Dragon Glimpse X Review; 'ಡ್ರ್ಯಾಗನ್' ಗ್ಲಿಂಪ್ಸ್ ಮಾಸ್‌ ಕಾ ಬಾಪ್, ಡಾರ್ಕ್ ಟೋನ್ ಸಿನಿಮಾಗೆ ನೆಟ್ಟಿಗರು ಏನಂದ್ರು?

ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡ್ರ್ಯಾಗನ್' ಗ್ಲಿಂಪ್ಸ್ ಕೊನೆಗೂ ಹೊರ ಬಿದ್ದಿದೆ. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಅಂಗವಾಗಿ ಈ ಸಿನಿಮಾ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಯಂಗ್ ಟೈಗರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಈ ಸಿನಿಮಾ ಬಗ್ಗೆ ಈಗಾಗಲೇ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾವನ್ನು ಪ್ರಶಾಂತ್ ನೀಲ್ ಶೂಟ್ ಮಾಡುತ್ತಿದ್ದಾರೆ. ಆದರೆ, ಒಂದೇ ಒಂದು ಸುಳಿವು ಬಿಟ್ಟು ಕೊಟ್ಟಿರಲಿಲ್ಲ.

ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ ಪ್ರಶಾಂತ್ ನೀಲ್ 'ಡ್ರ್ಯಾಗನ್' ಫಸ್ಟ್ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಿದ್ದಾರೆ. 'ಸಲಾರ್' ಸಿನಿಮಾ ಬಳಿಕ ಜೂನಿಯರ್ ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಕೈ ಜೋಡಿಸಿದ್ದರು. ಹೀಗಾಗಿ ಟಾಲಿವುಡ್‌ನ ಯಂಗ್ ಟೈಗರ್ ಅನ್ನು ಹೇಗೆ ತೋರಿಸಬಹುದು? ಈ ಸಿನಿಮಾದ ಕಥೆಯೇನು? ಅನ್ನೋ ಕುತೂಹಲವಿತ್ತು. ಅದಕ್ಕೆ 'ಡ್ರ್ಯಾಗನ್' ಗ್ಲಿಂಪ್ಸ್ ಉತ್ತರ ಕೊಟ್ಟಿದೆ. ಈ ಗ್ಲಿಂಪ್ಸ್ ಅನ್ನು ನೋಡಿದ ಬಳಿಕ ನೆಟ್ಟಿಗರು ಎಕ್ಸ್‌ನಲ್ಲಿ (ಟ್ವಿಟರ್) ತಮ್ಮ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ.

JrNTR  Prashanth Neel  Rukmini Vasanth movie Dragon Glimpse X Review and reaction

ಮಾಸ್‌ ಕಾ ಬಾಪ್-ಡ್ರ್ಯಾಗನ್

"ಪ್ರತಿಯೊದು ಸೆನ್ಸ್‌ನಲ್ಲಿಯೂ 'ಡ್ರ್ಯಾಗನ್' ಮೊದಲ ಗ್ಲಿಂಪ್ಸ್ ಮಾಸ್‌ ಕಾ ಬಾಸ್. ಎನ್‌ಟಿಆರ್ ಅವರ ರೋಚಕ ಎನಿಸುವ ಪ್ರೆಸೆನ್ಸ್ ಹಾಗೂ ಪ್ರಶಾಂತ್ ನೀಲ್ ಅವರ ಕಥೆ ಹೇಳುವ ಶೈಲಿ, ಆಕ್ಷನ್ ಮತ್ತು ಎಲಿವೇಷನ್ ಸೀನ್‌ಗಳಿಂದ ತುಂಬಿದ ಅದ್ಬುತ ಸಿನಿಮೀಯ ಅನುಭವವನ್ನು ನೀಡುತ್ತದೆ. ಪ್ರಶಾಂತ್ ನೀಲ್ ಅವರಿಂದ ಡಾರ್ಕ್ ಹಾಗೂ ಡಿಟೈಲ್ ಆಗಿ ಸೃಷ್ಟಿಸಿರುವ ಈ ಪ್ರಪಂಚ. ಪ್ರಶಾಂತ್ ನೀಲ್ ಅವರ ಹುಚ್ಚುತನದ ತೀವ್ರತೆಯ ಹೊಸ ಪದರ. ಈ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಟ್ಟಾಗ ಎಮೌನವಾಗಿ ಇರುವುದಿಲ್ಲ." ಎಂದು ಇನ್ನೊಬ್ಬರು ಹೇಳಿದ್ದಾರೆ.

