Max Review:ಮ್ಯಾಕ್ಸಿಮಂ ಆಕ್ಷನ್, ಮ್ಯಾಕ್ಸಿಮಂ ಡೈಲಾಗ್, ಮ್ಯಾಕ್ಸಿಮಂ ಮ್ಯಾನರಿಸಂ; ವರ್ಷದ ಕೊನೆಯ ವಿನ್ನರ್ ಕಿಚ್ಚ!

Rating:
3.5/5
Star Cast: Kichcha Sudeep, Varalaxmi Sarathkumar, Samyukta Hornad, Sukrutha Wagle, Sunil, Pramod Shetty,
Director: Vijay Karthikeyaa

ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಅದ್ಧೂರಿಯಾಗಿ ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆಯಿಂದಾನೇ 'ಮ್ಯಾಕ್ಸ್' ಸಿನಿಮಾದ ಅಬ್ಬರ ಶುರುವಾಗಿದೆ. ಮತ್ತೆ ಪೊಲೀಸ್ ಅಧಿಕಾರಿಯಾಗಿ ತೆರೆಮೇಲೆ ಕಿಚ್ಚನ ಎಂಟ್ರಿ ಆಗಿದೆ. ಆಕ್ಷನ್, ಮಾಸ್ ಸಿನಿಮಾದಲ್ಲಿ ಕಿಚ್ಚನನ್ನ ನೋಡಬೇಕು ಅಂದುಕೊಂಡಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ.

'ವಿಕ್ರಾಂತ್ ರೋಣ' ಸಿನಿಮಾದಲ್ಲೂ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ತೆರೆಕಂಡ ಬಳಿಕ ನಟಿಸಿದ 'ಮ್ಯಾಕ್ಸ್‌'ನಲ್ಲೂ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಮತ್ತದೇ ಪಾತ್ರದಲ್ಲಿ ಯಾಕೆ ಅನ್ನೋ ಅಳುಕು ಇತ್ತು. ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ಅದೆಲ್ಲವನ್ನೂ ಮರೆಯುತ್ತಾರೆ.

Kichcha Sudeep movie Max Kannada review and rating

'ಮ್ಯಾಕ್ಸ್' ಕಿಚ್ಚನ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಅದ್ಧೂರಿ ಮನರಂಜನೆ ಸಿಗೋದು ಗ್ಯಾರಂಟಿ. ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಏನೆಲ್ಲ ನಡೆಯುತ್ತೆ ಅನ್ನೋದನ್ನು ಥ್ರಿಲ್ಲಿಂಗ್ ಆಗಿ ತೋರಿಸಲಾಗಿದೆ. ಹಿಂದೆ ಮುಂದೆ ನೋಡದೇ ಇದೊಂದು ಪರ್ಫೆಕ್ಟ್ ಕಿಚ್ಚ ಸುದೀಪ್ ಸಿನಿಮಾ ಅನ್ನೋದನ್ನು ನಿಸ್ಸಂದೇಹವಾಗಿ ಹೇಳಬಹುದು. ಚಿಕ್ಕ ಪುಟ್ಟ ಕೊರತೆ ಇದ್ದರೂ ಸಿನಿಪ್ರೇಮಿಗಳಿಗೆ ಮ್ಯಾಕ್ಸಿಮಂ ಎಂಟರ್‌ಟೈನ್ಮೆಂಟ್ ಸಿಗೋದು ಗ್ಯಾರಂಟಿ. ಹಾಗಿದ್ದರೆ 'ಮ್ಯಾಕ್ಸ್' ಹೈಲೈಟ್ ಏನು? ಅನ್ನೋದನ್ನು ನೋಡೋಣ.

ಯಾರಿದು 'ಮ್ಯಾಕ್ಸ್'?

ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್. ತನ್ನ ವೃತ್ತಿ ಜೀವನದಲ್ಲಿ ಹೆಚ್ಚು ಬಾರಿ ಅಮಾನತಿನಲ್ಲೇ ಇದ್ದ ಪೊಲೀಸ್ ಅಧಿಕಾರಿ. ಇವರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ 'ಮ್ಯಾಕ್ಸ್' ಅಂತ ಕರೀತಾರೆ. ನಟೋರಿಯಸ್ ಗ್ಯಾಂಗ್‌ಗೂ 'ಮ್ಯಾಕ್ಸ್' ಅಂತಲೇ ಪರಿಚಯ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಬಹುದು. ಆದರೆ, 'ಮ್ಯಾಕ್ಸ್' ಅನ್ನೋ ಹೆಸರು ಕೇಳಿದರೆ ಎಷ್ಟೇ ಖತರ್‌ನಾಕ್ ಗ್ಯಾಂಗ್ ಇದ್ದರೂ ನಡುಗುತ್ತೆ. ಆ ಮಟ್ಟಿಗೆ ಭಯ ಹುಟ್ಟಿಸಿರುವ ಪೊಲೀಸ್ ಅಧಿಕಾರಿ.

Kichcha Sudeep movie Max Kannada review and rating

ಆ ರಾತ್ರಿ 'ಮ್ಯಾಕ್ಸ್' ಲೈಫ್‌ನಲ್ಲಿ ಏನಾಗುತ್ತೆ?

