Kaiva Review: 'ಕೈವ'ನ ಪ್ರೇಮಕಥೆಗೆ ರೌಡಿಸಂ ಟಚ್.. ಕಣ್ಮನ ಸೆಳೆಯುತ್ತೆ ತಿಗಳರ ಪೇಟೆ, ಕರಗ, ಭಕ್ತಪ್ರಹ್ಲಾದ!
ನಿರ್ದೇಶಕ ಜಯತೀರ್ಥ ವೃತ್ತಿ ಬದುಕನಲ್ಲೇ ಇಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲ ಅವರ ವೃತ್ತಿ ಬದುಕಿನ ಮೊದಲ ಎ ಸರ್ಟಿಫಿಕೇಟ್ ಸಿನಿಮಾ ಎನ್ನಬಹುದು. ಹೌದು, ನಾವು ಹೇಳುತ್ತಿರೋದು ಈ ವಾರ ತೆರೆಕಂಡಿರೋ 'ಕೈವ' ಸಿನಿಮಾದ ಬಗ್ಗೆನೇ..
ಕನ್ನಡ ಚಿತ್ರರಂಗಕ್ಕೆ ಭೂಗತ ಜಗತ್ತು ಹೊಸದೇನು ಅಲ್ಲ. ಈಗಾಗಲೇ ಸಾಕಷ್ಟು ನಿರ್ದೇಶಕರು ಅಂಡರ್‌ವರ್ಲ್ಡ್ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದು ಇದೆ. ಕೆಲವರಿಗೆ ಅಭೂತಪೂರ್ವ ಯಶಸ್ಸು ಕೂಡ ಸಿಕ್ಕಿದೆ. ಈಗ ಜಯತೀರ್ಥ ಸರದಿ. ಇವರಿಗೂ 'ಕೈವ' ಕೈ ಹಿಡಿಯುತ್ತಾ? ಸಿನಿಮಾದಲ್ಲಿ ಅಂತಹ ವಿಶೇಷತೆ ಏನಿದೆ? ಏನಿದು ತಿಗಳಪೇಟೆ ಕಥೆ? ಗಂಗಾರಾಮ್ ಬಿಲ್ಡಿಂಗ್ ದುರಂತ, ಭಕ್ತಪ್ರಹ್ಲಾದ ರಿಲೀಸ್, ಇದಕ್ಕೆಲ್ಲ ಏನು ಸಂಬಂಧ?

'ಕೈವ' ಹಿನ್ನೆಲೆ ಏನು?
1983ರ ಕಾಲ ಘಟ್ಟದಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ಸಮೀಪ ನಡೆಯುವ ಒಂದು ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಕಥೆಯ ಕಥಾನಾಯಕನ ಹೆಸರು ಕೈವ. ಹೊಟ್ಟೆಪಾಡಿಗಾಗಿ ಬೆಂಗಳೂರು ಬಂದು ತಿಗಳರಪೇಟೆಯಲ್ಲಿ ನೆಲೆ ಕಂಡುಕೊಂಡಿರುತ್ತಾನೆ . ಈ ಕೈವನಿಗೆ ಅದೇ ಏರಿಯಾದ ಸಲ್ಮಾ ಮೇಲೆ ಪ್ರೀತಿ ಹುಟ್ಟುತ್ತೆ. ಇವರಿಬ್ಬರು ಪ್ರೀತಿಯಲ್ಲಿ ಒಂದು ಘಟನೆ ನಡೆಯುತ್ತೆ. ಅದಕ್ಕೆ ನಾಯಕ ಸೇಡು ತೀರಿಸಿಕೊಳ್ಳುವುದೇ ಕಥೆ.
ಕೈವ ಸ್ಟೋರಿ ಯಾಕೆ ನೋಡ್ಬೇಕು
1983ರಲ್ಲಿ ಬೆಂಗಳೂರಿನ ಕಪಾಲಿ ಚಿತ್ರಮಂದಿರದ ಪಕ್ಕದಲ್ಲಿ ಗಂಗಾರಾಮ್ ಬಿಲ್ಡಿಂಗ್ ದುರಂತ ನಡೆಯುತ್ತೆ. ಇದರಿಂದ ನೂರಾರು ಮಂದಿ ಸಾವನ್ನಪ್ಪುತ್ತಾರೆ. ಕಪಾಲಿ ಚಿತ್ರಮಂದಿರಕ್ಕೂ ಹಾನಿಯಾಗುತ್ತೆ. ಈ ದುರಂತ ನಡೆಯುವ ಕೆಲವೇ ದಿನಗಳ ಹಿಂದಷ್ಟೇ 'ಭಕ್ತ ಪ್ರಹ್ಲಾದ' ಸಿನಿಮಾ ಕೂಡ ರಿಲೀಸ್ ಆಗುತ್ತೆ. ಈ ಎರಡು ಪ್ರಮುಖ ಘಟನೆಗಳ ಮಧ್ಯೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಬಹುದಾ ಕೈವ ಮತ್ತು ಸಲ್ಮಾ ಪ್ರೇಮಕಥೆ ತೆರೆಮರೆಗೆ ಸರಿದು ಬಿಡುತ್ತೆ. ಅವರಿಬ್ಬರ ಬಾಳಲ್ಲಿ ಅಂದು ಏನಾಯ್ತು? ಅನ್ನೋದನ್ನೇ ಈ ಸಿನಿಮಾದಲ್ಲಿ ತೋರಿಸಲಾಗಿದೆ.