"ನೀವು ನಿಜವಾದ ಪ್ರೇರಣೆ"

"ದೇಹವನ್ನು ದಪ್ಪಗಾಗಿಸುವುದು ಇಲ್ಲವೇ ಸಿಕ್ಸ್ ಪ್ಯಾಕ್ ಅನ್ನು ಮಾಡುವುದು ಅಷ್ಟು ಸುಲಭ ಅಲ್ಲ. ಆದರೆ, ಅದು ನಿಮಗೆ ಅನ್ವಯ ಆಗುವುದಿಲ್ಲ. ನೀವು ಎಂತಹ ಡೆಡಿಕೆಟೆಡ್ ನಟ? ಬೇರೆ ನಟರಿಗೆ ನೀವು ನಿಜವಾಗಲೂ ಪ್ರೇರಣೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

Also Read
Dragon Glimpse: 'ಕೆಜಿಎಫ್', 'ಸಲಾರ್' ಛಾಯೆಯಿಂದ ಹೊರಬಾರದ ಎನ್‌ಟಿಆರ್- ನೀಲ್ 'ಡ್ರ್ಯಾಗನ್'
Dragon Glimpse: 'ಕೆಜಿಎಫ್', 'ಸಲಾರ್' ಛಾಯೆಯಿಂದ ಹೊರಬಾರದ ಎನ್‌ಟಿಆರ್- ನೀಲ್ 'ಡ್ರ್ಯಾಗನ್'

ಡ್ರ್ಯಾಗನ್ ಮಾಸ್ ಸಿನಿಮಾ

"ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಅವರ ಡ್ರ್ಯಾಗನ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಅದು ಅದ್ಭುತವಾಗಿದೆ. ಡ್ರ್ಯಾಗನ್ ಟೀಸರ್ ಒಂಥರಾ ಸಂಪೂರ್ಣ ಮಾಸ್ ಸಿನಿಮಾ ಎನಿಸುತ್ತಿದೆ." ಎಂದು ಇನ್ನೊಬ್ಬ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಡಾರ್ಕ್‌ ವಿಜ್ಯೂವಲ್ ಟೋನ್‌-'ಡ್ರ್ಯಾಗನ್'

ಡ್ರ್ಯಾಗನ್ ಗ್ಲಿಂಪ್ಸ್‌ನಲ್ಲಿ ಆಳವಾದ ಭಾವನಾತ್ಮಕ ಸನ್ನಿವೇಶಗಳಿವೆ, ಸೋಲ್‌ಫುಲ್ ಮ್ಯೂಸಿಕ್ ಹಾಗೂ ಅದ್ಬುತ ನಿರ್ದೇಶನವನ್ನು ಈ ಸಿನಿಮಾದ ಮೂಲಕ ನಾವು ನಿರೀಕ್ಷೆಯನ್ನು ಮಾಡುತ್ತಿವೆ. ಇದನ್ನೇ ನಾವು ಎಕ್ಸ್‌ಪೆಕ್ಟೆಡ್ ಮಾಡುತ್ತಿದ್ದೇವೆ. ಡ್ರ್ಯಾಗನ್ ಟೀಸರ್ ಇದು ಪ್ರಶಾಂತ್ ನೀಲ್‌ ಈ ಹಿಂದೆ ನಿರ್ದೇಶಿಸಿದ ಎಲ್ಲಾ ಸಿನಿಮಾಗಳ ಮಿಶ್ರಣ. ಈ ಸಿನಿಮಾದಲ್ಲಿ ವಿಶೇಷವಾದದ್ದು ಏನೂ ಇಲ್ಲ. ಟೀಸರ್ ಡಾರ್ಕ್‌ ವಿಜ್ಯೂವಲ್ ಟೋನ್‌ನಲ್ಲಿದೆ" ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.

'ಡ್ರ್ಯಾಗನ್' ಗ್ಲಿಂಪ್ಸ್- ಇದು ಬಲು ಕ್ರೂರ

"ಡ್ರ್ಯಾಗನ್ ಟೀಸರ್ ರಿವ್ಯೂ: ಇದು ಕ್ರೂರ, ಇದು ಪೌರಾಣಿಕ ಪ್ರದರ್ಶನ, ಈ ಸಿನಿಮಾವನ್ನು ಸಿನಿಮೀಯ ಇತಿಹಾಸಕ್ಕಾಗಿ ವಿನ್ಯಾಸಗೊಳಿಸಲಾಗಿದೆ." ಎಂದು ನೆಟ್ಟಿಗರೊಬ್ಬರು 'ಡ್ರ್ಯಾಗನ್' ಸಿನಿಮಾದ ಗ್ಲಿಂಪ್ಸ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

English summary
JrNTR, Prashanth Neel, Rukmini Vasanth movie Dragon Glimpse X Review and reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X