Kabzaa Twitter Review : ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ನೋಡಿ ಏನಂದ್ರು ನೆಟ್ಟಿಗರು?
ಉಪೇಂದ್ರ ನಟನೆಯ ಆಕ್ಷನ್ ಡ್ರಾಮ 'ಕಬ್ಜ'. ಆರ್ ಚಂದ್ರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಇಂದು (ಮಾರ್ಚ್ 17) ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ಉಪೇಂದ್ರ ಜೊತೆ ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಕೂಡ ಕಾಣಿಸಿಕೊಳ್ಳುವುದರಿಂದ ಪ್ರೇಕ್ಷಕರನ್ನು ಕುತೂಹಲವಿತ್ತು. ಅಲ್ಲದೆ ಬಹುಭಾಷಾ ನಟಿ ಶ್ರಿಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದು,ಪ್ರೇಕ್ಷಕರು ಇವರನ್ನು ರೆಟ್ರೋ ಲುಕ್‌ನಲ್ಲಿ ನೋಡುವುದಕ್ಕೆ ಕಾದು ಕೂತಿದ್ದರು.
'ಕಬ್ಜ' ಕಥೆ ಸ್ವಾತಂತ್ರ್ಯ ಪೂರ್ವದ ಕಾಲದಿಂದ ಆರಂಭ ಆಗುತ್ತೆ. ಇಲ್ಲಿ ಉಪೇಂದ್ರ ಅರ್ಕೇಶ್ವರನಾಗಿ, ವಾಯಿಸೇನೆಯ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಭಾರತದಲ್ಲಿ ಅಂಡರ್‌ವರ್ಲ್ಡ್ ಹುಟ್ಟಿದೇಗೆ? ಅನ್ನೋದನ್ನು ತೋರಿಸಲಿದೆ. ಹಾಗಿದ್ದರೆ, ಟ್ವೀಟರ್‌ನಲ್ಲಿ 'ಕಬ್ಜ' ಬಗ್ಗೆ ಏನು ಓಡಾಡುತ್ತಿದೆ ಅನ್ನೋದನ್ನು ನೋಡಲು ಮುಂದೆ ಓದಿ.

ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದೇನು?
ಬಾಲಿವುಡ್ ನಟ ಅನುಪಮ್ ಖೇರ್ 'ಕಬ್ಜ' ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. " ಕಬ್ಜ ಸಿನಿಮಾ ಬಗ್ಗೆ ಉತ್ತಮ ಮಾತುಗಳನ್ನು ಕೇಳುತ್ತಿದ್ದೇನೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಅದ್ಭುತ ಗಳಿಕೆ ಮಾಡಲಿ" ಎಂದಿದ್ದಾರೆ.
'ಕಬ್ಜ' ಮತ್ತೊಂದು ಎಲ್ಡೊರಾಡೋ
'ಕಬ್ಜ' ಕನ್ನಡದ ಮತ್ತೊಂದು ಎಲ್ಡೋರಾಡೋ.. ಆರ್ ಚಂದ್ರು ನಿರ್ದೇಶನ ಅದ್ಭುತ. ಉಪೇಂದ್ರ ನಟನೆ ಇನ್ನೊಂದು ಲೆವೆಲ್‌ನಲ್ಲಿ ಇದೆ. ಕಿಚ್ಚ ಸುದೀಪ್ ತೆರೆಮೇಲೆ ಕಾಣಿಸಿಕೊಂಡ ರೀತಿ ಹಾಗೂ ಶಿವರಾಜ್‌ಕುಮಾರ್ ಎಂಟ್ರಿ ಅದ್ಭುತವಾಗಿದೆ. 4.5/5" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
'ಕಬ್ಜ' ಕನ್ನಡದ ಹೆಮ್ಮೆ
'ಕಬ್ಜ' ಸಿನಿಮಾ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿದೆ. ಯಾವುದೇ ನೆಗೆಟಿವ್ ಕಮೆಂಟ್‌ಗಳಿಗೆ ಕಿವಿಗೊಡಬೇಡಿ. ಕಿಚ್ಚ ಬಾಸ್ ಅತಿಥಿ ಪಾತ್ರ, ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಎಲ್ಲವೂ ಅದ್ಭುತ." ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬರು "ಕೆಜಿಎಫ್ 1 ಮತ್ತು 2 ಅನ್ನು ನೋಡಿದವರು 'ಕಬ್ಜ' ಸಿನಿಮಾ ನೋಡುವುದಿಲ್ಲ. ಅದೇ ಸ್ಕ್ರೀನ್ ಪ್ಲೇ.. ಅದೇ ಎಡಿಟಿಂಗ್" ಎಂದು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.


Click it and Unblock the Notifications