'ಕೈವ' ಪಾತ್ರಗಳು ಹೇಗಿದೆ?
'ಕೈವ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಧನ್ವೀರ್ ನಟಿಸಿದ್ದಾರೆ. ಇಲ್ಲಿ ಇವರ ಪಾತ್ರದ ಹೆಸರು ಕೈವ. ನಾಯಕಿ ಸಲ್ಮಾ ಪಾತ್ರದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಇಬ್ಬರೂ ತಮ್ಮ ಪಾತ್ರಗಳಿಗೆ ನ್ಯಾಯ ಕೊಟ್ಟಿದ್ದಾರೆ. ಇವರೊಂದಿಗೆ ರಘು ಶಿವಮೊಗ್ಗ, ಗಿರಿರಾಜ್, ದಿನಕರ್ ತೂಗುದೀಪ, ನಂದ ಗೋಪಾಲ್, ಉಗ್ರಂ ಮಂಜು ಪಾತ್ರಗಳು ಗಮನ ಸೆಳೆಯುತ್ತವೆ.
'ಕೈವ' ಪ್ಲಸ್ ಏನು?
ಇದೂವರೆಗೂ ನೋಡಿದ ಜಯತೀರ್ಥ ಸಿನಿಮಾಗಳಿಗೆ ಹೋಲಿಸಿದರೆ, ಇದೇ ಬೇರೆನೇ ಇದೆ. ಅಂಡರ್‌ವರ್ಲ್ಡ್ ಕಥೆಯನ್ನೂ ಇವರು ಟಚ್ ಮಾಡಬಲ್ಲರು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಕೈವ ಹಾಗೂ ಸಲ್ಮಾ ಪ್ರೇಮಕಥೆ ಜನರಿಗೆ ಇಷ್ಟ ಆಗುತ್ತಾ ಹೋಗುತ್ತೆ. ಇದರ ಮಧ್ಯೆ ತಿಗಳಪೇಟೆ, ಕರಗ, ಗಂಗಾರಮ್ ದುರಂತ, ಭಕ್ತ ಪ್ರಹ್ಲಾದ ಘಟನೆಗಳನ್ನು ಕಥೆಯಲ್ಲಿ ಸೇರಿಸಿದ್ದು ಒಳ್ಳೆಯ ಆಲೋಚನೆ ಅಂತಲೂ ಅನಿಸುತ್ತೆ. 80 ರ ದಶಕ, ಅದಕ್ಕೆ ತಕ್ಕಂತೆ ಸೆರೆ ಹಿಡಿದ ಕ್ಯಾಮರಾ ವರ್ಕ್ ಕೂಡ ಇಷ್ಟ ಆಗುತ್ತೆ.
'ಕೈವ' ಮೈನಸ್ ಏನು?
'ಕೈವ' ಪ್ರೇಮಕಥೆಗೆ ಭೂಗತಲೋಕದ ನಂಟು ಬೆಸೆದಿದ್ದು ನೋಡುವರಿಗೆ ಕೊಂಚ ಇರಿಸು ಮುರಿಸು ಆಗಬಹುದು. ಅಷ್ಟೊಂದು ಕ್ರೈಂ ಬೇಕಿತ್ತಾ? ಅನ್ನೋ ಪ್ರಶ್ನೆನೂ ಕೆಲವೊಮ್ಮೆ ಮೂಡುತ್ತೆ. ಮೊದಲಾರ್ಥ ಇನ್ನೊಂದಿಷ್ಟು ಸ್ವಲ್ಪ ಚುರುಕಾಗಿರಬೇಕಿತ್ತು ಅಂತಲೂ ಅನಿಸುತ್ತೆ. ಬಹುಶ: ಫ್ಯಾಮಿಲಿ ಆಡಿಯನ್ಸ್‌ಗೆ ಈ ಕೌರ್ಯ ಇಷ್ಟ ಆಗೋದು ಅನುಮಾನ.
ವಿಮರ್ಶೆ ಸಾರಾಂಶವೇನು?
'ಕೈವ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಒಂದೊಳ್ಳೆ ಪ್ರಯತ್ನವೇ. ಹಿಂದೂ-ಮುಸ್ಲಿಂ ನಡುವಿನ ಬಾಂದವ್ಯವೂ ಒಮ್ಮೆ ಪ್ರಮುಖವಾಗಿ ಕಾಣುತ್ತೆ. ಒಂದೊಳ್ಳೆ ಸುಂದರ ಪ್ರೇಮಕಥೆಯನ್ನು ನಿರೀಕ್ಷಿಸಬಹುದು. 1983ರ ಗಂಗರಾಮ್ ಕಟ್ಟಡ ದುರಂತವನ್ನು ಕಟ್ಟಿಕೊಡುತ್ತೆ. ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ ಮಿಸ್ ಮಾಡಬೇಡಿ.


Click it and Unblock the Notifications











