವನ್ನು ಮೀಸಲಿರಿಸಲಾಗಿದೆ. ಕಥೆ ಹೇಳುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದು, ಜೊತೆಗೆ ಅದ್ಭುತವಾದ ಆಕ್ಷನ್ ದೃಶ್ಯಗಳು ಕೂಡ ಇವೆ. ಲಾಸ್ ಎಂಜಲೀಸ್‌ನಲ್ಲಿ 'ಅವತಾರ್ 3' ಪ್ರೀಮಿಯರ್ ಆದ ಬಳಿಕ ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಅದ್ಭುತವಾಗಿದೆ. ಈ ಸಿನಿಮಾವನ್ನು ನೋಡಿ ಕೆಲವರು " ಇದೊಂದು ದೃಶ್ಯ ಕಾವ್ಯ" ಎಂದು ಬಣ್ಣಿಸಿದ್ದಾರೆ. ಹಾಗೇ ಇನ್ನು ಕೆಲವರು "ನಿರೀಕ್ಷೆಗೂ ಮೀರಿ ಅದ್ಭುತ ಕಥೆ" ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ "ಇದುವರೆಗೂ ಬಂದ ಸೀಕ್ವೆಲ್‌ಗಳಲ್ಲಿ ಇದು ಅತ್ಯುತ್ತಮ" ಎಂದೂ ಹಲವರು ಬಣ್ಣಿಸಿರೋದು ಸಿನಿಮಾಗೆ ಪಾಸಿಟಿವ್ ಆಗಿದೆ.

'ಅವತಾರ್ 3' ಸಿನಿಮಾವನ್ನು ಸೆನ್ಸಾರ್ ಮಾಡಲಾಗಿದೆ. ಈ ಸಿನಿಮಾದ ಒಟ್ಟು ಅವಧಿ 3 ಗಂಟೆ 17 ನಿಮಿಷಗಳು (197 ನಿಮಿಷಗಳು) ಎಂದು ಸೆನ್ಸಾರ್ ಸರ್ಟಿಫಿಕೇಟ್‌ನಿಂದ ತಿಳಿದು ಬಂದಿದೆ. ಈ ಸಿನಿಮಾ ಭಾರತದಲ್ಲಿ 2D, MX4D, 3D, IMAX 3D ಹಾಗೂ ಡಾಲ್ಫಿ ಸಿನಿಮಾದ 3ಡಿ ಆವೃತ್ತಿಗಳಲ್ಲಿ ನೋಡುವುದಕ್ಕೆ ಸಿಗುತ್ತಿದೆ. ಈ ಸಿನಿಮಾ ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

More from Filmibeat

English summary
James Cameron's Avatar Fire And Ash First Review censor board cbfc clears movie UA certificate.
Read more about: avatar movie review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X