"ಕೆಜಿಎಫ್ ರೇಂಜ್‌ಗೆ ಮೈನಿಂಗ್ ಮಾಡಿಸಿ, ಮುಂಗಾರು ಮಳೆ ರೇಂಜ್‌ಗೆ ಮಳೆ ಬರಿಸಿದ್ರು ಭಟ್ರು"; ಟ್ವಿಟರ್‌ನಲ್ಲಿ ಹೇಗಿದೆ ರೆಸ್ಪಾನ್ಸ್?

ಯೋಗರಾಜ್ ಭಟ್ ನಿರ್ದೇಶನ. ಶಿವರಾಜ್‌ಕುಮಾರ್, ಪ್ರಭುದೇವ ಅಂತಹ ಕಾಂಬಿನೇಷನ್. ರಾಕ್‌ಲೈನ್‌ ವೆಂಕಟೇಶ್ ಅಂತ ಸ್ಟಾರ್ ನಿರ್ಮಾಪಕರು. ಇಂತಹದ್ದೊಂದು ತಂಡ ಇರಬೇಕಾದರೆ, 'ಕರಟಕ ದಮನಕ' ಸಿನಿಮಾ ಕುತೂಹಲ ಕೆರಳಿಸಿದೇ ಇದ್ದರೆ ಹೇಗೆ? ಬಿಡುಗಡೆಗೂ ಮುನ್ನ ರಿಲೀಸ್ ಆಗಿದ್ದ ಹಾಡುಗಳು, ಟೀಸರ್, ಟ್ರೈಲರ್ ಬೇಜಾನ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು.

ಅದರಲ್ಲೂ ಈ ಸಿನಿಮಾದ ಹೈಲೈಟ್ ಅಂದರೆ, ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಕಾಂಬಿನೇಷನ್. ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದು, ಮೊದಲ ದಿನವೇ ಜನರು ಈ ಕಾಂಬಿನೇಷನ್ ನೋಡುವುದಕ್ಕೆ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. ಇನ್ನು ವಿ ಹರಿಕೃಷ್ಣ ಮ್ಯೂಸಿಕ್, ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಈ ಸಿನಿಮಾಗಿದೆ.

Karataka Damanaka Twitter Review  How Audiences Reacts to Shivarajkumar   s Latest Film on Social Media

ಶಿವಣ್ಣ ಹಾಗೂ ಪ್ರಭುದೇವ ಹ್ಯೂಮರ್ಸ್ ಸೆನ್ಸ್ ಈ ಸಿನಿಮಾದಲ್ಲಿ ವರ್ಕ್‌ಔಟ್ ಆಗಿದೆಯಾ? ಯೋಗರಾಜ್ ಭಟ್ ಫಿಲಾಸಫಿ ಪ್ರೇಕ್ಷಕರಿಗೆ ಹಿಡಿಸಿತೇ? ಸಿನಿಮಾದ ಸಂದೇಶ ಪ್ರೇಕ್ಷಕರಿಗೆ ಮೆಚ್ಚುಗೆ ಬಂತೇ? ಈ ಎಲ್ಲಾ ಪ್ರಶ್ನೆಗಳಿಗೆ 'ಕರಟಕ ದಮನಕ ಸಿನಿಮಾ ನೋಡಿ ಬಂದ ಪ್ರೇಕ್ಷಕರೇ ಉತ್ತರ ಕೊಟ್ಟಿದ್ದಾರೆ. ಯಾರ ಆಕ್ಟಿಂಗ್ ಹೇಗಿದೆ? ಸಿನಿಮಾದಲ್ಲಿ ಇಷ್ಟಪಟ್ಟಿದ್ದನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಕೆಜಿಎಫ್ ರೇಂಜ್‌ಗೆ ಮೈನಿಂಗ್ ಮಾಡಿಸಿದ್ರು ಭಟ್ರು"

"ಕೆಜಿಎಫ್ ರೇಂಜ್‌ಗೆ ಮೈನಿಂಗ್ ಮಾಡಿಸಿ, ಮುಂಗಾರು ಮಳೆ ರೇಂಜ್‌ಗೆ ಮಳೆ ಬರಿಸಿದ್ರು ಭಟ್ರು. ರಿಯಲ್ ಗೋಲ್ಡ್ ಮತ್ತು ಡೈಮಂಡ್ ಅಂದ್ರೆ ಅದು ಊರು ಹಾಗೂ ನೀರು. ಒಂದೊಳ್ಳೆಯ ಕಾನ್ಸೆಪ್ಟ್ ಹಾಗೂ ಸ್ಕ್ರೀನ್ ಪ್ಲೇ ಎಂಗೇಜಿಂಗ್ ಆಗಿದೆ. ಶಿವಣ್ಣ ಹಾಗೂ ಪ್ರಭುದೇವ ಸೂಪರ್" ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

"ಪ್ರಭುದೇವ ಡ್ಯಾನ್ಸಿಂಗ್ ಸೂಪರ್"

