Jawan First Half Review: ಶಾರುಖ್ ಡಬಲ್ ರೋಲ್.. ಮೆಟ್ರೋ ರೈಲು ಹೈಜಾಕ್.. ಜವಾನ್ ಫಸ್ಟ್ ಹಾಫ್‌ನಲ್ಲಿ ಏನಿದೆ.. ಏನಿಲ್ಲ?
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ವಿಶ್ವದ ಮೂಲೆ ಮೂಲೆಯಲ್ಲಿ 'ಜವಾನ್' ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಶಾರುಖ್ ಖಾನ್ ಹಾಗೂ ನಯನತಾರಾ ಚೊಚ್ಚಲ ಕಾಂಬಿನೇಷನ್ ಆಗಿರುವುದರಿಂದ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಿತ್ತು.
ಬಾಲಿವುಡ್ ಸೂಪರ್‌ಸ್ಟಾರ್ ಜೊತೆ ಸೌತ್‌ನ ಲೇಡಿ ಸೂಪರ್‌ಸ್ಟಾರ್ ಜೋಡಿಯಾಗಿದ್ದೇ ಅಭಿಮಾನಿಗಳಿಗೆ ಒಂದು ಕಿಕ್ಕು. ಇವರೊಂದಿಗೆ ವಿಜಯ್ ಸೇತುಪತಿ ಖಳನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿರೋದು 'ಜವಾನ್' ಸಿನಿಮಾದ ಮತ್ತೊಂದು ಹೈಲೈಟ್.

ಹಾಗೇ ತಮಿಳಿನ ಮಾಸ್ ಡೈರೆಕ್ಟರ್ ಅಟ್ಲೀ ಈ ಸಿನಿಮಾಗೆ ನಿರ್ದೇಶಕ. ಇದರೊಂದಿಗೆ ಅನಿರುದ್ಧ್ ಮ್ಯೂಸಿಕ್ ಸಿನಿ ಪ್ರಿಯರಿಗೆ ಮತ್ತಷ್ಟು ಕಿಕ್ ಕೊಟ್ಟಿದೆ. ಬೆಂಗಳೂರಿನಲ್ಲಿ 'ಜವಾನ್' ಸಿನಿಮಾ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ಹಾಗಿದ್ದರೆ, ಸಿನಿಮಾದ ಫಸ್ಟ್ ಹಾಫ್ ಹೇಗಿದೆ? ಫ್ಲಸ್ ಏನು? ಮೈನಸ್ ಏನು? ತಿಳಿಯಲು ಮುಂದೆ ಓದಿ..
ಫಸ್ಟ್ ಹಾಫ್ ಫುಲ್ ಮಾಸ್
ಶಾರುಖ್ ಖಾನ್ ಹಾಗೂ ಅಟ್ಲೀ ಕಾಂಬಿನೇಷನ್ ಸಿನಿಮಾ ಬಗ್ಗೆ ಕ್ರೇಜ್ ಇರೋದಕ್ಕೆ ಕಾರಣ ಮಾಸ್ ಎಲಿಮೆಂಟ್ಸ್. 'ಜವಾನ್' ಸಿನಿಮಾದಲ್ಲೂ ಮಾಸ್ ಎಲಿಮೆಂಟ್ಸ್ ಹೆಚ್ಚಿದೆ. ಇಲ್ಲಿ ಶಾರುಖ್ ಖಾನ್ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ರೈತರ ಸಾಲ, ಅವರ ಸಮಸ್ಯೆ, ಆತ್ಮಹತ್ಯೆ, ಇದರೊಂದಿಗೆ ಉದ್ಯಮಿಗಳ ಸಾಲಮನ್ನಾದ ವಿರುದ್ಧ ಕಿಡಿಕಾರುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೇ ರೈತರ ಸಾಲ ಮನ್ನ ಮಾಡದೇ ಇರುವ ವ್ಯಕ್ತಿಯ ಬಗ್ಗೆನೂ ನಾಯಕ ಕೋಪ ಹೊರ ಹಾಕಿರುವ ದೃಶ್ಯಗಳಿವೆ. ಹೀಗಾಗಿ ಫಸ್ಟ್ ಹಾಫ್ ಪಕ್ಕಾ ಅಟ್ಲೀಯ ಮಾಸ್ ಸಿನಿಮಾ ಅನ್ನೋದು ಗೊತ್ತಾಗುತ್ತೆ.
ಶಾರುಖ್ ಖಾನ್ ಡಬಲ್ ರೋಲ್
'ಜವಾನ್' ಸಿನಿಮಾದಲ್ಲಿ ಶಾರುಖ್ ಖಾನ್ ಅನ್ನು ಹಲವು ಶೇಡ್‌ಗಳಲ್ಲಿ ತೋರಿಸಲಾಗಿದೆ. ಟ್ರೈಲರ್, ಟೀಸರ್‌ನಲ್ಲಿ ಹುಟ್ಟಿಕೊಂಡು ಅನುಮಾನ ನಿಜವಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದು, 'ಜವಾನ್' ಸಿನಿಮಾದ ಹೈಲೈಟ್ ಇದೇನೇ. ಫಸ್ಟ್ ಹಾಫ್ ಮುಗಿಯುವ ಕೊನೆಯಲ್ಲಿ ಶಾರುಖ್ ತಂದೆ ಪಾತ್ರ ಎಂಟ್ರಿ ಆಗುತ್ತೆ. ಮಗನ ಪಾತ್ರದಲ್ಲಿ ಶಾರುಖ್ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡರೆ, ತಂದೆ ಒಂದೇ ಶೇಡ್‌ನಲ್ಲಿ ತೋರಿಸಲಾಗಿದೆ.