ಅಮಾನತಿನಲ್ಲಿದ್ದ ಪೊಲೀಸ್ ಅಧಿಕಾರಿ 'ಮ್ಯಾಕ್ಸ್' ಅಲಿಯಾಸ್ ಅರ್ಜುನ್ ಮಹಾಕ್ಷಯ್ ಹೊಸ ಸ್ಟೆಷನ್‌ಗೆ ವರ್ಗಾವಣೆಯಾಗುತ್ತೆ. ಆ ಊರಿಗೆ ಕಾಲಿಡುತ್ತಿದ್ದಂತೆ ಅಲ್ಲಿನ ನಟೋರಿಯಸ್ ಗ್ಯಾಂಗ್‌ನಿಂದ ಒಂದು ಅವಘಡ ನಡೆದು ಹೋಗುತ್ತೆ. ಮಾರನೇ ದಿನ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿದ್ದ ಮ್ಯಾಕ್ಸ್ ಹಿಂದಿನ ರಾತ್ರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಪ್ರಭಾವಿ ಮಂತ್ರಿಗಳ ಮಕ್ಕಳಿಬ್ಬರನ್ನು ಸ್ಟೇಷನ್‌ಗೆ ಹಾಕುತ್ತಾನೆ. ಆದರೆ, ಸ್ಟೇಷನ್ ಒಳಗೆ ಅವರಿಬ್ಬರು ಸಾವನ್ನಪ್ಪುತ್ತಾರೆ. ಅಲ್ಲಿಂದ ಮುಂದೆ 'ಮ್ಯಾಕ್ಸ್' ಈ ಕೇಸ್ ಅನ್ನು ಹೇಗೆ ತೆಗೆದುಕೊಂಡು ಹೋಗುತ್ತಾನೆ ಅನ್ನೋದು ಥ್ರಿಲ್.

'ಮ್ಯಾಕ್ಸ್' ವೇಗ.. ಮ್ಯಾಕ್ಸಿಮಂ ಮನರಂಜನೆ

ಜನರಿಗೆ ಮನರಂಜನೆಯೊಂದನ್ನೇ ಕೊಡಬೇಕು ಅಂತ ಕಿಚ್ಚ ಸುದೀಪ್ ಮೊದಲೇ ನಿರ್ಧರಿಸಿದ್ದ ಹಾಗಿದೆ. ಆಯ್ಕೆ ಮಾಡಿಕೊಂಡ ಕತೆ ಕೂಡ ಹಾಗೇ ಇದೆ. ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಎದುರಾಗಿದ್ದ ಅತೀ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಿರುತ್ತೆ. ಹೀಗಾಗಿ ಸ್ಕ್ರೀನ್ ಪ್ಲೇನಲ್ಲಿ ವೇಗವಿದೆ. ನೋಡ ನೋಡುತ್ತಲೇ ಫಸ್ಟ್ ಹಾಫ್ ಮುಗಿದು ಹೋಗುತ್ತೆ. ಟ್ವಿಸ್ಟ್ ಟರ್ನ್ ಅಂತ ತಲೆ ಕೆಡಿಸುವುದಕ್ಕೆ ಹೋಗಿಲ್ಲ. ಮ್ಯಾಕ್ಸಿಮಂ ಆಕ್ಷನ್, ಮ್ಯಾಕ್ಸಿಮಂ ಡೈಲಾಗ್, ಮ್ಯಾಕ್ಸಿಮಂ ಮ್ಯಾನರಿಸಂನಿಂದಲೇ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ ಆಗಿದೆ.

'ಮ್ಯಾಕ್ಸ್' ಮ್ಯಾನರಿಸಂ ಶಿಳ್ಳೆ ಬೀಳುತ್ತೆ

'ಮ್ಯಾಕ್ಸ್' ಅವತಾರದಲ್ಲಿ ಕಿಚ್ಚ ಸುದೀಪ್ ತಮ್ಮ ಪಾತ್ರವನ್ನು ತಿಂದು ಹಾಕಿದ್ದಾರೆ. ಸುದೀಪ್ ನಟನೆಗೆ ಫುಲ್ ಮಾರ್ಕ್ಸ್. ಸೈಲ್, ಮ್ಯಾನರಿಸಂಗೆ ಥಿಯೇಟರ್‌ನಲ್ಲಿ ಶಿಳ್ಳೆಗಳು ಬೀಳುತ್ತವೆ. ಕಿಚ್ಚನಿಗಾಗೇ ಬರೆದ ಡೈಲಾಗ್‌ಗಳಲ್ಲಿ ಧಮ್ ಇದೆ. ಆಗಾಗ ಬಂದು ಹೋಗುವ ಗದ್ಯ ರೂಪದ ಡೈಲಾಗ್‌ಗಳು ಪಾತ್ರದ ತೂಕವನ್ನು ಹೆಚ್ಚಿಸಿದೆ. ಈ ಬಾರಿ ಖರ್ಚಿಲ್ಲದೆ ಥಿಯೇಟರ್‌ನಲ್ಲಿ ಕಿಚ್ಚು ಹಾಯಿಸಿದ್ದಾರೆ ಕಿಚ್ಚ ಅಂತ ನಿಸ್ಸಂದೇಹವಾಗಿ ಹೇಳಬಹುದು.