"ಕರಟಕ ದಮನಕ ಸಿನಿಮಾ ನೋಡಿದೆ. ಉತ್ತರ ಕರ್ನಾಟಕ ಭಾಗದ ಕಥೆಯೊಂದಿಗೆ ನೀರು ಹಾಗೂ ಕುಟುಂಬದ ಬಗ್ಗೆ ಒಳ್ಳೆಯ ಸಾಮಾಜಿಕ ಸಂದೇಶ ನೀಡಲಾಗಿದೆ. ಪ್ರಭುದೇವ ಡ್ಯಾನ್ಸಿಂಗ್ ಬಗ್ಗೆ ವಿಶೇಷವಾಗಿ ಮಾತಾಡಲೇಬೇಕು. ಶಿವಣ್ಣ, ಯೋಗರಾಜ್ ಭಟ್ ಹಾಗೂ ಕಾಮಿಡಿ ಕಿಲಾಡಿಗಳು ಟೀಮ್‌ಗೆ ಚಪ್ಪಾಳೆ ತಟ್ಟಬೇಕು. ನನ್ನ ರೇಟಿಂಗ್ 4/5" ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

"ಉತ್ತರ ಕರ್ನಾಟಕ ಡೈಲಾಗ್ ಒಳ್ಳೆ ಕಿಕ್ ಕೊಡುತ್ತೆ"

"ಕರಟಕ ದಮನಕ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ. ಈ ಸಿನಿಮಾ ಪ್ರಭುದೇವ ಅವರಿಗೆ ಕಮ್‌ಬ್ಯಾಕ್ ಸಿನಿಮಾ. ಉತ್ತರ ಕರ್ನಾಟಕ ಡೈಲಾಗ್ ಒಳ್ಳೆ ಕಿಕ್ ಕೊಡುತ್ತೆ. ಹಾಗೇ ಉತ್ತರ ಕರ್ನಾಟಕದ ಹಾಡುಗಳು ದಕ್ಷಿಣ ಕರ್ನಾಟಕದವರಿಗೆ ಕನೆಕ್ಟ್ ಮಾಡಲ್ಲ. ರಂಗಾಯಣ ರಘು, ರವಿಶಂಕರ್ ಪಾತ್ರ 50/50. ಒಟ್ಟಾರೆ ಒಂದು ಬಾರಿ ಸಿನಿಮಾ ನೋಡಬಹುದು." ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಜೈ ಶಿವಣ್ಣ

"ಮಾಸ್ ಅಥವಾ ಕ್ಲಾಸ್.. ಯಾರೂ ಇವರ ಸ್ಕ್ರೀನ್ ಪ್ರೆಸೆನ್ಸ್ ಅನ್ನು ಮ್ಯಾಚ್ ಮಾಡುವುದಕ್ಕೆ ಆಗುವುದಿಲ್ಲ. ನಾನು ಇನ್ನೊಮ್ಮೆ ಹೇಳುತ್ತೇನೆ ಭಾರತೀಯ ಚಿತ್ರರಂಗದಲ್ಲಿ ಇವರ ಸ್ಕ್ರೀನ್ ಪ್ರೆಸೆನ್ಸ್ ಅನ್ನು ಮತ್ಯಾರೂ ಮ್ಯಾಚ್ ಮಾಡುವುದಕ್ಕೆ ಆಗುವುದಿಲ್ಲ. ಶಿವಣ್ಣ ಬಾಸ್" ಎಂದು ನೆಟ್ಟಿಗರೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಶಿವಣ್ಣ-ಪ್ರಭುದೇವ ಬೇರೆ ಲೆವೆಲ್ ಕಾಮಿಡಿ

"ಶಿವಣ್ಣ ಹಾಗೂ ಪ್ರಭುದೇವ ಅವರದ್ದು ಬೇರೆ ಲೆವೆಲ್ ಕಾಮಿಡಿ ಟೈಮಿಂಗ್. ಪ್ರಿಯಾ ಆನಂದ್ ಅವರನ್ನು ಬಹಳ ದಿನಗಳಾದ್ಮೇಲೆ ಸ್ಕ್ರೀನ್‌ನಲ್ಲಿ ನೋಡಿದ್ದು, ಯೋಗರಾಜ್ ಭಟ್ ಫಿಲಾಸಫಿ, ಹರಿಕೃಷ್ಣ ಮ್ಯೂಸಿಕ್ ಅದ್ಭುತವಾಗಿದೆ. ಸಿನಿಮಾ ಚೆನ್ನಾಗಿದೆ. ಪ್ರಚಾರ ಸರಿಯಾಗಿ ಮಾಡಿದರೆ, ಶಿವರಾತ್ರಿ ಭಜನೆ ಆಗೋದು ಗ್ಯಾರಂಟಿ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಸದ್ಯ 'ಕರಟಕ ದಮನಕ' ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದರ ಮೇಲೆ ಈ ಸಿನಿಮಾ ಭವಿಷ್ಯವನ್ನು ಲೆಕ್ಕ ಹಾಕಬಹುದು.

More from Filmibeat

English summary
Explore What is Audience Responses To Karataka Damanaka Kannada Movie On Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X