ಮೆಟ್ರೋ ಟ್ರೈನ್ ಹೈಜಾಕ್ ದೃಶ್ಯ ಹೈಲೈಟ್
'ಜವಾನ್' ಸಿನಿಮಾದ ಹೈಲೈಟ್ ಮೆಟ್ರೋ ಟ್ರೈನ್ ಹೈಜಾಕ್.. ಶಾರುಖ್ ಖಾನ್ ಮೆಟ್ರೋ ಟ್ರೈನ್ ಅನ್ನೇ ಹೈಜಾಕ್ ಮಾಡುವ ಸೀನ್ ಮಾಸ್ ಪ್ರಿಯರಿಗೆ ಹಬ್ಬ. ಈ ಮೂಲಕ ವಿಜಯ್ ಸೇತುಪತಿ ಪಾತ್ರ ಕಾಳಿಯ ಅಸಲಿ ಪರಿಚಯ ಮಾಡಿಕೊಡಲಾಗುತ್ತೆ. ಹೀಗಾಗಿ ಫಸ್ಟ್ ಹಾಫ್‌ನ ಇಂಟ್ರೆಸ್ಟಿಂಗ್ ಸೀನ್‌ನಲ್ಲಿ ಮೆಟ್ರೋ ಹೈಜಾಕ್ ಸೀನ್ ಸಿಕ್ಕಾಪಟ್ಟೆ ಮಜಾ ನೀಡಲಿದೆ.
ಮ್ಯೂಸಿಕ್, ಹಿನ್ನೆಲೆ ಸಂಗೀತ ಅದ್ಭುತ
ಫಸ್ಟ್ ಹಾಫ್‌ನಲ್ಲಿ ಎರಡು ಸಾಂಗ್‌ಗಳಿವೆ. ಈ ಎರಡೂ ಹಾಡುಗಳು ಕಥೆಗೆ ಪೂರಕವಾಗಿಯೇ ಇವೆ. ಹೀಗಾಗಿ ಅನಿರುದ್ಧ್ ಮ್ಯೂಸಿಕ್ ಇಷ್ಟ ಆಗುತ್ತೆ. ಅಲ್ಲದೆ ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ. ಇದರೊಂದಿಗೆ ಜಿ ಕೆ ವಿಷ್ಣು ಕ್ಯಾಮರಾ ವರ್ಕ್ ಕೂಡ ಅದ್ಭುತವಾಗಿದೆ. ಫಸ್ಟ್ ಹಾಫ್‌ನ ಆರಂಭದಿಂದ ಅಂತ್ಯದವರೆಗೂ ಕ್ಯಾಮರಾ ಅದ್ಭುತ ಅಂತ ಅನಿಸುತ್ತೆ.
ನಯನತಾರಾ ಎಪಿಸೋಡ್ ಇಂಟ್ರೆಸ್ಟಿಂಗ್
ಶಾರುಖ್ ಖಾನ್ ಹಾಗೂ ನಯನತಾರಾ ಎಪಿಸೋಡ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಮೊದಲ ಭಾಗದಲ್ಲಿ ನಯನತಾರಾ ಬ್ಯಾಕ್‌ಗ್ರೌಂಡ್ ಸ್ಟೋರಿಯನ್ನು ತೋರಿಸಲಾಗಿದೆ. ಶಾರುಖ್ ಹಾಗೂ ನಯನತಾರಾ ಪರಿಚಯ, ಮದುವೆಯ ದೃಶ್ಯಗಳನ್ನು ಫಸ್ಟ್ ಹಾಫ್‌ನಲ್ಲಿದೆ. ಇನ್ನು ಸೆಕೆಂಡ್ ಹಾಫ್‌ನಲ್ಲಿ ಕಾಳಿ(ವಿಜಯ್ ಸೇತುಪತಿ) ವಿರುದ್ಧ ಶಾರುಖ್ ಖಾನ್ ಹೋರಾಟ ಹೇಗಿರುತ್ತೆ? ಅನ್ನೋದು ತೋರಿಸಲಾಗಿದೆ.


Click it and Unblock the Notifications