ಯಾರ್‍ಯಾರ ನಟನೆ ಹೇಗಿದೆ?

ಕಿಚ್ಚ ಸುದೀಪ್ ಜೊತೆಗೆ ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ನಟಿಸುವವರು ಗಮನ ಸೆಳೆಯುತ್ತಾರೆ. ನೆಗೆಟಿವ್ ಶೇಡ್‌ನಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಕಿಚ್ಚನಿಗೆ ಟಕ್ಕರ್ ಕೊಟ್ಟಿದ್ದಾರೆ. ತೆಲುಗು ನಟ ಸುನಿಲ್ ಇಲ್ಲಿ ಖಳನಾಯಕ. ಹಾಗೇ ಉಗ್ರಂ ಮಂಜು ಸಿನಿಮಾದ ಉದ್ದಕ್ಕೂ ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಾರೆ. ಸಂಯುಕ್ತ ಹೊರನಾಡು, ಸುಕ್ರುತಾ ವಾಗ್ಲೆ ಇಷ್ಟ ಆಗುತ್ತಾರೆ. ಹೆಡ್ ಕಾನ್ಸ್‌ಟೆಬಲ್ ಪಾತ್ರದಲ್ಲಿ ತಮಿಳು ನಟ ಇಳವರಸು ನಟನೆ ಚೆನ್ನಾಗಿದೆ.

'ಮ್ಯಾಕ್ಸ್' ಪ್ಲಸ್ ಏನು?

ಕಿಚ್ಚ ಸುದೀಪ್ ಅವರನ್ನು 'ಮ್ಯಾಕ್ಸ್' ಅವತಾರದಲ್ಲಿ ನೋಡುವುದಕ್ಕೆ ಸಿನಿಮಾ ನೋಡಬೇಕು. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಹೈಲೈಟ್. ವಿಜಯ್ ಕಾರ್ತಿಕೇಯ ನಿರ್ದೇಶಕ ಕ್ವಿಕ್ ಆಗಿದೆ. ಸ್ಕ್ರೀನ್ ಪ್ಲೇಯನ್ನು ಇನ್ನೊಂದಿಷ್ಟು ಪಾಲಿಶ್ ಮಾಡಿದ್ದರೆ ಬಾಕ್ಸಾಫೀಸ್‌ನಲ್ಲಿ ಮ್ಯಾಕ್ಸಿಮಂ ದೋಚಬಹುದಿತ್ತು. ಇನ್ನು ಶೇಖರ್ ಚಂದ್ರ ಕ್ಯಾಮರಾ ವರ್ಕ್ ಕೂಡ ನೀಟಾಗಿದೆ.

ಮೈನಸ್ ಏನು?

ಆಕ್ಷನ್‌, ಥ್ರಿಲ್ ಜೊತೆಗೆ ಸಿನಿಮಾದಲ್ಲಿ ಕಾಮಿಡಿ ಎಲಿಮೆಂಟ್ಸ್ ಇರಬೇಕಿತ್ತು. ಹಾಸ್ಯ ನಟರಾದ ಮಿತ್ರ, ಗೋವಿಂದೇ ಗೌಡ, ವಿಜಯ್ ಚೆಂಡೂರ್ ಅಂತ ಹಾಸ್ಯ ಕಲಾವಿದರನ್ನೂ ಗಂಭೀರ ಪಾತ್ರಗಳಿಗೆ ಬಳಸಿಕೊಳ್ಳಲಾಗಿದೆ. ಇವರಿಂದ ಹಾಸ್ಯ ಹೊನಲು ಹರಿಸಿದ್ದರೆ ಡಬಲ್ ಎಂಟರ್‌ಟೈನ್ಮೆಂಟ್ ಸಿಗುತ್ತಿತ್ತು. ಹಾಗಂತ ಇವರೆಲ್ಲರೂ ಗಂಭೀರ ಪಾತ್ರಗಳಲ್ಲೂ ಉತ್ತಮವಾಗಿಯೇ ಅಭಿನಯಿಸಿದ್ದಾರೆ. ಇಡೀ ಸಿನಿಮಾ ನೋಡುವ ಹೊತ್ತಿಗೆ 'ಕೈದಿ','ಕ್ರ್ಯಾಕ್' ಶೈಲಿಯ ಸಿನಿಮಾ ಅಂತಲೂ ಅನಿಸಬಹುದು. ಇಷ್ಟು ಬಿಟ್ಟರೆ ಉಳಿದಂತೆ 'ಮ್ಯಾಕ್ಸ್'ನಿಂದ ಮಾಕ್ಸಿಮಂ ಮನರಂಜನೆ ನಿರೀಕ್ಷೆ ಮಾಡಬಹುದು. ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಹಬ್ಬವೇ ಸರಿ.

More from Filmibeat

English summary
Kichcha Sudeep movie Max Kannada review and rating;
Read more about: sudeep review filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X